ಡಾರ್ಜಿಲಿಂಗ್ : ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯಕ್ಕಾಗಿ ನಡೆಯುತ್ತಿರುವ ಆಂದೋಲನವು ಹಿಂಸೆಗೆ ತಿರುಗಿದ್ದು ಇಂದು ಶನಿವಾರ ಈ ಹಿಂಸೆಗೆ ಇಂಡಿಯನ್ ರಿಸರ್ವ್ ಬೆಟಾಲಿಯನ್ (ಐಆರ್‌ಬಿ)ನ ಸಹಾಯಕ ಕಮಾಂಡೆಂಟ್ ಓರ್ವರು ಬಲಿಯಾಗಿದ್ದಾರೆ.
ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಕಾಲದ ಬಂದ್ ಚಳವಳಿ ಆರನೇ ದಿನ ತಲುಪಿರುವಂತೆಯೇ ಇಂದ ಶನಿವಾರ ಪ್ರತಿಭಟನಕಾರರೊಂದಿಗಿನ ಸಂಘರ್ಷದಲ್ಲಿ ಐಆರ್‌ಬಿ ಸಹಾಯಕ ಕಮಾಂಡೆಂಟ್ ಕಿರಣ್ ತಮಾಂಗ್ ಅವರರು ಹರಿತವಾದ ‘ಖುಕ್ರಿ’ ಸಾಧನದಿಂದ ಗಂಭೀರವಾಗಿ ಗಾಯಗೊಂಡರು. ಅವರನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ಇದೇ ವೇಳೆ ಜಿಜೆಎಂ ಮೆರವಣಿಗೆಯ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ ಪರಿಣಾಮವಾಗಿ ತಮ್ಮ ಪಕ್ಷದ ಇಬ್ಬರು ಕಾರ್ಯಕರ್ತರು ಕೊಲ್ಲಲ್ಪಟ್ಟರು ಎಂದು ಜಿಜೆಎಂ ಸಹಾಯಕ ಪ್ರಧಾನ ಕಾರ್ಯದರ್ಶಿ ಬಿನಯ್ ತಮಾಂಗ್ ಹೇಳಿದ್ದಾರೆ.
ಆದರೆ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಅನುಜ್ ಶರ್ಮಾ ಅವರು ಈ ಆರೋಪವನ್ನು ನಿರಾಕರಿಸಿದ್ದು ಪೊಲೀಸರು ಗೋಲಿ ಮಾಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜಿಜೆಎಂ ಕಾರ್ಯಕರ್ತರೇ ಗುಂಡು ಹಾರಿಸಿದವರು ಎಂದವರು ಮರು ಆರೋಪ ಮಾಡಿದ್ದಾರೆ.
ಇದೇ ವೇ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಜಿಜೆಎಂ ನ ಪುಂಡಾಟಿಕೆ, ಗೂಂಡಾಗಿರಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದರಲ್ಲಿ ಆಳವಾದ ಸಂಚು ಇದೆ ಎಂದು ಆರೋಪಿಸಿದ್ದಾರೆ. ಜಿಜೆಎಂ ಗೆ ಈಶಾನ್ಯ ಬಂಡುಕೋರ ಸಮೂಹಗಳ ನಂಟಿದೆ ಎಂದವರು ಹೇಳಿದ್ದಾರೆ.