Advertisement
ಈ ನಿಟ್ಟಿನಲ್ಲಿ ಭಾನುವಾರ ಬೆಳಗ್ಗಿನಿಂದ ನಗರದಲ್ಲಿ ಮಾಸ್ಕ್ ಧರಿಸದೇ ಅಡ್ಡಾಡುವವರನ್ನು ಹಾಗೂ ನಗರಕ್ಕೆ ಬರುವವರಲ್ಲಿ ಮಾಸ್ಕ್ ಧರಿಸದೇ ಬರುತ್ತಿರುವವರನ್ನು ಗುರುತಿಸಿ ದಂಡ ಆಕರಣೆ ಮಾಡಿರುವುದರ ಜೊತೆಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಯ್ತು. ನಗರದ ಸೋಮಾನಿ ವೃತ್ತದ ಹತ್ತಿರ, ಸಂಡೆ ಮಾರ್ಕೆಟ್, ಬಸ್ ನಿಲ್ದಾಣ ಮತ್ತು ಕೆಸಿ ವೃತ್ತದಲ್ಲಿ ತಹಶೀಲ್ದಾರ್ ಶೈಲೇಶ ಪರಮಾನಂದ, ಪೌರಾಯುಕ್ತರಾದ ಆರ್.ಎಸ್.ಪವಾರ್, ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ:ರಾಜೇಶ ಪ್ರಸಾದ, ಪಿಎಸೈ ಯಲ್ಲಪ್ಪ.ಎಸ್ ಅವರ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ, ನಗರ ಸಭೆ ಹಾಗೂ ಸಾರ್ವಜನಿಕ ಆಸ್ಪತ್ರೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ತಂಡ ಕಾರ್ಯಾಚರಣೆಗಿಳಿದಿತ್ತು.
Related Articles
Advertisement
ನಗರದ ಸಮೀಪದ ಬರ್ಚಿ ಚೆಕ್ ಪೊಸ್ಟ್ ಬಳಿಯೂ ವಿಶೇಷ ತಂಡವನ್ನು ರಚಿಸಿ, ನಿಯೋಜಿಸಲಾಗಿದ್ದು ಅಲ್ಲಿಯೂ ಗಂಟಲು ದ್ರವ ಪರೀಕ್ಷೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ. ಇನ್ನೊಂದು ತಂಡ ನಗರ ಹಾಗೂ ನಗರದ ಸುತ್ತಮುತ್ತಲ ಹೋಂ ಸ್ಟೇ, ರೆಸಾರ್ಟಿಗೆ ತೆರಳಿ ಪ್ರವಾಸಿಗರ ಗಂಟಲು ದ್ರವ ಪರೀಕ್ಷೆಯನ್ನು ಮಾಡುತ್ತಿದೆ.