ದಾಂಡೇಲಿ : ಮಹಿಳೆಯೊಬ್ಬರ ಹೊಟ್ಟೆಯೊಳಗಿದ್ದ ಒಂದು ಕೇಜಿ ಏಳುನೂರ ಐವತ್ತು ಗ್ರಾಂ ತೂಕದ ಗಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಪ್ರಾಣ ಉಳಿಸಿದ ಘಟನೆ ನಗರದ ಖ್ಯಾತ ಆಸ್ಪತ್ರೆಯಾದ ಪಾಟೀಲ ಆಸ್ಪತ್ರೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಹಳಿಯಾಳ ತಾಲೂಕಿನ ಬಿ.ಕೆ.ಹಳ್ಳಿಯ 45 ವರ್ಷ ವಯಸ್ಸಿನ ಸರಸ್ವತಿ ಬೇಕವಾಡಕರ ಎಂಬವವರೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯಾಗಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಹೊಟ್ಟೆ ನೋವೆಂದು ಸರಸ್ವತಿ ಬೇಕವಾಡಕರ ಅವರು ನಗರದ ಪಾಟೀಲ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆಯ ರೂವಾರಿಗಳು ಹಾಗೂ ಹೆಸರಾಂತ ವೈದ್ಯರಾದ ಡಾ: ಮೋಹನ ಪಾಟೀಲ ಅವರು ಸರಸ್ವತಿ ಬೇಕವಾಡಕರ ಅವರ ಆರೋಗ್ಯವನ್ನು ಪರಿಶೀಲಿಸಿ, ಗಡ್ಡೆಯಿರುವುದನ್ನು ತಿಳಿಸಿ, ಒಂದು ತಿಂಗಳ ಬಳಿಕ ಶಸ್ತ್ರಚಿಕಿತ್ಸೆಯ ಮೂಲಕ ಗಡ್ಡೆ ತೆಗೆಯೋಣ ಎಂದು ಹೇಳಿ, ಅಲ್ಲಿವರೆಗೆ ರಕ್ತ ಹೆಚ್ಚಾಗಕಲು ಮತ್ತು ಆರೋಗ್ಯ ಸುಧಾರಣೆಗಾಗಿ ಅಗತ್ಯ ಔಷಧಿಗಳನ್ನು ಹಾಗೂ ಚಿಕಿತ್ಸೆಯನ್ನು ನೀಡಿದ್ದರು.
ಒಂದು ತಿಂಗಳ ಬಳಿಕ ಇದೀಗ ಮಂಗಳವಾರ ಶಸ್ತ್ರಚಿಕಿತ್ಸೆಗಾಗಿ ಸರಸ್ವತಿ ಬೇಕವಾಡಕರ ಅವರು ಪಾಟೀಲ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಬುಧವಾರ ಬೆಳಗ್ಗೆ ಎಂದಿನಿಂತೆ ಡಾ: ಮೋಹನ ಪಾಟೀಲ ಅವರು ಅವರ ತಂಡದ ಜೊತೆ ಶಸ್ತ್ರಚಿಕಿತ್ಸೆ ಕಾರ್ಯಕ್ಕೆ ಮುಂದಾದರು. ಆರಂಭದಲ್ಲಿ ನಗರದ ಖ್ಯಾತ ಅರವಳಿಕೆ ತಜ್ಞರಾದ ಡಾ:ಸೈಯದ್ ಅವರು ಅರವಳಿಕೆ ಚಿಕಿತ್ಸೆಯನ್ನು ನೀಡಿದರು. ಇದಾದ ಬಳಿಕ ಸ್ವಲ್ಪ ಹೊತ್ತಿನಲ್ಲೆ ಡಾ: ಮೋಹನ್ ಪಾಟೀಲ ಅವರು ಶಸ್ತ್ರಚಿಕಿತ್ಸೆಯನ್ನು ಆರಂಭಿಸಿದರು. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಸರಸ್ವತಿ ಬೇಕವಾಡಕರ ಅವರ ಹೊಟ್ಟೆಯೊಗಿದ್ದ ಒಂದು ಕೇಜಿ ಏಳುನೂರ ಐವತ್ತು ಗ್ರಾಂ ತೂಕದ ಪೈಬ್ರಾಯಿಡ್ ಗಡ್ಡೆಯನ್ನು ಹೊರತೆಗದು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿ ಮುಂದಾಗಬಹುದಾಗಿದ್ದ ಪ್ರಾಣಾಪಾಯವನ್ನು ತಪ್ಪಿಸಿದರು.
ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಇನ್ನೊಂದು ವಾರ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡಿ, ಆನಂತರದಲ್ಲಿ ಸರಸ್ವತಿ ಬೇಕವಾಡಕರ ಅವರನ್ನು ಅವರ ಮನೆಗೆ ಕಳುಹಿಸಲಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಶಸ್ತಚಿಕಿತ್ಸೆಗೆ ಡಾ. ಮೋಹನ ಪಾಟೀಲ ಅವರ ಜೊತೆ ಡಾ. ಸೈಯದ್ ಹಾಗೂ ಸಹಾಯಕರಾಗಿ ಈಶ್ವರ ಪೂಜಾರಿ ಮತ್ತು ನರ್ಸ್ ಹೃತಿಕಾ ಸಹಕರಿಸಿದರು. ಡಾ. ಮೋಹನ ಪಾಟೀಲ ಹಾಗೂ ಅವರ ತಂಡದ ಕಾರ್ಯಕ್ಕೆ ಸರಸ್ವತಿ ಬೇಕವಾಡಕರ ಅವರ ಪರಿವಾರದವರು ಮೆಚ್ಚುಗೆ ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ರಾಜ್ಯದಲ್ಲೂ ದಲಿತ ಸಿಎಂ ಕೂಗು ಜೀವಂತ
ಕಳೆದ ಹಲವಾರು ವರ್ಷಗಳಿಂದ ಪಾಟೀಲ ಆಸ್ಪತ್ರೆಯನ್ನು ನಡೆಸಿಕೊಂಡು ಬರುತ್ತಿರುವ ಡಾ. ಮೋಹನ ಪಾಟೀಲ ಅವರು ಈವರೇಗೆ ಸಾಕಷ್ಟು ಇಂತಹ ಶಸ್ತ್ರಚಿಕಿತ್ಸೆಯನ್ನು ಮಾಡಿ ಅನೇಕರ ಪ್ರಾಣವನ್ನು ಉಳಿಸಿದ ಖ್ಯಾತಿಯನ್ನು ಹೊಂದಿದ್ದಾರೆ. ದಾಂಡೇಲಿ, ಹಳಿಯಾಳ, ಜೋಯಿಡಾ ಮಾತ್ರವಲ್ಲದೇ ಅಳ್ನಾವರ, ಬಿಡಿ, ಖಾನಪುರ, ಕಿರವತ್ತಿ, ನಿಗಧಿ, ಯಲ್ಲಾಪುರ ಕಡೆಗಳಿಂದಲೂ ಡಾ: ಮೋಹನ ಪಾಟೀಲರವರ ಬಳಿ ಚಿಕಿತ್ಸೆಗೆ ಜನ ಬರುತ್ತಿರುವುದು ಇವರ ಯಶಸ್ವಿ ಆರೋಗ್ಯ ಚಿಕಿತ್ಸೆಗೆ ಸಾಕ್ಷಿ ಎಂದರೆ ಅತಿಶಯೋಕ್ತಿ ಎನಿಸದು.