Advertisement
ಭಸ್ಮಾಸುರ ಮೋಹಿನಿಯಲ್ಲಿ ಈಶ್ವರನಾಗಿ ತೀರ್ಥಳ್ಳಿ ಗೋಪಾಲ ಆಚಾರಿಯವರ ತಾಂಡವ ನಾಟ್ಯ ಆಕರ್ಷಣೀಯವಾಗಿತ್ತು. ಪಾರ್ವತಿಯಾಗಿ ಮಾರುತಿ ಬೈಲ್‌ಗದ್ದೆ ಪಾತ್ರಕ್ಕೆ ಜೀವತುಂಬಿದರು. ಭಸ್ಮಾಸುರನಾಗಿ ಅಪ್ಪನ ನೆನಪು ಬರುವಂತೆ ಮಾಡಿದ ಚಿಟ್ಟಾಣಿ ನರಸಿಂಹ ಹೆಗಡೆಯವರು, ಮೋಹಿನಿಯನ್ನು ವರ್ಣಿಸುವಾಗ ಸಭ್ಯ ಸಭಾಸದರೆದುರು ಅತಿರೇಕವಾಗುವುದನ್ನು ಗಮನಿಸಿದ ಧಾರೇಶ್ವರರು ಮುಂದಿನ ಪದ್ಯ ಎತ್ತುಗಡೆ ಮಾಡಿದರು.Related Articles
Advertisement
ಕಬಂಧ ಮೋಕ್ಷದಲ್ಲಿ ವಿಶ್ವಾವಸುವಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಸ್ಥೂಲಶಿರಮುನಿಯಾಗಿ ಲೋಕೇಶ್‌ರವರು ಬಾಯಿತಪ್ಪಿನಿಂದ ಲಕ್ಷ್ಮಣ ಎನ್ನುವ ಬದಲಿಗೆ ಶ್ರೀರಾಮನ ಕತ್ತಿಯಿಂದ ಕಡಿದಾಗ ಎಂದು ತಪ್ಪೆಸಗಿದರು. ದೇವನಾರಿ ಹಾಗೂ ಲಕ್ಷ್ಮಣನಾಗಿ ಮಾರುತಿ ಬೆ„ಲ್ಗದ್ದೆ, ಹಂಸನಾಗಿ ಕಾಸರ್‌ಕೋಡ್, ಶ್ರೀರಾಮನಾಗಿ ಅಶೋಕ ಭಟ್ ಸಿದ್ದಾಪುರ, ವಿಶ್ವಾವಸು ರಾಕ್ಷಸರೂಪವಾಗಿ ದಿನೇಶ್‌ಕನ್ನಾರು, ಕಬಂಧನಾಗಿ ನಾಗೇಶ್ ಕುಳಿಮನೆ ಮತ್ತು ದೇವೇಂದ್ರನಾಗಿ ಶಶಾಂಕ ಚೆನ್ನಾಗಿ ನಿರ್ವಹಿಸಿದರು.
ಖಾಂಡವ ದಹನದಲ್ಲಿ ಮೂಲಕಥೆ ವ್ಯಾಸಭಾರತದಲ್ಲಿರುವಂತೆ ಇದೆಲ್ಲವೂ ಮೊದಲೇ ಸಿಕ್ಕಿರುತ್ತದೆ ಎಂದು ತೋರಿಸಲು ಧಾರೇಶ್ವರರ ನಿರ್ದೇಶನದ ಜವಾಬ್ದಾರಿಯನ್ನು ಗುರುತಿಸುತ್ತದೆ. ಶ್ರೀಕೃಷ್ಣನಾಗಿ ಅಶೋಕ ಭಟ್ ಸಿದ್ದಾಪುರ, ಅರ್ಜುನನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಕಾಳಿಂದಿಯಾಗಿ ನಿಲ್ಕೋಡು, ಅಗ್ನಿಬ್ರಾಹ್ಮಣನಾಗಿ ಕಾಸರ್‌ಕೋಡ್, ನಾಗಿಣಿಯಾಗಿ ಮಾರುತಿ ಬೆ„ಲ್ಗದ್ದೆ, ಅಶ್ವಸೇನನಾಗಿ ನಾಗೇಶ್ ಕುಳಿಮನೆ, ಮಯಾಸುರನಾಗಿ ದಿನೇಶ್ ಕನ್ನಾರು, ದೇವೇಂದ್ರನಾಗಿ ಲೋಕೇಶ್‌ರವರು ಪ್ರಸಂಗಕ್ಕೆ ಚ್ಯುತಿಬಾರದಂತೆ ನಿರ್ವಹಿಸಿದರು.
ಗರುಡೋದ್ಭವದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆಯವರು ಗರುಡನಾಗಿ ಮನಸೆಳೆದರು. ಕದ್ರುವಾಗಿ ಮಾರುತಿಬೆ„ಲ್ಗದ್ದೆ, ವಿನುತೆಯಾಗಿ ನೀಲ್ಕೋಡು ಕಶ್ಯಪರಾಗಿ ವಿಶೇಷ ಆಹ್ವಾನಿತರಾದ ಶ್ರೀರಮಣಾಚಾರ್, ವಿಷ್ಣುವಾಗಿ ಇನ್ನೋರ್ವ ವಿಶೇಷ ಆಹ್ವಾನಿತರಾದ ವಾಸುದೇವ ರಂಗ ಭಟ್ ಕಥೆಯ ವೈಶಿಷ್ಟವನ್ನು ಎತ್ತಿ ಹಿಡಿದರು.
ರಾವಣ ವಧೆಯಲ್ಲಿ ರಾವಣ- ಮಂಡೋದರಿಯ ಸಂಭಾಷಣೆಯು ಮಂತ್ರಮುಗ್ಧರನ್ನಾಗಿಸಿತು. ತಾಳಮದ್ದಲೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದ ಉಜಿರೆ ಅಶೋಕ ಭಟ್‌ರವರು ರಾಮನ ಪಾತ್ರದಲ್ಲಿ ಮಿಂಚಿದರು.
ವಿ. ರಾಘವೇಂದ್ರ ಉಡುಪ, ನೇರಳಕಟ್ಟೆ