Advertisement

ಪರ ರಾಜ್ಯದ ಟ್ರಕ್‌ಗಳಿಗೆ ಘೇರಾವ್

05:17 PM Apr 08, 2020 | Naveen |

ದಾಂಡೇಲಿ: ಕೊರೊನಾ ಭೀತಿ ನಡುವೆಯೇ ಪರ ರಾಜ್ಯಗಳಿಂದ ಕಚ್ಚಾವಸ್ತುಗಳನ್ನು ತುಂಬಿಕೊಂಡು ಬಂದ ಲಾರಿಗಳನ್ನು ಬರಮಾಡಿಕೊಂಡ ಸ್ಥಳೀಯ ವೆಸ್ಟ್‌ಕೋಸ್ಟ್‌ ಕಾಗದ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

Advertisement

ರೆಡ್‌ ಝೋನ್‌ನಲ್ಲಿರುವ ರಾಜ್ಯಗಳಾದ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಬೆಂಗಳೂರು, ಮಾಲೂರು, ಶಿಕಾರಿಪುರ ಹಾಗೂ ಇನ್ನಿತರ ಸ್ಥಳಗಳಿಂದ 30 ವಾಹನಗಳು ಬಂದಿವೆ. ಇದನ್ನು ಕಂಡ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿ ತಹಶೀಲ್ದಾರ್‌ ಶೈಲೇಶ ಪರಮಾನಂದ, ಪೌರಾಯುಕ್ತ ಡಾ| ಸೈಯದ್‌ ಜಾಹೇದ್‌ ಅಲಿ, ಪೊಲೀಸ್‌ ಉಪನಿರೀಕ್ಷಕರಾದ ಯಲ್ಲಪ್ಪಾ ಮತ್ತು ಮಂಜುಳಾ ನಾಯ್ಕವಾಡಿ ಅವರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಮತ್ತು ಆರಕ್ಷಕ ಸಿಬ್ಬಂದಿ ತಕ್ಷಣ ಹೊರ ರಾಜ್ಯದ ವಾಹನಗಳ 70ಕ್ಕೂ ಹೆಚ್ಚು ಚಾಲಕರು ಮತ್ತು ಕ್ಲೀನರ್‌ಗಳನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದಾರೆ.

ಆದಂ ದೇಸೂರ, ರೋಶನ್‌ ಜೀತ್‌, ಅಶ್ಪಾಕ್‌ ಶೇಖ್‌, ಅಸಿಫ್‌ ಮುಜಾವರ, ಪ್ರೀತಿ ನಾಯರ, ಪ್ರವೀಣ ಕೊಠಾರಿ, ಸುಭಾಷ ವಡ್ಡರ, ಚಂದ್ರಯ್ನಾ ಅಂಧಾಕಾರಿಮಠ, ಜಹಾಂಗೀರ ಖಾನ್‌ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next