Advertisement

Danny Kuttappa; ತೆಲುಗಿನಲ್ಲಿ ಡ್ಯಾನಿ ಹವಾ

12:25 PM Sep 30, 2023 | Team Udayavani |

ಕನ್ನಡದ ಹಲವು ನಟ-ನಟಿಯರು ಪರಭಾಷೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಡ್ಯಾನಿ ಕುಟ್ಟಪ್ಪ.

Advertisement

ಸಖತ್‌ ರಗಡ್‌ ಲುಕ್‌ನ ಡ್ಯಾನಿ ಈಗ ತೆಲುಗು ಚಿತ್ರರಂಗದಲ್ಲಿ ಬಿಝಿಯಾಗುತ್ತಿದ್ದಾರೆ. ತೆಲುಗಿನ ಮಾಸ್‌ ನಿರ್ದೇಶಕ ಬೋಯಾಪಾಟಿ ಶ್ರೀನು ನಿರ್ದೇಶನದ, ರಾಮ್‌ ಪೋತಿನೇನಿ ಅಭಿನಯದ “ಸ್ಕಂದ’ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಡ್ಯಾನಿಗೆ ಟಾಲಿವುಡ್‌ ಹೊಸದೇನಲ್ಲ. “ಬಾಹುಬಲಿ’ ಚಿತ್ರದ ಮೂಲಕ ತೆಲುಗಿಗೆ ಹೊರಟ ಅವರು, ನಂತರ ಗದ್ದಲಕೊಂಡ ಗಣೇಶ್‌ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.

ಈಗ ಸ್ಕಂದ ಚಿತ್ರದಲ್ಲಿ ಅತೀ ಮುಖ್ಯವಾದ ನೆಗೆಟಿವ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಿಂದ ಪರಿಚಿತವಾದ ಡ್ಯಾನಿ ಮುಂಬರುವ ದಿನಗಳಲ್ಲಿ ಕನ್ನಡದಲ್ಲೂ ಹೊಸಬರು, ಹಳಬರು ಎನ್ನದೇ ಎಲ್ಲರೊಂದಿಗೂ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next