Advertisement
ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ಅವರು, “”ತಮ್ಮ ಹಿಂದಿನ ಆಸನದಲ್ಲಿ ಕುಳಿತಿದ್ದ ಪ್ರಯಾಣಿಕನೊಬ್ಬ ತಮ್ಮ ಆಸನದ ಆರ್ಮ್ ರೆಸ್ಟ್ ಮೇಲೆ ತನ್ನ ಪಾದವಿರಿಸಿ ಕುಳಿತಿದ್ದ. ಇದನ್ನು ಹೇಗೋ ಸಹಿಸಿಕೊಂಡರೂ ಆನಂತರ ವಿಮಾನದಲ್ಲಿ ಬೆಳಕು ಮಾಯವಾದ ಮೇಲೆ, ಪಾದದ ಮುಂಭಾಗದಿಂದ ನನ್ನ ಭುಜ, ಕುತ್ತಿಗೆ, ಬೆನ್ನು ಸವರಲಾರಂಭಿಸಿದ. ಮಂದ ಬೆಳಕಿನಿಂದಾಗಿ ಆತನ ಕಿರುಕುಳವನ್ನು ಮೊಬೈಲಿನಲ್ಲಿ ದಾಖಲಿಸಲಾಗಲಿಲ್ಲ” ಎಂದಿದ್ದಾರೆ.
ಜೈರಾಳ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಮಹಿಳಾ ಆಯೋಗವು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮೂಲಕ ಪ್ರಕರಣದ ತನಿಖೆ ಮಾಡಿಸುವುದಾಗಿ ಹೇಳಿದೆ. ರಾಷ್ಟ್ರೀಯ ಮಹಿಳಾ ಆಯೋಗ ವಿಮಾನ ಸಂಸ್ಥೆ “ವಿಸ್ತಾರ’ಕ್ಕೆ ಹಾಗೂ ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದು ಪ್ರಕರಣ ತನಿಖೆ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.