ಮಹಾನಗರ: ನಗರದಲ್ಲಿ ವೈಜ್ಞಾನಿಕ ರೀತಿಯಲ್ಲಿ ಹಂಪ್‌ಗಳಿರಬೇಕು ಎಂಬುವುದಾಗಿ ನಿಯಮಗಳು ಇದ್ದರೂ ಮಂಗಳೂರಿನಲ್ಲಿ ಇದನ್ನು ಮಾತ್ರ ಸಮರ್ಪ ಕವಾಗಿ ಪಾಲನೆ ಮಾಡಲಾಗುತ್ತಿದೆ. ನಗರದ ಹಲವು ಕಡೆಗಳಲ್ಲಿ ಅಪಾಯಕಾರಿ ಹಂಪ್ ಗಳಿದ್ದು, ವಾಹನ ಸವಾರರಿಗೆ ಅಪಾಯಕ್ಕೆ ಕಾರಣವಾಗಿದೆ.
ಕೊಡಿಯಾಲ್‌ಗುತ್ತು ರಸ್ತೆಯಲ್ಲಿ ಪ್ರತೀ ದಿನ ನೂರಾರು ವಾಹನಗಳು ಅತ್ತಿಂದಿತ್ತ ಸಂಚರಿಸುತ್ತವೆ. ಆದರೆ ಈ ರಸ್ತೆಯಲ್ಲಿರುವ ಅರ್ಧಂಬರ್ಧ ಹಂಪ್ಸ್ ಸರಿಪಡಿಸುವ ಗೋಜಿಗೆ ಸ್ಥಳೀಯಾಡಳಿತ ಹೋಗಿಲ್ಲ. ಇನ್ನು ರಸ್ತೆಯ ಮಧ್ಯ ಭಾಗದಲ್ಲಿ ಇಂಟರ್ ಲಾಕ್ ಅಳವಡಿಸಲಾಗಿದ್ದು, ಅದು ಅಪಾಯ ಸೂಚಿಸುತ್ತಿದೆ.
ಮನೋಹರ ಮಲ್ಯ ಮಂಜೇಶ್ವರ ಮಣ್ಣಗುಡ್ಡೆ ಅವರು “ಸುದಿನ’ಕ್ಕೆ ಪ್ರತಿಕ್ರಿಯಿಸಿ, “ನಗರದಲ್ಲಿ ಅಪಾಯಕಾರಿ ಹಂಪ್‌ಗ್ಳನ್ನು ಸರಿಪಡಿಸಲು ಪಾಲಿಕೆ ಮುಂದಾಗಬೇಕಿದೆ. ಕೊಡಿಯಾಲಗುತ್ತು ಬಳಿ ಇರುವ ಹಂಪ್ಸ್ ಅಪಾಯಕಾರಿಯಾಗಿದೆ. ಕೂಡಲೇ ಸ್ಥಳೀಯಾಡಳಿತ ಎಚ್ಚೆತ್ತು ಸಮಸ್ಯೆ ಬಗೆಹರಿಸಬೇಕು’ ಎನ್ನುತ್ತಾರೆ.
ಮಳೆಗಾಲ ಮುಗಿದರೂ ಬಣ್ಣ ಬಳೆದಿಲ್ಲ
ನಗರದಲ್ಲಿರುವ ಬಹುತೇಕ ಹಂಪ್ಸ್ ಗಳಲ್ಲಿ ಬಣ್ಣ ಇಲ್ಲ. ವರ್ಷದ ಹಿಂದೆ ಹಾಕಿದ ಬಣ್ಣ ಮಾಸಿದ್ದು, ಮಳೆಗಾಲ ಪೂರ್ಣಗೊಂಡರೂ ಬಣ್ಣ ಬಳಿಯುವ ಕೆಲಸಕ್ಕೆ ಪಾಲಿಕೆ ಮುಂದಾಗಲಿಲ್ಲ. ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ, ಕೊಟ್ಟಾರ, ಕಾಪಿಕಾಡ್ ಬಳಿ, ಬಲ್ಲಾಳ್‌ಬಾಗ್, ಉರ್ವಸ್ಟೋರ್ ಸಹಿತ ವಿವಿಧೆಡೆಗಳಲ್ಲಿ ಅಳವಡಿ ಸಿದ ಹಂಪ್‌ಗಳಲ್ಲಿ ಬಣ್ಣ ಇಲ್ಲ. ಇದ ರಿಂದ ರಾತ್ರಿ ಹೊತ್ತಿನಲ್ಲಿ ಸಂಚರಿಸುವವರಿಗೆ ಅಪಾಯ ಹಂಪ್ ಕಾಣದೆ ಉಂಟಾಗುವ ಸಂಭವವಿದೆ.