ಆಗ್ರಾ:“ಬ್ಯೂಟಿಫುಲ್ ತಾಜ್‌ಮಹಲ್’ ಹೀಗೆಂದು ಉದ್ಗರಿಸಿದ್ದು ಡೆನ್ಮಾರ್ಕ್ ಪ್ರಧಾನಮಂತ್ರಿ ಮೆಟೆ ಫ್ರೆಡ್ರಿಕ್ಸನ್. ಭಾರತ ಪ್ರವಾಸದಲ್ಲಿರುವ ಅವರು ಭಾನುವಾರ ಪತಿ ಬೋ ಟೆಂಗ್‌ಬರ್ಗ್ ಜತೆಗೆ ಭಾನುವಾರ ಆಗ್ರಾ ಪ್ರವಾಸ ಕೈಗೊಂಡಿದ್ದಾರೆ.
ಆಗ್ರಾ ವಿಮಾನ ನಿಲ್ದಾಣದಲ್ಲಿ ಉತ್ತರ ಪ್ರದೇಶ ಇಂಧನ ಸಚಿವ ಕಾಂತ ಶರ್ಮ ಅವರು ಡೆನ್ಮಾರ್ಕ್ ಪ್ರಧಾನಿಯವರನ್ನು ಬರ ಮಾಡಿಕೊಂಡರು.
ಫ್ರೆಡ್ರಿಕ್ಸನ್ ದಂಪತಿ ಐತಿಹಾಸಿಕ ಸ್ಮಾರಕದ ಆವರಣದಲ್ಲಿ ಒಂದೂವರೆ ಗಂಟೆಗಳ ಕಾಲ ಇದ್ದರು. ಸಂದರ್ಶಕರ ಪುಸ್ತಕದಲ್ಲಿ “ಇದೊಂದು ಸುಂದರವಾದ ಸ್ಥಳ. ಇಲ್ಲಿಗೆ ಭೇಟಿ ನೀಡಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
2019ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಮೆಟೆ ಫ್ರೆಡ್ರಿಕ್ಸನ್ (43) ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಅವರು ಆ ದೇಶ ಅತ್ಯಂತ ಯುವ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ಪ್ರಧಾನಿ ಮೋದಿ ಬಡವರನ್ನ ಮರೆಯೊಲ್ಲ : ಸಿಎಂ ಬೊಮ್ಮಾಯಿ