Advertisement

ಹಿಂದೂ ಎಂಬ ಕಾರಣಕ್ಕೆ ಅವಮಾನವಾಗಿದ್ದು ನಿಜ: ಅಖ್ತರ್ ಮಾತು ಅನುಮೋದಿಸಿದ ಕನೇರಿಯಾ

09:54 AM Dec 28, 2019 | Team Udayavani |

ಇಸ್ಲಮಾಬಾದ್: ಹಿಂದೂ ಧರ್ಮೀಯ ಎಂಬ ಕಾರಣಕ್ಕೆ ತಂಡದಲ್ಲಿ ಸಾಕಷ್ಟು ತಾರತಮ್ಯಕ್ಕೆ ಒಳಗಾಗಿದ್ದೆ ಎಂದು ಅಖ್ತರ್ ನನ್ನ ಬಗ್ಗೆ ಹೇಳಿರುವುದು ಸತ್ಯ ಎಂದು ಪಾಕಿಸ್ಥಾನದ ಮಾಜಿ ಲೆಗ್ ಸ್ಪಿನ್ನರ್ ದನೀಶ್ ಕನೇರಿಯಾ ಹೇಳಿದ್ದಾರೆ.

Advertisement

ಪಾಕಿಸ್ಥಾನದ ಖಾಸಗಿ ಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಶೋಯೇಬ್ ಅಖ್ತರ್, ದನೀಶ್ ಕನೇರಿಯಾ ಹಿಂದೂ ಧರ್ಮೀಯನಾದ ಕಾರಣ ಅವರನ್ನು ಪಾಕಿಸ್ಥಾನ ತಂಡದ ಭಾಗವಾಗಲು ಇಷ್ಟಪಡದ ಅನೇಕರಿದ್ದರು. ಕನೇರಿಯಾ ಉತ್ತಮ ಪ್ರದರ್ಶನ ನೀಡಿಯೂ ಅವರಿಗೆ ಅವಮಾನ ಮಾಡಲಾಗುತ್ತಿತ್ತು. ಅವರ ಜೊತೆಗೆ ಆಹಾರ ಸೇವಿಸಲೂ ಕೆಲ ಆಟಗಾರರು ಹಿಂಜರಿಯುತ್ತಿದ್ದರು ಎಂದು ಹೇಳಿದ್ದರು.

ಈ ಬಗ್ಗೆ ಮಾತನಾಡಿದ ಕನೇರಿಯಾ, ಅಖ್ತರ್ ಹೇಳಿರುವುದು ನಿಜ. ಆದರೆ ಇದನ್ನು ವಿಷಯವನ್ನು ರಾಜಕೀಯ ಮಾಡಬೇಡಿ ಎಂದಿದ್ದಾರೆ. ಕ್ರಿಕೆಟ್ ಜೀವನದಲ್ಲಿ ನನಗೆ ಸಹಾಯ ಮಾಡಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಸದ್ಯ ನನ್ನ ಜೀವನ ಸ್ಥಿತಿ ಉತ್ತಮವಾಗಿಲ್ಲ. ಇದಕ್ಕಾಗಿ ನಾನು ಪ್ರಧಾನಿ ಇಮ್ರಾನ್ ಖಾನ್ ಗೆ ಸಹಾಯಕ್ಕಾಗಿ ಮನವಿ ಮಾಡಿದ್ದೇನೆ ಎಂದಿದ್ದಾರೆ.

2000ರಿಂದ 2010ರವರೆಗೆ ಪಾಕ್ ತಂಡವನ್ನು ಪ್ರತಿನಿಧಿಸಿದ್ದ ಕನೇರಿಯಾ 62 ಟೆಸ್ಟ್ ನಲ್ಲಿ 261 ವಿಕೆಟ್ ಪಡೆದು ಪಾಕ್ ಪರ ಅತೀ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿದ್ದಾರೆ. ಫಿಕ್ಸಿಂಗ್ ಕಾರಣದಿಂದ 2012ರಲ್ಲಿ ಕನೇರಿಯಾ ಅಮಾನತಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next