Advertisement

ಕನೆಕ್ಟಿಕಟ್‌ ಓಪನ್‌ : ಗಾವ್ರಿಲೋವಾಗೆ ಪ್ರಶಸ್ತಿ

10:35 AM Aug 28, 2017 | Karthik A |

ನ್ಯೂಯಾರ್ಕ್‌: ದ್ವಿತೀಯ ಶ್ರೇಯಾಂಕದ ಡೊಮಿನಿಕಾ ಸಿಬುಲ್ಕೋವಾ ಅವರನ್ನು ಮೂರು ಸೆಟ್‌ಗಳ ಕಠಿನ ಹೋರಾಟದಲ್ಲಿ ಸೋಲಿಸಿದ ಆಸ್ಟ್ರೇಲಿಯದ ದರಿಯಾ ಗಾವ್ರಿಲೋವಾ ಅವರು ಕನೆಕ್ಟಿಕಟ್‌ ಓಪನ್‌ ಟೆನಿಸ್‌ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದು ಗಾವ್ರಿಲೋವಾ ಅವರ ಚೊಚ್ಚಲ ಡಬ್ಲ್ಯುಟಿಎ ಪ್ರಶಸ್ತಿಯಾಗಿದೆ.

Advertisement

ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಮತ್ತು ಹಾಲಿ ಚಾಂಪಿಯನ್‌ ಆಗಿದ್ದ ಅಗ್ನೀಸ್ಕಾ ರಾದ್ವಂಸ್ಕಾ ಅವರನ್ನು ಉರುಳಿಸಿದ್ದ 23ರ ಹರೆಯದ ಗಾವ್ರಿಲೋವಾ ಮತ್ತೆ ಭರ್ಜರಿ ಆಟವಾಡಿ 4-6, 6-3, 6-4 ಸೆಟ್‌ಗಳಿಂದ ಸಿಬುಲ್ಕೋವಾ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದ ಸಂಭ್ರಮ ಆಚರಿಸಿದರು. ಸಿಬುಲ್ಕೋವಾ ಅವರಿಗೆ ತನ್ನ ಬಾಳ್ವೆಯ 9ನೇ ಪ್ರಶಸ್ತಿ ಗೆಲ್ಲುವ ಅವಕಾಶ ನಿರಾಕರಿಸಿದ ವಿಶ್ವದ 26ನೇ ರ್‍ಯಾಂಕಿನ ಗಾವ್ರಿಲೋವಾ ಸೋಮವಾರದಿಂದ ಆರಂಭವಾಗುವ ವರ್ಷದ ಕೊನೆಯ ಗ್ರ್ಯಾನ್‌ ಸ್ಲಾಮ್‌ ಯುಎಸ್‌ ಓಪನ್‌ಗೆ ಉತ್ತಮ ರೀತಿಯಲ್ಲಿ ಸಿದ್ಧಗೊಂಡರು.

ಯುಎಸ್‌ ಓಪನ್‌ನಲ್ಲಿ ಅಮೆರಿಕದ ಅರ್ಹತಾ ಆಟಗಾರ್ತಿ ಅಲೀ ಕಿಕ್‌ ಜತೆ ತನ್ನ ಹೋರಾಟ ಆರಂಭಿಸಲಿರುವ ಗಾವ್ರಿಲೋವಾ ಮೂರನೇ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ಅವರನ್ನು ಎದುರಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next