Advertisement

ಅಕ್ರಮವಾಗಿ ಕೋಣಗಳ ಸಾಗಾಟ: ಲಾರಿ, ಕಾರು ಸಮೇತ ಆರೋಪಿಗಳ ಬಂಧನ

04:46 PM Oct 21, 2021 | Team Udayavani |

ಅಂಕೋಲಾ: ಲಾರಿಯೊಂದರಲ್ಲಿ ಅಕ್ರಮ ಹಾಗೂ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ 17 ಕೋಣಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಿದ ಘಟನೆ ತಾಲೂಕಿನ ಕೋಡಸಣಿ ಬಳಿ ನಡೆದಿದೆ.

Advertisement

ಲಾರಿಯಲ್ಲಿ 2.25 ಲಕ್ಷ ಮೌಲ್ಯದ 17 ಕೋಣಗಳನ್ನು ಅಹಾರ ನೀರಿಲ್ಲದೆ ಹಗ್ಗದಿಂದ ಕಟ್ಟಿ ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದ ತಂಡ ದಾಳಿ ನಡೆಸಿದರು.

ದಕ್ಕಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಹೈದರ ರೆಮಲನ್ ಬ್ಯಾರಿ, ಶಿರಗುಂಜಿಯ ಬೊಮ್ಮಯ್ಯ ಬೀರಣ್ಣ ನಾಯಕ ಹಾಸನ ಹಳೇಕೊಪ್ಪಲದ ಮಂಜೇಗೌಡ ಜವರೇಗೌಡ, ಕೇರಳದ ಕಾಸರಕೋಡಿನ  ಅಬ್ದುಲ ರಿಯಾಜ ತಂದೆ ಮಹಮ್ಮದ್ ಇವರನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಇನ್ನು ಕೇರಳದ ಕಾಸರಕೋಡಿನ ಮುತ್ತಾತೋಡಿಯ ಅಬೂಬಕರ ಅಬ್ದುಲ ಹಮೀದ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ:2020-21ನೇ ಸಾಲಿನ ಐಟಿಆರ್ ಫೈಲಿಂಗ್: ಈ 9 ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

Advertisement

ಪ್ರಕರಣದಲ್ಲಿ ದನಗಳನ್ನು ಸಾಗಿಸುತ್ತಿದ್ದ ಲಾರಿ ನಂ.ಕೆಎ01 ಎಎಲ್ 2779, ಹಾಗೂ ಲಾರಿಯನ್ನು ಎಸ್ಕಾರ್ಟ್ ಮಾಡುತ್ತಿದ್ದ ಇನೋವಾ ಕಾರು ನಂ.ಕೆಎಲ್.60 ಬಿ4004 ಮತ್ತು ಮೂರು ಮೊಬೈಲ್ 30000 ರೂ. ನಗದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ಕಾರ್ಯಾಚರಣೆ ನಡೆಸಿದ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದ ತಂಡದಲ್ಲಿ ಪಿ.ಎಸ್.ಐ ಪ್ರೇಮನಗೌಡ ಪಾಟೀಲ, ಪಿ.ಎಸ್.ಐ ಪ್ರವೀಣಕುಮಾರ ಸಿಬ್ಬಂದಿ ಆಸಿಫ ಕುಂಕೂರ, ಭಗವಾನ ಗಾಂವಕರ, ಮಂಜುನಾಥ ಲಕ್ಮಾಪುರ, ಸತೀಶ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next