Advertisement

ಆಯ್ಕೆಗನುಗುಣವಾಗಿ ಟೀಕೆ: ಮೋದಿ ಆಕ್ರೋಶ

02:20 AM Oct 13, 2021 | Team Udayavani |

ಹೊಸದಿಲ್ಲಿ: ಮಾನವ ಹಕ್ಕುಗಳ ಉಲ್ಲಂಘನೆ ವಿಚಾರದಲ್ಲಿ ದೇಶದಲ್ಲಿ ಕೆಲವರು ಅವರ ಆಯ್ಕೆಗನುಗುಣವಾಗಿ ಟೀಕೆ ಮಾಡುತ್ತಿದ್ದಾರೆ. ಕೆಲವು ಪ್ರಕರಣಗಳನ್ನು ಮಾತ್ರ ವೈಭವೀಕರಿಸಿ, ಉಳಿದ ಪ್ರಕರಣಗಳ ಬಗ್ಗೆ ತಿರುಗಿಯೂ ನೋಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಿಡಿಕಾರಿದ್ದಾರೆ.

Advertisement

ಉ.ಪ್ರ.ದಲ್ಲಿ ರೈತರ ಹತ್ಯೆ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಮಾತ್ರ ವಿಪಕ್ಷಗಳು ಮತ್ತು ಕೆಲವು ಸಂಘಸಂಸ್ಥೆಗಳು ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರದ ವಿರುದ್ಧ ಕಿಡಿಕಾರುತ್ತಿರುವ ಮಧ್ಯೆಯೇ ಪ್ರಧಾನಿ ಮೋದಿ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಯ 28ನೇ ಸಂಸ್ಥಾಪನ ದಿನದ ಅಂಗವಾಗಿ ಮಾತನಾಡಿದ ಅವರು, ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳನ್ನು ಕೆಲ­ವರು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ದೇಶದ ಗರಿಮೆಗೂ ಧಕ್ಕೆ ಬರುವುದಲ್ಲದೇ, ಪ್ರಜಾಪ್ರಭುತ್ವದ ಮೇಲೂ ಘಾಸಿ ಮಾಡುತ್ತದೆ ಎಂದಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ಮೋದಿ ಅವರು, ಜನರ ಅಭಿವೃದ್ಧಿಗಾಗಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಉಲ್ಲೇಖ ಮಾಡಿದರು. ಬಡವರು, ಮಹಿಳೆಯರು, ದಿವ್ಯಾಂಗರಿಗೆ ಆಗುತ್ತಿದ್ದ ಅನ್ಯಾಯಗಳನ್ನು ತಪ್ಪಿಸಲಾಗಿದೆ ಎಂದ ಅವರು, ಕೆಲವು ಪ್ರಕರಣಗಳಲ್ಲಷ್ಟೇ ಸದ್ದು ಮಾಡುವವರ ವಿರುದ್ಧವೂ ಕಿಡಿಕಾರಿದರು.

ಇದನ್ನೂ ಓದಿ:ನಮ್ಮ ಕೆಲಸ ಗುರುತಿಸಿ ಜೆಡಿಎಸ್‌ಗೆ ಮತ ಹಾಕುತ್ತಾರೆ : ಮಾಜಿ ಪ್ರಧಾನಿ ದೇವೆಗೌಡ

Advertisement

ಅಂದರೆ, ಒಂದು ಪ್ರಕರಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸುವವರು  ಇನ್ನೊಂದು ಪ್ರಕರಣ ನಡೆದಾಗ ಈ ಪ್ರಕರಣಕ್ಕೂ ತಮಗೂ ಸಂಬಂಧವೇ ಇಲ್ಲವೆಂಬ ರೀತಿಯಲ್ಲಿ ವರ್ತಿಸುತ್ತಾರೆ ಎಂದರು. ಮಾನವ ಹಕ್ಕುಗಳ ಉಲ್ಲಂಘನೆ ಎಂಬುದು ಸಣ್ಣಪುಟ್ಟ ವಿಷಯವಲ್ಲ. ಆದರೆ ಇದನ್ನು ರಾಜಕೀಯವಾಗಿ ತಮಗೆ ಲಾಭವಾಗುತ್ತದೆಯೋ ಅಥವಾ ನಷ್ಟವಾಗುತ್ತದೆಯೋ ಎಂಬ ರೀತಿಯಲ್ಲಿ ನೋಡುವುದು ಮಾತ್ರ ತಪ್ಪು ಎಂದರು.

ಕೋವಿಡ್‌ ಕಷ್ಟ ಕಾಲದಲ್ಲಿ ದೇಶದ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯ ನೀಡಿದ್ದೇವೆ. ಸಬ್ಕಾ ಸಾಥ್‌, ಸಬ್ಕಾ ವಿಕಾಸ್‌, ಸಬ್ಕಾ ವಿಶ್ವಾಸ್‌, ಸಬ್ಕಾ ಪ್ರಯಾಸ್‌ ಮಂತ್ರದಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ದೇಶದ ಪ್ರತಿಯೊಬ್ಬರಿಗೂ ಮಾನವ ಹಕ್ಕುಗಳ ಖಾತ್ರಿ ನೀಡಿದ್ದೇವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಸರಕಾರವು ಬಡವರು, ಹಿಂದು ಳಿದ ವರ್ಗದವರು, ಸಮಾಜದಲ್ಲಿನ ಕಟ್ಟಕಡೆ ಯವರ ಉದ್ಧಾರಕ್ಕಾಗಿ ಕೆಲಸ ಮಾಡಿ, ಮಾನವ ಹಕ್ಕುಗಳ ರಕ್ಷಣೆ ಮಾಡುತ್ತಿದೆ.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next