Advertisement

ನೀರಿಗೆ ಬಿದ್ದ ಹೈಟೆನ್ಶನ್‌ ವಿದ್ಯುತ್‌ ತಂತಿ: ಆರು ಸಾವು

06:00 AM Sep 22, 2018 | Team Udayavani |

ರುಪೋಹಿ: ಅಸ್ಸಾಂನ ನಗಾಂವ್‌ ಜಿಲ್ಲೆಯ ರುಪೋಹಿ ಪ್ರದೇಶದಲ್ಲಿ ಹೈ ವೋಲ್ಟೆಜ್‌ ವಿದ್ಯುತ್‌ ತಂತಿಯೊಂದು ಮುರಿದು ಕೊಳದಲ್ಲಿದ್ದ ನೀರಿಗೆ ಬಿದ್ದ ಪರಿಣಾಮ 6 ಮೀನುಗಾರರು ಮೃತಪಟ್ಟು, 8 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. 

Advertisement

11,000 ವೋಲ್ಟೆಜ್‌ ವಿದ್ಯುತ್‌ ತಂತಿ ಸಡಿಲಗೊಂಡು ಜೋತಾಡುತ್ತಿದ್ದುದನ್ನು ನೋಡಿದ್ದ ಗ್ರಾಮಸ್ಥರು ಬೆಳಗ್ಗೆ 5 ಗಂಟೆಗೇ ವಿದ್ಯುತ್‌ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ, ನಿರ್ಲಕ್ಷ್ಯ ವಹಿಸಿದ್ದ ಇಲಾಖೆ ಸಿಬ್ಬಂದಿ ತಂತಿಯಲ್ಲಿ ವಿದ್ಯುತ್‌ ಹರಿಯುತ್ತಿಲ್ಲ ಎಂದು ತಿಳಿಸಿದ್ದರು. ಹೀಗಾಗಿ, ಇದಾದ ಒಂದು ಗಂಟೆ ಬಳಿಕ ಮೀನುಗಾರರು ಮೀನು ಹಿಡಿಯಲೆಂದು ಕೊಳಕ್ಕೆ ಇಳಿದಿದ್ದರು. ಕೂಡಲೇ ತಂತಿಯು ಮುರಿದು ಬಿದ್ದು, ವಿದ್ಯುತ್‌ ಸಂಚಾರ ಆರಂಭವಾಗಿ ಈ ಅವಘಡ ಸಂಭವಿಸಿದೆ.

ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಅಸ್ಸಾಂ ವಿದ್ಯುತ್‌ ವಿತರಣಾ ಸಂಸ್ಥೆ(ಎಪಿಡಿಸಿಎಲ್‌)ಯ ಸಿಬ್ಬಂದಿಯ ಮನೆ ಮೇಲೆ ದಾಳಿ ನಡೆಸಿದ್ದಾರೆ. ಇದೇ ವೇಳೆ, ಘಟನೆಯ ತನಿಖೆಗೆ ಆದೇಶಿಸಿರುವ ಸಿಎಂ ಸರ್ಬಾನಂದ ಸೊನೊವಾಲ್‌, ಎಪಿಡಿಸಿಎಲ್‌ ಉಪವಿಭಾಗೀಯ ಅಧಿಕಾರಿ ಸೇರಿದಂತೆ ನಾಲ್ವರು ನೌಕರರನ್ನು ಅಮಾನತು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next