Advertisement

ದಾಂಡೇಲಿ: ಕ್ಲಿನಿಕಿಗೆ ಬಂದು ಚಿಕಿತ್ಸೆ ಪಡೆದ ಗಾಯಗೊಂಡ ಕೋತಿ

02:54 PM Aug 20, 2020 | sudhir |

ದಾಂಡೇಲಿ: ತನ್ನ ಬಳಗದಿಂದ ಬೇರ್ಪಟ್ಟು ಸಮಾಜದ ಜನತೆಯ ಜತೆ ಅಂಜಿಕೆ, ಅಳುಕಿಲ್ಲದೇ ಒಡನಾಟ ಬೆಳೆಸಿಕೊಂಡ ಕೋತಿಯೊಂದು ಕ್ಲಿನಿಕ್‌ಗೆ ಬಂದು ಚಿಕಿತ್ಸೆ ಪಡೆದ ವಿಡಿಯೋವೊಂದು ವೈರಲ್‌ ಆಗಿದೆ. ತನ್ನ ಕಾಲಿಗೆ ಗಾಯ ಮಾಡಿಕೊಂಡಿದ್ದ ಈ ಕೋತಿ ಚಿಕಿತ್ಸೆಗಾಗಿ ನಗರದ ಕಲಾಪ್ರಸಾದ ಮೆಡಿಕಲ್‌ ಬಳಿಯಿರುವ ಡಾ| ರಶ್ಮಿ ಕಂಬದಕೋಣೆಯವರ ಕ್ಲಿನಿಕ್‌ ಬಳಿ

Advertisement

ಬಂದು ಅಂಗಲಾಚುತ್ತಿತ್ತು. ಇದನ್ನು ಗಮನಿಸಿದ ಡಾ| ರಶ್ಮಿಯವರು ತಕ್ಷಣವೇ ಪಕ್ಕದ ಮೆಡಿಕಲ್‌ ಮಾಲಕ ಉಮೇಶ ಸಪ್ರಯವರನ್ನು ಕರೆಯಿಸಿ, ಅವರ ಸಹಾಯ ಪಡೆದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಈ ಘಟನೆಯ ವಿಡಿಯೋವೊಂದು ಬುಧವಾರ ನಗರದಲ್ಲಿ ವೈರಲ್‌ ಆಗಿ ಗಮನ ಸೆಳೆದಿದೆ. ಕಳೆದ ಎರಡು ಮೂರು ತಿಂಗಳುಗಳಿಂದ ನಗರದಲ್ಲಿ ಸುದ್ದಿಯಲ್ಲಿರುವ ಈ ಹನುಮ ತನಗೆ ಗಾಯವಾಯಿತೆಂದರೆ ತಕ್ಷಣವೇ ಆಸ್ಪತ್ರೆ ಅಥವಾ ಕ್ಲಿನಿಕ್‌ಗಳ ಬಾಗಿಲ ಮುಂದೆ ಕುಳಿತುಕೊಂಡು ತನ್ನದೇ ಆದ ಹಾವಭಾವದಲ್ಲಿ ಚಿಕಿತ್ಸೆ ಕೇಳುತ್ತದೆ. ಚಿಕಿತ್ಸೆ ಪಡೆದ ಬಳಿಕವಷ್ಟೆ ಅಲ್ಲಿಂದ ತನ್ನ ಪಾಡಿಗೆ ತಾನು
ಹೊರಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next