Advertisement

ದರ್ಬೆ ಅವೈಜ್ಞಾನಿಕ ವೃತ್ತ: ಸರ್ಕಸ್‌ಗೆ ಸಿಗುವುದೇ ಮುಕ್ತಿ?

12:56 PM Jul 12, 2018 | |

ನಗರ : ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಪುತ್ತೂರು ನಗರದ ವಿವಿಧ ಸರ್ಕಲ್‌ಗ‌ಳು ಸುಗಮ ಸಂಚಾರದ ದೃಷ್ಟಿಯಿಂದ ಸವಾಲಾಗಿವೆ. ಕೆಲವು ವೃತ್ತಗಳ ಅಭಿವೃದ್ಧಿಗೆ ನಗರಸಭೆ ಮುಂದಾಗಿದ್ದರೂ ಪ್ರಕ್ರಿಯೆ ಮಾತ್ರ ನಿಧಾನಗತಿಯಲ್ಲಿದೆ. ಜಿಲ್ಲಾ ಕೇಂದ್ರವಾಗಿ ಪುತ್ತೂರು ನಗರದ ರಸ್ತೆಗಳಲ್ಲಿ 10ಕ್ಕೂ ಮಿಕ್ಕಿ ಅವೈಜ್ಞಾನಿಕ ಸರ್ಕಲ್‌ ಗಳು ಇವೆ. ಇದರಲ್ಲಿ ದರ್ಬೆ ಬೈಪಾಸ್‌ನ ಪತ್ರಾವೋ ವೃತ್ತ, ಬೊಳುವಾರು – ಉಪ್ಪಿನಂಗಡಿ ತಿರುವಿನ ವೃತ್ತದ ಅಭಿವೃದ್ಧಿ, ಮಂಜಲ್ಪಡ್ಪು ಬೈಪಾಸ್‌ ವೃತ್ತ ನಿರ್ಮಾಣ, ಬೈಪಾಸ್‌ನ ಬಪ್ಪಳಿಗೆ ಜಂಕ್ಷನ್‌ನಲ್ಲಿ ವೃತ್ತ ನಿರ್ಮಾಣ, ಮುಕ್ರಂಪಾಡಿ – ಮೊಟ್ಟೆತ್ತಡ್ಕ ರಸ್ತೆ ಬಳಿ ವೃತ್ತ ನಿರ್ಮಾಣಕ್ಕೆ ಒಟ್ಟು 30 ಲಕ್ಷ ರೂ. ಗಳ ಯೋಜನೆಯನ್ನು ನಗರಸಭೆ ಆಡಳಿತ ರೂಪಿಸಿದೆ. ಆದರೆ ಟೆಂಡರ್‌ ಪ್ರಕ್ರಿಯೆ ಅಂತಿಮವಾಗಬೇಕಷ್ಟೆ.

Advertisement

ಬೈಪಾಸ್‌ ಪತ್ರಾವೋ ಸರ್ಕಲ್‌ ಆದ್ಯತೆ
ಪುತ್ತೂರು – ಸುಳ್ಯ ಹೆದ್ದಾರಿಯ ಸುಳ್ಯ ಕಡೆಯಿಂದ ಪುತ್ತೂರು ನಗರಕ್ಕೆ ಬೈಪಾಸ್‌ನ ಪತ್ರಾವೋ ಸರ್ಕಲ್‌ನಲ್ಲಿ ವಾಹನ ಸಂಚಾರ ನಿಜಕ್ಕೂ ಅಪಾಯಕಾರಿ. ಯಾರು ಯಾವ ಕಡೆಯಿಂದ ಮುಖ್ಯ ರಸ್ತೆಗೆ ಬರುತ್ತಾರೆ ಎಂದು ಊಹಿಸುವುದೇ ಕಷ್ಟ. ಕಾರಣ, ಈ ವೃತ್ತ ಅವೈಜ್ಞಾನಿಕವಾಗಿದೆ. ಇಲ್ಲಿ ಯಾವುದೇ ಸೂಚನ ಫಲಕವಿಲ್ಲ. ತೀವ್ರ ಪ್ರಮಾಣದ ಅಪಾಯವನ್ನು ಮನಗಂಡು ತಾತ್ಕಾಲಿಕ ತಡೆಗಳನ್ನು ಅಳವಡಿಸಿ ಸ್ವಲ್ಪ ಮಟ್ಟಿಗೆ ವ್ಯವಸ್ಥೆ ಮಾಡಿದೆ.

ಈ ವೃತ್ತವನ್ನು ವೈಜ್ಞಾನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಸಾರ್ವಜನಿಕ ಒತ್ತಾಯದ ಮೇರೆಗೆ ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶಾಸಕರ ಸೂಚನೆಯ ಮೇರೆಗೆ ಸರ್ಕಲ್‌ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ನಗರಾಭಿವೃದ್ಧಿ ಪ್ರಾಧಿಕಾರ ತಿಳಿಸಿತ್ತು. ಆದರೆ ನಗರಸಭೆ ಆಡಳಿತ ತಾವೇ ವೃತ್ತದ ಅಭಿವೃದ್ಧಿ ಮಾಡುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ
ಪುಡಾ ಹಿಂದೆ ಸರಿದಿತ್ತು. ಈ ಪ್ರಕ್ರಿಯೆ ನಡೆದೇ ಒಂದು ವರ್ಷ ಪೂರೈಸಿದೆ.

 ಆ. 10ಕ್ಕೆ ಟೆಂಡರ್‌
ನಗರಸಭಾ ವ್ಯಾಪ್ತಿಯ ಕೆಲವು ವೃತ್ತಗಳ ಅಭಿವೃದ್ಧಿ ಹಾಗೂ ಇನ್ನು ಕೆಲವು ಹೊಸ ವೃತ್ತ ನಿರ್ಮಾಣದ ದೃಷ್ಟಿಯಿಂದ 30 ಲಕ್ಷ ರೂ. ಅನುದಾನ ಇರಿಸಲಾಗಿದೆ. ಟೆಂಡರ್‌ಗೆ ಸಂಬಂಧಪಟ್ಟಂತೆ ಆ. 10ರ ತನಕ ಅವಕಾಶ ನೀಡಲಾಗಿದ್ದು, ಅಂದು ಟೆಂಡರ್‌ ಓಪನ್‌ ಆಗಲಿದೆ. ಅನಂತರ ತ್ವರಿತ ಕೆಲಸಗಳನ್ನು ನಡೆಸಲಾಗುವುದು.
– ರೂಪಾ ಟಿ. ಶೆಟ್ಟಿ ಪೌರಾಯುಕ್ತರು, ನಗರಸಭೆ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next