Advertisement

PM ಮೋದಿಗೆ ಬಿಎಸ್‌ಪಿ ಸಂಸದ ಡ್ಯಾನಿಷ್‌ ಪತ್ರ

08:25 PM Sep 29, 2023 | Team Udayavani |

ನವದೆಹಲಿ: ಬಿಎಸ್‌ಪಿ ಸಂಸದ ಡ್ಯಾನಿಷ್‌ ಅಲಿ ಅವರ ವಿರುದ್ಧ ಬಿಜೆಪಿ ಸಂಸದ ರಮೇಶ್‌ ಬಿಧೂರಿ ಲೋಕಸಭೆಯಲ್ಲಿ ಅವಾಚ್ಯ ಪದ ಬಳಸಿರುವ ವಿಚಾರ ವಿವಾದಕ್ಕೀಡಾಗಿರುವ ನಡುವೆಯೇ, ಪ್ರಕರಣ ಸಂಬಂಧ ಡ್ಯಾನಿಷ್‌ ಅಲಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

Advertisement

ಬಿಧೂರಿಗೆ ತಕ್ಕ ಶಿಕ್ಷೆ ನೀಡುವುದನ್ನು ಖಾತರಿ ಪಡಿಸಿಕೊಳ್ಳುವಂತೆ ಕೇಳಿದ್ದಾರೆ. ಈ ಪತ್ರವನ್ನು ಡ್ಯಾನಿಷ್‌ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲಿ ಬಿಧೂರಿ ಬಳಸಿರುವ ಪದಗಳು ಕೇವಲ ನನ್ನ ಮೇಲಿನ ವೈಯಕ್ತಿಕ ದಾಳಿಯಷ್ಟೇ ಅಲ್ಲ, ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳ ಮೇಲಿನ ದಾಳಿ. ಬಿಧೂರಿ ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುವುದಲ್ಲದೇ, ಬಿಧೂರಿ ಅವರಿಗೆ ತಕ್ಕ ಶಿಕ್ಷೆ ನೀಡುವುದನ್ನು ತಾವು ಖಾತರಿ ಪಡಿಸಿಕೊಳ್ಳಬೇಕು ಹಾಗೂ ಬಿಧೂರಿ ಪ್ರಕರಣದ ಬಳಿಕ ತಮಗೆ ಬೆದರಿಕೆ ಹೆಚ್ಚಿದ್ದು, ಭದ್ರತೆಯನ್ನು ಹೆಚ್ಚಿಸಬೇಕೆಂದೂ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next