Advertisement

ಗಿನ್ನೆಸ್ ದಾಖಲೆ ಬರೆದ ಮೊಲ ಕಳ್ಳತನ : ಹುಡುಕಿ ಕೊಟ್ಟವರಿಗೆ ಸಿಗುತ್ತೆ 2 ಲಕ್ಷ ಬಹುಮಾನ!

03:56 PM Apr 16, 2021 | Team Udayavani |

ನವದೆಹಲಿ : ಜಗತ್ತಿನ ಅತ್ಯಂತ ದೊಡ್ಡ ಮೊಲ ಎಂದು ಹೆಸರು ಗಳಿಸಿ 2010ರಲ್ಲಿ ಗಿನ್ನೆಸ್  ದಾಖಲೆ ಪುಸ್ತಕದಲ್ಲಿ ತನ್ನ ಹೆಸರನ್ನು ಗಿಟ್ಟಿಸಿಕೊಂಡಿದ್ದ ಡೇರಿಯಸ್ ಕಳವಾಗಿದೆ. ಈ ಮೊಲವನ್ನು ಹುಡುಕಿ ಕೊಟ್ಟವರಿಗೆ ಎರಡು ಲಕ್ಷ ನಗದು ಬಹುಮಾನ ನೀಡುವುದಾಗಿ ಮೊಲದ ಮಾಲೀಕರು ತಿಳಿಸಿದ್ದಾರೆ.

Advertisement

ಇಂಗ್ಲೆಂಡ್‌ ನ ವೋರ್ಸೆಸ್ಟರ್‌ ಶೈರ್ ಪ್ರದೇಶದ  ಆನೆಟ್ ಎಡ್ವರ್ಡ್ಸ್ ಎಂಬುವವರ ಮನೆಯಿಂದ ಮೊಲವು ಕಳ್ಳತನವಾಗಿದೆ ಎಂದು ಅಲ್ಲಿನ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿರುವ ಮೊಲದ ಮಾಲೀಕರಾದ ಆನೆಟ್ ಎಡ್ವರ್ಡ್ಸ್ ಅವರು, ನಮ್ಮ ಮೊಲವನ್ನು ನಮಗೆ ಹುಡುಕಿ ಕೊಟ್ಟವರಿಗೆ ಎರಡು ಲಕ್ಷ ಬಹುಮಾನವನ್ನು ನೀಡಲಾಗುತ್ತದೆ ಎಂದಿದ್ದಾರೆ. ಇನ್ನು ಪೊಲೀಸರು ಹುಡುಕಿಕೊಟ್ಟರೆ ಅವರಿಗೆ ಒಂದು ಲಕ್ಷ ನಗದು ಬಹುಮಾನವನ್ನು ನೀಡಲಾಗುತ್ತದೆ ಎಂದು ಮನವಿ ಮಾಡಿದ್ದಾರೆ.

Advertisement

ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಆನೆಟ್ ಎಡ್ವರ್ಡ್ಸ್, ದಯಮಾಡಿ ನಮ್ಮ ಮೊಲವನ್ನು ವಾಪಸ್ಸುಕೊಡಿ. ಇದು ದುಃಖಕರವಾದ ದಿನ, ಗಿನ್ನೆಸ್ ದಾಖಲೆ ಬರೆದ ಮೊಲವು ತನ್ನ ಮನೆಯಿಂದ ಕಳ್ಳತನವಾಗಿದೆ. ಡೇರಿಯಸ್ ಈಗ ಗರ್ಭಿಣಿಯಾಗಿದೆ. ಆದ್ದರಿಂದ ದಯವಿಟ್ಟು ಅದನ್ನು ವಾಪಸ್ಸು ಕೊಡಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next