Advertisement
ಬಜಪೆ ಪೇಟೆಯ ಚರಂಡಿ ಬದಿಯಲ್ಲೇ ಇರುವ ಈ ಟ್ರಾನ್ಸ್‌ಫಾರ್ಮರ್ ಕಂಬದ ಸಮೀಪದಿಂದಲೇ ಕಾನ್ವೆಂಟ್ ಮೂಲಕ ಮುರ ನಗರಕ್ಕೆ ಹೋಗುವ ರಸ್ತೆ ಇದೆ. ಅಲ್ಲದೇ ಇಲ್ಲಿ ರಾಜ್ಯ ಹೆದ್ದಾರಿ 67 ಕೂಡ ಹಾದು ಹೋಗಿದೆ. ಹೀಗಾಗಿ ಇಲ್ಲಿ ವಾಹನ, ಜನ ಸಂಚಾರ ಅಧಿಕವಾಗಿರುತ್ತದೆ.
ಈ ಟ್ರಾನ್ಸ್‌ಫಾರ್ಮರ್ ಕಂಬದ ಕೆಳಗೆ ಜನರ ಓಡಾಟಕ್ಕೆ ಸಾಕಾಗುವಷ್ಟು ಜಾಗವಿದೆ. ಅಲ್ಲದೇ ಕೆಲವರು ವಾಹನಗಳನ್ನೂ ಇದರ ಸಮೀಪದಲ್ಲೇ ನಿಲ್ಲಿಸಿ ಹೋಗುತ್ತಾರೆ. ಫುಟ್‌ಪಾತ್ ಸಮೀಪದಲ್ಲೇ ಇರುವುದರಿಂದ ಶಾಲಾ ಮಕ್ಕಳು, ವಾಹನಗಳು ಇಲ್ಲೇ ನಿಲ್ಲುತ್ತವೆ. ರಸ್ತೆ ಕಿರಿದಾಗಿರುವುದರಿಂದ ಬೇರೆ ಜಾಗವೂ ಇಲ್ಲದೆ ಟ್ರಾನ್ಸ್ ಫಾರ್ಮರ್‌ನ ಕೆಳಗಿನಿಂದ ಸಂಚಾರ ಮಾಡುವ ಅನಿವಾರ್ಯತೆ ಪಾದಚಾರಿಗಳದ್ದು. ಅಲ್ಲದೇ ಮಳೆ, ಬಿಸಿಲಿಗೆ ಕೊಡೆ ಹಿಡಿದು ಕೊಂಡು ಹೋಗುವ ವೇಳೆ ಟ್ರಾನ್ಸ್ ಫಾರ್ಮರ್ ತಂತಿಗೆ ಸ್ಪರ್ಶವಾದರೆ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಹೀಗಾಗಿ ಸುರಕ್ಷೆಯ ದೃಷ್ಟಿಯಿಂದ ಇದಕ್ಕೆ ಸೂಕ್ತ ರಕ್ಷಣಾ ಬೇಲಿ ಅಳವಡಿಸಲು ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳಬೇಕಿದೆ. ಜನರಿಂದ ವಿರೋಧ ಬಂದರೆ ಸಮಸ್ಯೆ
ಬಜಪೆ ಪೇಟೆಯ ರಸ್ತೆಯ ಬದಿ ಇರುವ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ರಕ್ಷಣಾ ಬೇಲಿಯನ್ನು ಶೀಘ್ರದಲ್ಲೇ ಹಾಕಲಾಗುವುದು. ಆದರೆ ಪೇಟೆಯ ರಸ್ತೆಯ ಬದಿಯಲ್ಲಿ ಇರುವುದರಿಂದ ಸಾರ್ವಜನಿಕರಿಗೆ ನಡೆದಾಡಲು ತೊಂದರೆಯಾಗಿ ವಿರೋಧ ಬರಬಹುದು. ಹೆಚ್ಚಿನ ಟ್ರಾನ್ಸ್‌ಫಾರ್ಮರ್ ಇದ್ದಲ್ಲಿ ರಕ್ಷಣಾ ಬೇಲಿ ಹಾಕುವಾಗ ಖಾಸಗಿ ಜಾಗದವರ ವಿರೋಧ ಬಂದಿದೆ. ಇದರಿಂದ ಸಮಸ್ಯೆಯಾಗುತ್ತದೆ.
- ಅರುಣ್, ಬಜಪೆ ಮೆಸ್ಕಾಂ ಅಧಿಕಾರಿ
Related Articles
ಬಜಪೆ ಪೇಟೆಯ ರಾಜ್ಯ ಹೆದ್ದಾರಿಯ 67 ಹಾಗೂ ಕಾನ್ವೆಂಟ್ ರಸ್ತೆಯ ಬದಿಯಲ್ಲಿರುವ ಟ್ರಾನ್ಸ್‌ಫಾರ್ಮರ್ ಅಪಾಯಕಾರಿಯಾಗಿದ್ದು, ಇದನ್ನು ಸ್ಥಳಾಂತರ ಮಾಡುವ ಅಥವಾ ತಡೆ ಬೇಲಿ ಅಳ ವ ಡಿ ಸುವ ಬಗ್ಗೆ ಪಂಚಾಯತ್ ಸಭೆಯಲ್ಲಿ ನಿರ್ಣಯ ಕೈಗೊಂಡು ಮೆಸ್ಕಾಂ ಇಲಾಖೆಗೆ ಮನವಿ ಮಾಡಲಾಗುವುದು.
– ರೋಝಿ ಮಥಾಯಸ್, ಅಧ್ಯಕ್ಷೆ, ಬಜಪೆ ಗ್ರಾಮ ಪಂಚಾಯತ್
Advertisement