Advertisement

ಜೀವಂತ ರಬ್ಬರ್‌ ಚೆಂಡು

06:00 AM Sep 20, 2018 | Team Udayavani |

ಮಾನವ ಮೂಳೆ ಮಾಂಸದ ತಡಿಕೆ ..ಅಂತ ಹೇಳುವುದನ್ನು ಕೇಳಿದ್ದೇವೆ. ಆದರೆ, ಆ ಮಾತು ಎಲ್ಲರಿಗೂ ಅನ್ವಯವಾಗುವುದಿಲ್ಲ. ಯಾಕೆ ಗೊತ್ತಾ? ಈ ರಬ್ಬರ್‌ ಬಾಯ್‌ಯನ್ನು ನೋಡಿದರೆ, ಈತನ ದೇಹದಲ್ಲಿ ದೇವರು ಮೂಳೆಯನ್ನೇ ಜೋಡಿಸಿಲ್ಲವೇನೋ ಎಂಬ ಅನುಮಾನ ಮೂಡುವುದು ಸಹಜ.. 

Advertisement

ನೀವು ಎಂದಾದರೂ ಯೋಗಾಭ್ಯಾಸ ಮಾಡಿದ್ದೀರ? ಹೌದಾದರೆ, ಆ ಕಷ್ಟ ನಿಮಗೆ ಗೊತ್ತಿರುತ್ತದೆ. ಹೇಳಿದ ಮಾತು ಕೇಳದ ದೇಹ ದಂಡಿಸಲು ಹೋಗಿ, ವಾರಪೂರ್ತಿ ಮೈ ಕೈ ನೋವು ಅನುಭವಿಸಿದ ಹೆಚ್ಚಿನವರು ಯೋಗಕ್ಕೆ ಗುಡ್‌ಬೈ ಹೇಳುತ್ತಾರೆ. ಆದರೆ, ಅಮೆರಿಕದ ಈ ಆಸಾಮಿಯ ದೇಹ 360 ಡಿಗ್ರಿ ಬೇಕಾದರೂ ತಿರುಗುತ್ತದೆ. ಹೇಗೆ ಬೇಕೋ ಹಾಗೆ ದೇವನ್ನು ತಿರುಚಿ, ಮಡಚಿ, ಪುಟ್ಟ ಪೆಟ್ಟಿಗೆಯೊಳಗೆ ತೂರಿಕೊಳ್ಳಬಲ್ಲ ಈತನಿಗೆ ರಬ್ಬರ್‌ ಬಾಯ್‌ ಎಂದು ಸುಮ್ಮನೆ ಕರೆಯುವುದಲ್ಲ!  

ರಬ್ಬರ್‌ ಬಾಯ್‌ ಎಂದೇ ಖ್ಯಾತಿ ಪಡೆದ ಇವನ ಹೆಸರು, ಡ್ಯಾನಿಯಲ್‌ ಸ್ಮಿತ್‌. ಅಮೆರಿಕದ ಪ್ರಜೆ. ಗಿನ್ನಿಸ್‌ ರೆಕಾರ್ಡ್‌ನಲ್ಲಿ ಈತನ ಹೆಸರು ಏಳು ಬಾರಿ ಸೇರ್ಪಡೆಯಾಗಿದೆ. ಅಂಥದ್ದೇನು ಮಾಡಿದ್ದಾನೆ ಈತ ಎಂದು ಕೇಳುವವರು ಇವನ ಪ್ರದರ್ಶನವನ್ನೊಮ್ಮೆ ನೋಡಬೇಕು. ಮೈಯಲ್ಲಿ ಮಾಂಸ ಬಿಟ್ಟರೆ ಬೇರೇನೂ ಇಲ್ಲವೇ ಇಲ್ಲ ಎನ್ನುವಂತೆ ದೇಹವನ್ನು ಹೇಗೆ ಬೇಕೋ ಹಾಗೆ ತಿರುಗಿಸಬಲ್ಲ, ಮಡಚಬಲ್ಲ. ಅಷ್ಟೇ ಯಾಕೆ, ಇಡೀ ದೇಹವನ್ನು ಪುಟ್ಟ ಪೆಟ್ಟಿಗೆಯೊಂದರಲ್ಲಿ ಸುತ್ತಿಡಬಲ್ಲಂಥ ಸಾಹಸಿ ಈ ಡ್ಯಾನಿಯಲ್‌.

