Advertisement

ಬಾಂಗ್ಲಾ ಕ್ರಿಕೆಟ್‌ ಸಿಬಂದಿಗೆ ವೇತನ ಹಂಚಿದ ವೆಟರಿ

02:07 AM Jun 01, 2020 | Sriram |

ಢಾಕಾ: ಕೋವಿಡ್-19 ಸಾಂಕ್ರಾಮಿಕ ವೈರಸ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (ಬಿಸಿಬಿ)ಯ ಕಡಿಮೆ ವೇತನ ಹೊಂದಿರುವ ಸಿಬಂದಿಗೆ ತನ್ನ ವೇತನದ ಒಂದು ಭಾಗವನ್ನು ಹಂಚುವಂತೆ ಹಾಲಿ ಬಾಂಗ್ಲಾದೇಶ ತಂಡದ ಬೌಲಿಂಗ್‌ ಕೋಚ್‌ ಡೇನಿಯಲ್‌ ವೆಟರಿ ತಿಳಿಸಿದ್ದಾರೆ.

Advertisement

ಈ ವಿಷಯವನ್ನು ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಜಾಮುದ್ದಿನ್‌ ಚೌಧರಿ ಖಚಿತ ಪಡಿಸಿದ್ದಾರೆ. “ವೆಟರಿ ಅವರ ಸಂಬಳದ ನಿರ್ದಿಷ್ಟ ಭಾಗವನ್ನು ಬಿಸಿಬಿಯ ಕಡಿಮೆ ಆದಾಯ ಹೊಂದಿರುವ ಸಿಬಂದಿಗೆ ದೇಣಿಗೆಯಾಗಿ ನೀಡಬೇಕೆಂದು ಸೂಚಿಸಿದ್ದಾರೆ. ವೆಟರಿ ಈಗಾಗಲೇ ಅಧಿಕೃತವಾಗಿ ಕ್ರಿಕೆಟ್‌ ಕಾರ್ಯಾಚರಣೆ ಸಮಿತಿಗೂ ಮಾಹಿತಿ ನೀಡಿದ್ದಾರೆ’ ಎಂದು ನಿಜಾಮುದ್ದಿನ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next