Advertisement

ಜನವರಿಯಲ್ಲಿ ದಂಡುಪಾಳ್ಯ-3

11:01 AM Dec 27, 2017 | Team Udayavani |

“ದಂಡುಪಾಳ್ಯ 2′ ಚಿತ್ರ ಬಿಡುಗಡೆಯಾಗಿ ಕೆಲವೇ ದಿನಗಳ ಅಂತರದಲ್ಲಿ “ದಂಡುಪಾಳ್ಯ 3′ ಚಿತ್ರವನ್ನು ಸಹ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಶ್ರೀನಿವಾಸ್‌ ರಾಜು ಹೇಳಿಕೊಂಡಿದ್ದರು. ಆದರೆ, ಚಿತ್ರ ಬಿಡುಗಡೆಯಾಗಿ ಹಲವಾರು ವಿವಾದಗಳೆದ್ದು, ಅದೆಲ್ಲಾ ತಣ್ಣಗಾಗುವುದಕ್ಕೆ ಸ್ವಲ್ಪ ಸಮಯವಾಯಿತು. ಇದೆಲ್ಲದರಿಂದ ತಡವಾದ “ದಂಡುಪಾಳ್ಯ 3′ ಬಿಡುಗಡೆಗೆ ಸಜ್ಜಾಗಿದೆ.

Advertisement

ಬಹುಶಃ ಮುಂದಿನ ವರ್ಷದ ಆರಂಭದಲ್ಲಿ, ಅಂದರೆ ಜನವರಿಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗಾಗಲೇ ಮೊದಲ ಹಂತವಾಗಿ ಇದೀಗ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಹಿಂದಿನ ಎರಡು ಭಾಗಗಳಂತೆ, ಈ ಚಿತ್ರ ಸಹ ವಿಚಿತ್ರ ಮತ್ತು ವಿಕ್ಷಿಪ್ತವಾಗಿ ಕಂಡರೆ ಆಶ್ಚರ್ಯವಿಲ್ಲ. ಈ ಹಿಂದಿನ ಚಿತ್ರಗಳಲ್ಲಿ ನಟಿಸಿದ ಕಲಾವಿದರೇ ಇಲ್ಲೂ ಮುಂದುವರೆದಿದ್ದು, ಚಿತ್ರದಲ್ಲಿ ಪೂಜಾ ಗಾಂಧಿ,

ರವಿಶಂಕರ್‌, ಮಕರಂದ್‌ ದೇಶಪಾಂಡೆ, ರವಿ ಕಾಳೆ, ಶ್ರುತಿ, ಮುನಿ, ಪೆಟ್ರೋಲ್‌ ಪ್ರಸನ್ನ, ಜಯದೇವ್‌, ಸಂಜನಾ, ಕರಿಸುಬ್ಬು, ಡ್ಯಾನಿ ಕುಟ್ಟಪ್ಪ ಮುಂತಾದವರು ಅಭಿನಯಿಸಿದ್ದಾರೆ. ವೆಂಕಟ್‌ ಪ್ರಸಾದ್‌ ಅವರು ಈ ಭಾಗದ ಛಾಯಾಗ್ರಹಣ ಮಾಡಿದರೆ, ಅರ್ಜುನ್‌ ಜನ್ಯ ಅವರ ಸಂಗೀತವಿದೆ. ಇನ್ನು ಸಿ. ರವಿಚಂದ್ರನ್‌ ಅವರ ಸಂಕಲನ ಈ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next