ಹೌಸ್‌ಫ‌ುಲ್‌ ಪ್ರದರ್ಶನಗಳು
ಅಮೇರಿಕದಾದ್ಯಂತ ಸಾವಿರಾರು ಪ್ರದರ್ಶನಗಳನ್ನು ನೀಡಿ ಜನಮನ್ನಣೆ ಪಡೆದಿರುವ ಡ್ಯಾನಿಯಲ್‌ನ ಕಾರ್ಯಕ್ರಮಗಳಿಗೆ ಜನ ಮುಗಿಬೀಳುತ್ತಾರೆ. ಆತನ ಪ್ರದರ್ಶನವಿರುವ ಥಿಯೇಟರ್‌ಗಳು ಯಾವಾಗಲೂ ಹೌಸ್‌ಫ‌ುಲ್‌. ಅಮೆರಿಕಾ ಗಾಟ್‌ ಟ್ಯಾಲೆಂಟ್‌ ಎಂಬಿತ್ಯಾದಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ವಿಜೇತನಾಗಿರುವ ಡ್ಯಾನಿಯಲ್‌ನ ಜನಪ್ರಿಯತೆ ಎಷ್ಟಿದೆಯೆಂದರೆ, ಅಮೆರಿಕದ ಯಾವುದೇ ಪ್ರತಿಷ್ಟಿತ ಸಮಾರಂಭವಿರಲಿ ಅದರಲ್ಲಿ ಡ್ಯಾನಿಯಲ್‌ನ ಪ್ರದರ್ಶನ ಇರಲೇಬೇಕು. 

ತಂದೆಯೇ ಮೊದಲ ಗುರು
ಬಾಲ್ಯದಲ್ಲಿ ಡ್ಯಾನಿಯಲ್‌ನ ಕೌಶಲ ಹಾಗೂ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಅವನ ತಂದೆ ಡೆನ್ನಿಸ್‌. ಅವರು, ಕಾಂಟೋರÒನಿಸ್ಟ್‌ಗೆ ಸಂಬಂಧಿಸಿದ ಹತ್ತಾರು ಪುಸ್ತಕಗಳನ್ನು ತಂದು ಮಗನ ಆಸಕ್ತಿಗೆ ನೀರೆರೆದರು. ಗ್ರಂಥಾಲಯಗಳಿಗೆ ಕರೆದುಕೊಂಡು ಹೋಗಿ ಆ ವಿಷಯದ ಬಗ್ಗೆ ಓದಿಸಿದರು. ಕಾಂಟೋರನಿಸ್ಟ್‌ನ ಎಲ್ಲಾ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ದಿನನಿತ್ಯ ಹತ್ತಾರು ಗಂಟೆ ಅಭ್ಯಾಸ ಮಾಡುತ್ತಿದ್ದ ಡ್ಯಾನಿಯಲ್‌, 18ನೇ ವಯಸ್ಸಿನಲ್ಲಿಯೇ ಅಮೆರಿಕಾದ ಪ್ರತಿಷ್ಟಿತ ಸರ್ಕಸ್‌ ಕಂಪನಿಯೊಂದರಲ್ಲಿ ಅವಕಾಶ ಪಡೆದ. ಆರ್ಟ್‌ ಆಫ್ ಸ್ಯಾನ್‌ಫ್ರಾನ್ಸಿಸ್ಕೋ ಎಂಬ ತರಬೇತಿ ಶಾಲೆಯಲ್ಲಿ ಸರ್ಕಸ್‌ಗೆ ಅಗತ್ಯವಾದ ಎಲ್ಲಾ ತಂತ್ರಗಳ ತರಬೇತಿಯನ್ನೂ ಪಡೆದುಕೊಂಡ. ಸರ್ಕಸ್‌ಗೆ ಸೇರುವುದಕ್ಕೂ ಮೊದಲು ರಸ್ತೆ ಬದಿಯಲ್ಲಿ ಈತನ ಪ್ರದರ್ಶನ ನೋಡಿದ ಅನೇಕರು ಇದೊಂದು ಕಣRಟ್ಟು ವಿದ್ಯೆ ಎಂದು ಹೀಯಾಳಿಸಿದ್ದಿದೆ.

