Advertisement
ಫೈನಲ್‌ನಲ್ಲಿ ಬ್ರಿಟನ್‌ನ 35 ವರ್ಷದ ಅನುಭವಿ ಆಟಗಾರನ ವಿರುದ್ಧ ಮೆಡ್ವೆಡೇವ್ 6-4, 6-4 ನೇರ ಸೆಟ್‌ಗಳಿಂದ ಗೆದ್ದು ಬಂದರು. ಇದು ಒಂದು ವಾರದಲ್ಲಿ ಮೆಡ್ವೆಡೇವ್ ಪಾಲಾದ 2ನೇ ಟೆನಿಸ್ ಪ್ರಶಸ್ತಿ. ಕಳೆದ ವಾರವಷ್ಟೇ ರೋಟರ್‌ಡ್ಯಾಮ್ ಕೂಟದಲ್ಲೂ ಅವರು ಚಾಂಪಿಯನ್ ಆಗಿದ್ದರು.
ದುಬಾೖ ಟೆನಿಸ್ ಪಂದ್ಯಾವಳಿಯ ಪ್ರಶಸ್ತಿಯನ್ನು ಜೆಕ್ ಗಣರಾಜ್ಯದ ಬಾಬೊìರಾ ಕ್ರೆಜಿಕೋವಾ ಗೆದ್ದರು. ಅವರು ವಿಶ್ವದ ನಂ.1 ಆಟಗಾರ್ತಿ, ಪೋಲೆಂಡ್‌ನ ಐಗಾ ಸ್ವಿಯಾಟೆಕ್ ವಿರುದ್ಧ 6-4, 6-2 ಅಂತರದ ಮೇಲುಗೈ ಸಾಧಿಸಿದರು. ಕಳೆದ ವರ್ಷದ “ಒಸ್ಟ್ರಾವಾ ಓಪನ್’ ಫೈನಲ್‌ನಲ್ಲೂ ಸ್ವಿಯಾಟೆಕ್ ವಿರುದ್ಧ ಕ್ರೆಜಿಕೋವಾ ಗೆಲುವು ಒಲಿಸಿಕೊಂಡಿದ್ದರು. 2021ರ ಫ್ರೆಂಚ್ ಓಪನ್ ಚಾಂಪಿಯನ್ ಆಗಿರುವ ಕ್ರೆಜಿಕೋವಾ, ಒಂದೇ ಕೂಟದಲ್ಲಿ ಅಗ್ರ ರ್‍ಯಾಂಕಿಂಗ್‌ನ ಮೊದಲ ಮೂವರನ್ನು ಮಣಿಸಿದ ವಿಶ್ವದ ಕೇವಲ 5ನೇ ಆಟಗಾರ್ತಿ ಎನಿಸಿದರು. ಈ ಕೂಟದ ಕ್ವಾರ್ಟರ್ ಫೈನಲ್‌ನಲ್ಲಿ ಅರಿನಾ ಸಬಲೆಂಕಾ (ನಂ. 2) ಮತ್ತು ಸೆಮಿಫೈನಲ್‌ನಲ್ಲಿ ಜೆಸ್ಸಿಕಾ ಪೆಗುಲಾ (ನಂ. 3) ಅವರನ್ನು ಸೋಲಿಸಿದ್ದರು.