Advertisement

Dandeli: ಅಂಬೇವಾಡಿಯ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡ ಮೊಸಳೆ: ಜನತೆಯಲ್ಲಿ ಹೆಚ್ಚಿದ ಆತಂಕ

03:14 PM Aug 19, 2024 | Team Udayavani |

ದಾಂಡೇಲಿ: ಐವರನ್ನು ಬಲಿ ಪಡೆದ ನಂತರ ದಾಂಡೇಲಿಯ ಮೊಸಳೆಗಳು ಸಲುವಾಗಿ ನಗರದಲ್ಲಿ ಮೊಸಳೆಗಳ ಬಗ್ಗೆ ಇದೀಗ ಭಯದ ವಾತಾವರಣ ನಿರ್ಮಾಣವಾಗಿದೆ.

Advertisement

ಅಂದ ಹಾಗೆ ಇಂದು ಸೋಮವಾರ ನಗರದ ಅಂಬೇವಾಡಿಯ ನಾಗದೇವತಾ ದೇವಸ್ಥಾನದ ಹತ್ತಿರ ಜಿ+2 ಮನೆಗಳ‌ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾಮಗಾರಿ ನಿಮಿತ್ತ ತೆಗೆದ ಹೊಂಡದಲ್ಲಿ ಮೊಸಳೆ‌‌ಯೊಂದು ಪ್ರತ್ಯಕ್ಷವಾಗಿದೆ. ಅಂದಾಜು 4 ಅಡಿ ಉದ್ದದ ಮೊಸಳೆಯು ನೀರಿನಿಂದ ಹೊರಬಂದು ವಿಶ್ರಾಂತಿ ಪಡೆಯುತ್ತಿರುವಾಗ ಸ್ಥಳಿಯ ನಿವಾಸಿ ವಿಜಯ ಮಾಶಾಳ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಮೊಸಳೆ ಪ್ರತ್ಯಕ್ಷವಾಗಿರುವುದು ಜನವಸತಿ ಪ್ರದೇಶದ ಹತ್ತಿರದಲ್ಲೆ ಆಗಿರುವುದರಿಂದ ಸ್ಥಳೀಯ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ಇನ್ನೂ ಇಲ್ಲೇ ಹತ್ತಿರದ ರಸ್ತೆಯಲ್ಲಿ ಶಾಲೆಯು ಕೂಡ ಇದ್ದು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲೆಗೆ ಹೋಗಿ ಬರುತ್ತಾರೆ. ಇಂಥ ಸಂದರ್ಭದಲ್ಲಿ ಏನಾದರೂ ಅನಾಹುತ ನಡೆದರೆ ಹೊಣೆ ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಚರ್ಚೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next