Advertisement
ಸಭೆಯು ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ. ಅಧ್ಯ ಕ್ಷತೆಯಲ್ಲಿ ನಡೆಯಿತು.
ಸವಣೂರು ಬಸ್ ತಂಗುದಾಣದ ಪಕ್ಕ ಬಸ್ ಬೇ ದಾಟಿ ಮುಂದಕ್ಕೆ ಚಲಿಸಿದಾಗ ರಸ್ತೆ ಕಿರಿದಾಗಿದ್ದು, ಅದರ ಬದಿಗಳು ತಗ್ಗಿನಲ್ಲಿವೆ. ಇದರಿಂದ ಸೈಡ್ ಕೊಡುವ ಸಂದರ್ಭದಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗುತ್ತದೆ. ಹಲವು ಅಪಘಾತಗಳೂ ಸಂಭವಿಸಿವೆ. ಈ ಸಮಸ್ಯೆ ಸರಿಪಡಿಸುವಂತೆ ಲೋಕೋಪಯೋಗಿ ಇಲಾಖೆಗೆ ಬರೆದುಕೊಳ್ಳಬೇಕೆಂದು ಸದಸ್ಯ ಎಂ.ಎ. ರಫೀಕ್ ಹೇಳಿದರು.
ಆಧಾರ್ ತಿದ್ದುಪಡಿ ಕೇಂದ್ರ ತೆರೆಯಲಿ
ಹಲವರ ಆಧಾರ್ ಕಾರ್ಡ್‌ಗಳಲ್ಲಿ ತಿದ್ದುಪಡಿಗಳು ಇರುವುದರಿಂದ ಸರಕಾರದ ಯೋಜನೆಗಳು ಫಲಾ ನುಭವಿಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಆದರಿಂದ ಸವಣೂರು ಸಿಂಡಿಕೇಟ್ ಬ್ಯಾಂಕ್ ಮತ್ತು ಕಾಣಿಯೂರು ಅಂಚೆ ಕಚೇರಿಯಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ತೆರೆದು, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಸದಸ್ಯ ಸತೀಶ್ ಬಲ್ಯಾಯ ಹೇಳಿದರು. ಈ ಕುರಿತು ಸಂಬಂಧಪಟ್ಟವರಿಗೆ ಬರೆಯುವಂತೆ ನಿರ್ಧರಿಸಲಾಯಿತು.
Related Articles
Advertisement
ಗ್ರಾ.ಪಂ. ಸದಸ್ಯೆ ಮೀನಾಕ್ಷಿ ಬಂಬಿಲ ಮಾತನಾಡಿ, ಮಳೆಯಿಂದಾಗಿ ತನ್ನ ವಾಸದ ಮನೆಯ ಒಳಗೆ ನೀರು ಜಿನುಗುತ್ತಿದೆ. ಇದಕ್ಕೆ ಪರಿಹಾರ ಒದಗಿಸುವಂತೆ ಸಭೆಯಲ್ಲಿ ವಿನಂತಿಸಿದರು.
ಸಹಾಯ ಯಾಚಿಸಿ ಮನವಿಮನೆ ನಿರ್ಮಾಣಕ್ಕೆ ಒಂದು ಬಡ ಕುಟುಂಬ ಹಾಗೂ ಮಗಳ ಮದುವೆ ವಿಚಾರವಾಗಿ ಸಹಾಯ ಯಾಚಿಸಿ ಮಹಿಳೆಯೋರ್ವರು ಗ್ರಾಮ ಪಂಚಾಯತ್‌ಗೆ ಮನವಿ ಮಾಡಿದ್ದರು. ಬಳಿಕ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿ – ಸಿಬಂದಿ ವರ್ಗದವರು ವೈಯಕ್ತಿಕವಾಗಿ ಧನಸಹಾಯ ನೀಡಿದರು.ಗ್ರಾಮ ಪಂಚಾಯತ್ ವತಿಯಿಂದಲೂ ನೀಡುವ ಕುರಿತು ನಿರ್ಧರಿಸಲಾಯಿತು. ಗ್ರಾ.