ಧಾರವಾಡ: ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್‌ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ| ಡಿ.ಕೆ. ಕುಲಕರ್ಣಿ ಅವರು ಬರೆದ “ವಿಶೇಷಕಾಂಕ್ರೀಟ್‌ಗಳ ಸಂಶೋಧನಾ ಬೆಳಕು’ ಪುಸ್ತಕವನ್ನು ಶ್ರೀಕ್ಷೇತ್ರ ಧರ್ಮಸ್ಥಳದಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದರು.
ಸತ್ತೂರಿನ ವನಶ್ರೀ ನಗರ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಪುಸ್ತಕ ಬಿಡುಗಡೆಮಾಡಿ ಶುಭ ಕೋರಿದ ಅವರು, ಪ್ರಸ್ತುತ ಹೊರತಂದಿರುವ ಸಂಶೋಧನಾ ಲೇಖನಗಳಸಂಕಲನ ಆವೃತ್ತಿಯು ವಿದ್ಯಾರ್ಥಿಗಳು ಹಾಗೂ ಕಾಂಕ್ರಿಟ್ ತಂತ್ರಜ್ಞಾನದ ಬಹುಮುಖೀಬೆಳವಣಿಗೆಗೆ ಸಹಕಾರಿಯಾಗಿದೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಂಶೋಧನಾತ್ಮಕಕೃತಿಗಳನ್ನು ಹೊರತರಲಿ ಎಂದು ಹೇಳಿದರು.
ಎಸ್‌ಡಿಎಂ ಕಾರ್ಯದರ್ಶಿ ಜೀವಂಧರ್‌ಕುಮಾರ್ ಉಪಸ್ಥಿತರಿದ್ದರು.ಪುಸ್ತಕವು ಸಂಶೋಧನಾ ಲೇಖನಗಳ ಸಂಗ್ರಹವಾಗಿದ್ದು, ಯುಜಿ-ಪಿಜಿಯ ಸಿವಿಲ್‌ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ನಿರ್ಮಾಣ ಎಂಜಿನಿಯರ್‌ಗಳು, ಅಭ್ಯಾಸ ಎಂಜಿನಿಯರ್‌ಗಳಿಗೆ ಇದು ತುಂಬಾ ಉಪಯುಕ್ತವಾಗಿದೆ.
ಸಂಶೋಧನೆಯ ಫಲಿತಾಂಶಗಳನ್ನು ಕೋಷ್ಟಕಗಳು ಅಥವಾ ಗ್ರಾಫ್‌ಗಳು ಅಥವಾಸಮೀಕರಣಗಳ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ ಮತ್ತು ಅವುಗಳನ್ನು ಸಿದ್ಧರೆಕನರ್ ಫಲಿತಾಂಶಗಳಾಗಿ ಬಳಸಬಹುದಾಗಿದೆ.