Advertisement

ಏಳು ಬಾರಿ ಗಿನ್ನಿಸ್‌ ರೆಕಾರ್ಡ್‌
1999ರಲ್ಲಿ ಮೊದಲ ಬಾರಿಗೆ ಗಿನ್ನಿಸ್‌ ದಾಖಲೆ ಮಾಡಿದ ಡ್ಯಾನಿಯಲ್‌, ಒಟ್ಟು 7 ಬಾರಿ ಗಿನ್ನಿಸ್‌ ಪುಸ್ತಕದಲ್ಲಿ ತಮ್ಮ ಹೆಸರು ಬರೆದಿದ್ದಾರೆ. ಪ್ರತಿ ಬಾರಿಯೂ ತನ್ನ ಸಾಧನೆಯನ್ನು ತಾನೇ ಉತ್ತಮಪಡಿಸಿಕೊಳ್ಳುವ ಈತ, 2007ರಲ್ಲಿ 180 ಡಿಗ್ರಿ ಆಕಾರವಾಗಿ ಕಾಲುಗಳ ಮೂಳೆಗಳನ್ನು ಮುಂಡದ ಹಿಂದಕ್ಕೆ ಸುತ್ತಿಕೊಳ್ಳುವ ಮೂಲಕ ವಿಶ್ವದ ಅತ್ಯಂತ ಫ್ಲೆಕ್ಸಿಬಲ್‌ ವ್ಯಕ್ತಿ ಎಂದು ಗಿನ್ನಿಸ್‌ದಾಖಲೆಗೆ ಮಾನ್ಯನಾಗಿದ್ದಾನೆ.

ಸಿನಿಮಾ, ಜಾಹೀರಾತು…
ದಶಕಕ್ಕೂ ಹೆಚ್ಚು ಅವಧಿಯಿಂದ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ಡ್ಯಾನಿಯಲ್‌ ಹಲವಾರು ಸಿನಿಮಾಗಳ ಸಾಹಸಕಾರಿ, ರೋಮಾಂಚಕ, ನಂಬಲಸಾಧ್ಯ ಎಂಬಂಥ ಸನ್ನಿವೇಶಗಳಲ್ಲಿ ಲೀಲಾಜಾಲವಾಗಿ ನಟಿಸಿದ್ದಾನೆ. ಅಭಿನಯ ಚಾತುರ್ಯವುಳ್ಳ ಈತನನ್ನು ಜಾಹೀರಾತು ಕಂಪನಿಗಳೂ ಸಹ ಬಳಸಿಕೊಂಡಿವೆ. ವಿಶೇಷ ಸಾಮರ್ಥ್ಯ ಹಾಗೂ ಕಠಿಣ ಪರಿಶ್ರಮದಿಂದ ಪ್ರಸಿದ್ಧಿ ಪಡೆದಿರುವ ಡ್ಯಾನಿಯಲ್‌ ಸ್ಮಿತ್‌, ಆತ್ಮಶ್ವಾಸದ ಖನಿ. ಈ ಹುಮ್ಮಸ್ಸಿನಿಂದಲೇ ಜಗತ್ತಿನಾದ್ಯಂತ ಸಾವಿರಾರು ಪ್ರದರ್ಶನ ನೀಡಿ, ನೂರಾರು ದೂರದರ್ಶನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.

ಪ.ನ. ಹಳ್ಳಿ ಹರೀಶ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next