Advertisement

ಸ್ಥಳೀಯರ ಒಪ್ಪಿಗೆ ಮೇರೆಗೆ ದರ್ಗಾ ತೆರವು : ಸಿಎಂ ಬೊಮ್ಮಾಯಿ

11:24 PM Dec 21, 2022 | Team Udayavani |

ಸುವರ್ಣ ವಿಧಾನಸೌಧ : ಹುಬ್ಬಳ್ಳಿ- ಧಾರವಾಡ ನಡುವಿನ ಭೈರಿದೇವರಕೊಪ್ಪದ ಬಳಿ ಹೆದ್ದಾರಿಯಲ್ಲಿರುವ ದರ್ಗಾವನ್ನು ರಸ್ತೆ (ಬಿಆರ್‌ಟಿಎಸ್‌) ಅಭಿವೃದ್ಧಿ ಗಾಗಿ ಸ್ಥಳೀಯ ಒಪ್ಪಿಗೆ ಪಡೆದು ಸ್ಥಳಾಂತರಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಅಬ್ಬಯ್ಯ ಪ್ರಸಾದ್‌, ಚುನಾವಣೆ ಸಂದರ್ಭದಲ್ಲಿ ಇಂತಹ ವಿಚಾರ ಮುನ್ನೆಲೆಗೆ ಬರುತ್ತಿದೆ. ದರ್ಗಾ ತೆರವು ಮಾಡುವ ವಿಷಯದಲ್ಲಿ ಕೋರ್ಟ್‌ ತಡೆಯಾಜ್ಞೆ ತೆರವು ಮಾಡಿದ್ದರಿಂದ ಏಕಾಏಕಿ 144 ಸೆಕ್ಷನ್‌ ಹಾಕಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದರಿಂದ ಅಶಾಂತಿ ಸೃಷ್ಟಿ ಮಾಡಿದಂತಾಗುತ್ತದೆ, ಸರ್ಕಾರಕ್ಕೆ ಯಾವ ಒತ್ತಡ ಇದೆಯೋ ಗೊತ್ತಿಲ್ಲ ಎಂದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಉಪ ನಾಯಕ ಯು.ಟಿ.ಖಾದರ್‌, ದರ್ಗಾವನ್ನು ಮುಟ್ಟಬೇಡಿ, ರಸ್ತೆಗೆ ಅಡಚಣೆಯಾಗುವುದಾದರೆ ಎದುರಿನ ಜಾಗವನ್ನು ಸ್ವಾಧೀನಪಡಿಸಿಕೊಂಡು ಅಲ್ಲಿ ರಸ್ತೆ ಮಾಡಿ ಎಂದು ಸಲಹೆ ನೀಡಿದರು.

ಆ ದರ್ಗಾ ಸರ್ವಧರ್ಮ ಸಮನ್ವಯ ಸ್ಥಳ. ಅನೇಕ ವರ್ಷಗಳಿಂದಲೂ ಅಲ್ಲಿದೆ. ಅದನ್ನು ತೆರವು ಮಾಡುವುದರಿಂದ ಉದ್ವಿಗ್ನತೆ ಉಂಟಾಗುತ್ತದೆ, ದ್ವೇಷಕ್ಕೆ ಎಡೆಮಾಡಿಕೊಟ್ಟಂತಾಗುತ್ತದೆ. ಹೀಗಾಗಿ ಮಂಗಳವಾರ ರಾತ್ರಿ ಸಿಎಂಗೆ ಕರೆ ಮಾಡಿ ತೆರವು ಮಾಡದಂತೆ ಮನವಿ ಮಾಡಿದ್ದೆ ಎಂದರು.

ಬಿಜೆಪಿಯ ಅರವಿಂದ ಬೆಲ್ಲದ್‌, ಬಿಆರ್‌ಟಿಎಸ್‌ಗಾಗಿ 13 ಗುಡಿ, ಒಂದು ಚರ್ಚ್‌ ತೆರವುಗೊಳಿಸಲಾಗಿದೆ. ಇದನ್ನು ತೆಗೆಯಬಾರದೆಂದರೆ ಹೇಗೆ? ಎಲ್ಲರ ಭಾವನೆಯೂ ಒಂದೆ. ಅಲ್ಲಿ ರಸ್ತೆ ಸುರಕ್ಷಿತವಾಗಿಲ್ಲ, ತೆರವು ಆಗಲೇ ಬೇಕು. ದರ್ಗಾದವರೂ ಸಹ ತೆರವು ಮಾಡಲು ಒಪ್ಪಿದ್ದಾರೆ. ಕಾಂಗ್ರೆಸ್‌ ಮಾತ್ರ ಓಟ್‌ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next