ಪಂ. ಉಪಾಧ್ಯಕ್ಷ ರವಿ ಕುಮಾರ್ ಬಿ.ಕೆ., ಸದಸ್ಯರಾದ ಗಿರಿಶಂಕರ ಸುಲಾಯ, ಪ್ರಕಾಶ್ ಕುದ್ಮನಮಜಲು, ದಿವಾಕರ ಬಂಗೇರ ಬೊಳಿಯಾಲ, ಸತೀಶ್ ಬಲ್ಯಾಯ, ಎಂ.ಎ. ರಫೀಕ್, ಸತೀಶ್ ಅಂಗಡಿಮೂಲೆ, ನಾಗೇಶ್ ಓಡಂತರ್ಯ, ರಾಜೀವಿ ಶೆಟ್ಟಿ ಕೆಡೆಂಜಿ, ಗಾಯತ್ರಿ ಬರೆಮೇಲು, ವೇದಾವತಿ ಅಂಜಯ, ಸುಧಾ ನಿಡ್ವಣ್ಣಾಯ, ಚೆನ್ನು ಮಾಂತೂರು, ನಳಿನಾಕ್ಷಿ ಎ., ದೇವಿಕಾ ಶ್ರೀಧರ್, ಜಯಂತಿ ಮಡಿವಾಳ, ವಸಂತಿ ಬಸ್ತಿ, ಮೀನಾಕ್ಷಿ ಕಲಾಪದಲ್ಲಿ ಭಾಗವಹಿಸಿದರು. ಲೆಕ್ಕ ಸಹಾಯಕ ಎ. ಮನ್ಮಥ ಸ್ವಾಗತಿಸಿ, ಸಿಬಂದಿ ಪ್ರಮೋದ್ ಕುಮಾರ್ ರೈ ವಂದಿಸಿದರು. ದಯಾನಂದ ಮಾಲೆತ್ತಾರು, ಜಯಶ್ರೀ, ಜಯಾ ಕೆ., ಶಾರದಾ ಎಂ. ಸಹಕರಿಸಿದರು. ಪ್ರಾಕೃತಿಕ ವಿಕೋಪದಿಂದ ಗ್ರಾ.ಪಂ. ವ್ಯಾಪ್ತಿಯ ಹಲವು ರಸ್ತೆಗಳು ಹಾನಿಯಾಗಿವೆ. ಗೌರಿ ಹೊಳೆ ತಟದ ಕೃಷಿಕರ ತೋಟಗಳಿಗೆ ಮಳೆ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿದೆ. ನಾಡೋಳಿಯಲ್ಲಿ ಗೌರಿಹೊಳೆ ಬದಿಯ ತಡೆಗೋಡೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಕೃಷಿ ಭೂಮಿ, ಕಿಂಡಿ ಅಣೆಕಟ್ಟು ಅಪಾಯದಲ್ಲಿವೆ. ಈ ಕುರಿತು ಸರಕಾರಕ್ಕೆ ಬರೆದುಕೊಳ್ಳುವಂತೆ ನಿರ್ಧರಿಸಲಾ ಯಿತು. ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಪಟ್ಟಿ ಮಾಡಲಾಯಿತು. ಪ್ರಾಕೃತಿಕ ವಿಕೋಪ: ಹಲವು ರಸ್ತೆಗಳಿಗೆ ಹಾನಿ
ಪ್ರಾಕೃತಿಕ ವಿಕೋಪದಿಂದ ಗ್ರಾ.ಪಂ. ವ್ಯಾಪ್ತಿಯ ಹಲವು ರಸ್ತೆಗಳು ಹಾನಿಯಾಗಿವೆ. ಗೌರಿ ಹೊಳೆ ತಟದ ಕೃಷಿಕರ ತೋಟಗಳಿಗೆ ಮಳೆ ನೀರು ನುಗ್ಗಿ ಅಪಾರ ಬೆಳೆ ಹಾನಿಯಾಗಿದೆ. ನಾಡೋಳಿಯಲ್ಲಿ ಗೌರಿಹೊಳೆ ಬದಿಯ ತಡೆಗೋಡೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಕೃಷಿ ಭೂಮಿ, ಕಿಂಡಿ ಅಣೆಕಟ್ಟು ಅಪಾಯದಲ್ಲಿವೆ. ಈ ಕುರಿತು ಸರಕಾರಕ್ಕೆ ಬರೆದುಕೊಳ್ಳುವಂತೆ ನಿರ್ಧರಿಸಲಾ ಯಿತು. ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾದ ರಸ್ತೆಗಳ ಪಟ್ಟಿ ಮಾಡಲಾಯಿತು.