Advertisement

ಕೊರಗಜ್ಜನ ವೇಷ ಧರಿಸಿ ನೃತ್ಯ: ಕ್ರಮಕ್ಕೆ ವಿಹೆಚ್‍ಪಿ ಆಗ್ರಹ

04:51 PM Jan 07, 2022 | Team Udayavani |

ಮಂಗಳೂರು: ಮುಸ್ಲಿಂ ಯುವಕ ಹಿಂದೂಗಳ ಆರಾಧ್ಯ ದೈವ ಕೊರಗಜ್ಜನ ವೇಷ ಧರಿಸಿ ಅವಮಾನ ಮಾಡಿದ ಕೃತ್ಯ ಖಂಡನೀಯ, ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ.

Advertisement

ಕೆಲ ದಿನಗಳ ಹಿಂದೆ ಸಾಲೆತ್ತೂರು ಕೊಳ್ನಾಡು ಗ್ರಾಮದ ಮದುವೆಯಲ್ಲಿ ಮಂಜೇಶ್ವರ ಮೂಲದ ಮುಸ್ಲಿಂ ವರ   ಹಿಂದೂಗಳ ಆರಾಧ್ಯ ದೈವ ಕೊರಗಜ್ಜನಂತೆ  ತಲೆಗೆ ಅಡಿಕೆ ಹಾಳೆಯ ಟೋಪಿಯನ್ನು ಧರಿಸಿ ಮುಖಕ್ಕೆ ಮಸಿಯನ್ನು ಬಳಿದು ವೇಷವನ್ನು ಧರಿಸಿ ವಿಚಿತ್ರವಾಗಿ ಕುಣಿದು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿದ್ದಾನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ:ಸಾಲೆತ್ತೂರು : ಮದುಮಗನಿಗೆ ಕೊರಗಜ್ಜನ ವೇಷ ಭೂಷಣ ಧರಿಸಿ ಅವಹೇಳನ

ಹಿಂದೂಗಳ ಆರಾಧ್ಯ ದೈವ ಕೊರಗಜ್ಜನನ್ನು ಮತ್ತು ಕೊರಗ ಸಮುದಾಯವನ್ನು ಅಮಾನಿಸಿರುವ ಕೃತ್ಯ ಅಮಾನವೀಯವಾಗಿದ್ದು ಇದನ್ನು ವಿಶ್ವ ಹಿಂದೂ ಪರಿಷತ್ ಖಂಡಿಸುತ್ತದೆ ಮತ್ತು  ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆಣಕಿ ಅವಮಾನಮಾಡುವ ಕೃತ್ಯ ನಿರಂತರವಾಗಿ ನಡೆಯುತ್ತಿದ್ದು ಅದರ ಮುಂದುವರಿದ ಭಾಗ ಇದಾಗಿದ್ದು ಪೊಲೀಸ್ ಇಲಾಖೆ ಯುವಕನ ಮೇಲೆ ಮತ್ತು ಈ ಕೃತ್ಯದಲ್ಲಿ ಭಾಗಿಯಾದವರ ಮೇಲೆ ಕಠಿಣ ಕಾನೂನು ಕ್ರಮಕೈಳ್ಳಬೇಕೆಂದು ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next