Advertisement

ಜನಮನ ರಂಜಿಸಿದ ನೃತ್ಯ ಗಾನ ಸಂಭ್ರಮ

06:00 AM Nov 16, 2018 | |

ಸಂಗೀತ, ನೃತ್ಯಗಳ ಪ್ರದರ್ಶನ ಶಿಕ್ಷಣದ ಅವಿಭಾಜ್ಯ ಅಂಗ ವಾಗಿದ್ದು  ಕಲೆಗಳ ಬೆಳವಣಿಗೆಗೆ ಪೂರಕವಾಗಿದೆ. ಇವುಗಳು ಮನರಂಜನೆ ಒದಗಿಸುವುದು ಮಾತ್ರವಲ್ಲದೆ ವ್ಯಕ್ತಿಯನ್ನು ಸಂವೇದನಾಶೀಲರನ್ನಾಗಿಸುತ್ತದೆ .ಅಂತಹ ಕಾರ್ಯಕ್ರಮ ವಿಟ್ಲ ಶ್ರೀ ಭಗವತಿ ದೇವಸ್ಥಾನದಲ್ಲಿ ಇತ್ತೀಚೆಗೆ ಮೂಡಿಬಂತು. ಇನಿದನಿ ಕಲಾ ಬಳಗ ವಿಟ್ಲ 10 ಜನ ನೃತ್ಯ ಕಲಾವಿದರು, ಇಷ್ಟೇ ಜನ ಹಾಡುಗಾರರು ಪ್ರಸ್ತುತಪಡಿಸಿದ ಸಮೂಹ ನೃತ್ಯ ಸುಂದರವಾಗಿ ಮೂಡಿಬಂತು. ವಿಘ್ನ ವಿನಾಶಕ ಗಣೇಶ ಸ್ತುತಿಯೊಂದಿಗೆ ಪ್ರಾರಂಭಗೊಂಡು ಹೂವಲ್ಲಿ ಜೇನು ಗಟ್ಟದೇನು, ನಾಟ್ಯಂ ಟೆಲಿ ಫಿಲ್ಮ…ನಿಂದ ಆಯ್ದ ಈ ಕುಚುಪುಡಿ ನೃತ್ಯ ಮೆಚ್ಚುಗೆ ಪಡೆಯಿತು. ಶೇಪ್‌ ಆಫ್ ಯು ಇಂಗ್ಲಿಷ್‌ ಪದ್ಯಕ್ಕೆ ನರ್ತಿಸಿ, ತುಜೆ ಯಾದ್‌ ಕರ್‌ಲಿಯಾ ಹೈ ಹಿಂದಿ ಹಾಡಿಗೂ ನರ್ತಿಸಿದರು, ಗೂರ್ಮ ಗೂರ್ಮಗಿ ರಾಜಸ್ಥಾನಿ ಜನಪದ ನೃತ್ಯಕ್ಕೆ ಹೆಜ್ಜೆ ಹಾಕಿದರು, ದಿತಿರೆ ದಿತಿರೆ ತೈ ಸಿನಿಮಾ ಹಾಡಿಗೂ ಕುಣಿದರು. ದುರ್ಗಾ ತರಂಗ್‌ ದೇವಿಯ ವರ್ಣಿಕೆಯ ಕೂಚುಪುಡಿ ನೃತ್ಯದಲ್ಲಿ ಕು| ಸಿಂಚನಾ ಲಕ್ಷ್ಮೀ ಕೋಡಂದೂರು ಮತ್ತು ಪ್ರಜ್ಞಾ ಮಾದೆಕಟ್ಟೆ ಮಿಂಚಿದರು. ಈ ಹಸಿರು ಸಿರಿಯಲಿ, ಕಣ್ಣಂಚಿನ ಈ ಮಾತಲಿ, ಭಾವದಲೆಯಲಿ, ಎಲ್ಲೆಲ್ಲೂ ಸಂಗೀತವೇ, ರೆಕ್ಕೆ ಇದ್ದರೆ ಸಾಕೆ, ಶಿಲೆಗಳು ಸಂಗೀತವೇ, ಯಾಕೆ ಬಡಿದಾಡುತ್ತಿ, ಕಣ ಕಣವೆ ಶಾರದೆ ಹಾಡುಗಳನ್ನು ಹಾಡಿ ರಂಜಿಸಿದರು. 

Advertisement

ವೈಷ್ಣವಿ ಕಾಶಿಮs…, ಮೇಧಾ ನಾಯಕ್‌, ಪ್ರಣಮ್ಯಾ ಮಾದೆಕಟ್ಟೆ, ವಸುಂಧರಾ ವಿಟ್ಲ, ಧನ್ಯಾ ಶ್ರೀ ಚಣಿಲ, ಅನುಶ್ರೀ ಕನ್ಯಾನ, ಮಹಿಮಾ ಕುಳಮರ್ವ, ಸಿಂಚನಾ ವಿಟ್ಲ, ರಚನಾ ವಿಟ್ಲ ನೃತ್ಯ ವೈವಿಧ್ಯ ನೀಡಿದರು. ಲಹರಿ ವಿಟ್ಲ, ಸುಧಾ ವಿಟ್ಲ, ದೀಪ್ತಿ ವಿಟ್ಲ, ಅನುಶಾ ದಂಬೆ, ಪ್ರತೀಕ್ಷಾ, ಅಭಿಲಾಶ್‌ ವಿಟ್ಲ, ಮನಸ್ವಿ ಕುಳಮರ್ವ, ರಮ್ಯಾ ಕೆ., ಭವ್ಯ ಜ್ಯೋತಿ, ಅಶ್ವಿ‌ನಿ, ಸುಶ್ಮಿತಾ ನಾಯಕ್‌, ಶ್ರೀನಂದನ್‌ ಪುತ್ತೂರು, ಜಯಲಕ್ಷ್ಮೀ ಜಿ.ಎಂ. ವಿಟ್ಲ ಇವರ ನಿರ್ದೇಶನದಲ್ಲಿ ಮೂಡಿಬಂತು. ಮೋಹನ ಕಲ್ಯಾಣಿ ,ತಿಲ್ಲಾನ ನೃತ್ಯ, ಭವತು ಭಾರತಂ ನೃತ್ಯ ಭಾರತ ದೇಶದ ಭಕ್ತಿ ಗೀತೆಗೆ ನೃತ್ಯ ವೈವಿಧ್ಯ ಎಲ್ಲರ ಮನಸೂರೆಗೊಂಡಿತು. 

 ಕುಮಾರ್‌ ಪೆರ್ನಾಜೆ

Advertisement

Udayavani is now on Telegram. Click here to join our channel and stay updated with the latest news.

Next