Advertisement

Dandeli:ಬೀದಿ ನಾಯಿಗಳ ದಾಳಿಯಿಂದ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಸ್ಥಳೀಯರು

03:18 PM Jun 10, 2023 | Team Udayavani |

ದಾಂಡೇಲಿ: ಬೀದಿ ನಾಯಿಗಳ ದಾಳಿಗೊಳಗಾದ ಜಿಂಕೆಯನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಮಾನವೀಯ ಘಟನೆ ಜೂ.10 ರ ಶನಿವಾರ ನಗರದ ಹಳೆದಾಂಡೇಲಿಯಲ್ಲಿ ನಡೆದಿದೆ.

Advertisement

ನಗರದ ಹಳೆದಾಂಡೇಲಿಯಲ್ಲಿ ಆಹಾರವನ್ನರಸಿ ಬಂದಿದ್ದ ಜಿಂಕೆಯೊಂದನ್ನು ಬೀದಿ ನಾಯಿಗಳು ಬೆನ್ನಟ್ಟಿ ದಾಳಿ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಮತ್ತು ಅಲ್ಲೆ ಇದ್ದ ಕಮ್ಯೂನಿಟಿ ಸಭಾಭವನದ ಸಿಬ್ಬಂದಿಗಳು ಸೇರಿ ಬೀದಿ ನಾಯಿಗಳನ್ನು ಓಡಿಸಿ, ಜಿಂಕೆಯನ್ನು ರಕ್ಷಿಸಿದ್ದಾರೆ.

ಜಿಂಕೆಯನ್ನು ಬೀದಿನಾಯಿಗಳು ಬೆನ್ನಟ್ಟಿ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ್ದವು. ಈ ಸಮಯದಲ್ಲಿ ಸ್ಥಳೀಯರು ಮತ್ತು ಸೈಯದ್ ಸಭಾಭವನದ ಸಿಬ್ಬಂದಿಗಳು ಸೇರಿ ನಾಯಿಗಳನ್ನು ಓಡಿಸಿ, ಜಿಂಕೆಯನ್ನು ರಕ್ಷಿಸಿ, ಸೈಯದ್ ಸಭಾಭವನದಲ್ಲಿ ಇರಿಸಿ, ಉಪಚರಿಸಿ, ಗಾಯಗೊಂಡ ಕಡೆ ಅರಶಿನ ಹಚ್ಚಿ ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.

ಸ್ಥಳಕ್ಕಾಗಮಿಸಿದ ಉಪ ವಲಯಾರಣ್ಯಾಧಿಕಾರಿ ಸಂದೀಪ್ ನಾಯ್ಕ ನೇತೃತ್ವದ ತಂಡ ಜಿಂಕೆಯನ್ನು ವಶಕ್ಕೆ ಪಡೆದು, ಪಶುವೈದ್ಯ ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿ, ಮರಳಿ ಕಾಡಿಗೆ ಬಿಟ್ಟು ಬಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next