Advertisement

ಬೆಳಕಿನ ಹಬ್ಬದಲ್ಲಿ ನೃತ್ಯ- ಗಾಯನ

06:07 PM Nov 28, 2019 | mahesh |

ಸಾಧನ ಕಲಾ ಸಂಗಮ ಕುಂದಾಪುರ ಇದರ ವಿದ್ಯಾಥಿಗಳು ಮತ್ತು ಶಿಕ್ಷಕರು ಜೊತೆಗೂಡಿ ದೀಪಾವಳಿ ನೃತ್ಯ ಗಾಯನ ಕಾರ್ಯಕ್ರಮವನ್ನು ಕುಂದಾಪುರದ‌ಲ್ಲಿ ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮ ವಯಲಿನ್‌ ವಾದನ, ಕೀ ಬೋರ್ಡ್‌ ವಾದನ, ಸಂಗೀತ ಮತ್ತು ನೃತ್ಯ ಪ್ರದರ್ಶನಗಳನ್ನು ಒಳಗೊಂಡಿದ್ದವು. ಮೊದಲಿಗೆ ವಯಲಿನ್‌ನಲ್ಲಿ ವಿ|ರವಿಕುಮಾರ್‌ ಜಿ. ಇವರೊಂದಿಗೆ ಮಾ| ಶುಭಾಂಗ, ಡಾ| ಶ್ರೀದೇವಿ ಕಟ್ಟೆ, ಕು| ರಕ್ಷಾ ಇವರು ಲಿಂಗಾಷ್ಟಕ ಸ್ತೋತ್ರ, ಧರಣಿ ಮಂಡಲ ಮಧ್ಯದೊಳಗೆ…, ಗಾಯತ್ರಿ ಮಂತ್ರ, ಐಗಿರಿ ನಂದಿನಿ… ಮತ್ತು ಭಾಗ್ಯದಾ ಲಕ್ಷ್ಮೀ ಬಾರಮ್ಮ… ಮುಂತಾದ ಹಾಡುಗಳನ್ನು ಸೊಗಸಾಗಿ ನುಡಿಸಿದರು. ಇವರಿಗೆ ಮೃದಂಗದಲ್ಲಿ ಸಹಕರಿಸಿದವರು ವಿ. ಬಾಲಚಂದ್ರ ಭಾಗವತ್‌ರವರು. ಎರಡನೆಯ ಕಾರ್ಯಕ್ರಮವಾಗಿ ಕೀ ಬೋರ್ಡ್‌ ವಾದನದಲ್ಲಿ ಪ್ರಕಾಶ್‌ ರಾವ್‌ ಇವರಿಗೆ ಸಾಥಿಯಾಗಿ ಕು| ಚೈತ್ರಾ ಶ್ಯಾನುಭಾಗ್‌, ಕು: ಶರಧಿ ಕಾರಂತ್‌, ಕು| ರಂಜಿತಾ ಶೆಟ್ಟಿ, ಮಾ| ಶಮಂತ್‌, ಮಾ| ನಹುಷ ಮತ್ತು ವಾಸುದೇವ ವರ್ಣ ಇವರುಗಳು ಮಹಾಗಣಪತಿಂ ಮನಸಾ…, ಸಾಮಜವರಗಮನಾ…, ಭಾಗ್ಯದಾ ಲಕ್ಷ್ಮೀ ಬಾರಮ್ಮಾ…

Advertisement

ಇವುಗಳೊಂದಿಗೆ ಹಳೆಯ ಹಿಂದಿ ಚಿತ್ರಗೀತೆಗಳನ್ನು ನುಡಿಸಿದ್ದು ಮುದ ನೀಡಿತು. ಮೂರನೆಯದಾದ ಕರ್ನಾಟಕ ಸಂಗೀತದಲ್ಲಿ ಡಾ| ಶ್ರವ್ಯಾ ಚಿಪ್ಲೂನ್‌ಕರ್‌ ಇವರೊಂದಿಗೆ ಜ್ಯೂನಿಯರ್‌ ವಿದ್ಯಾರ್ಥಿಗಳಾದ ಕು| ಕೆ.ಎಸ್‌. ಸಿಂಚನಾ, ವೈಷ್ಣವಿ, ಅನ್ವಿತಾ, ಅಪೂರ್ವ, ಆಶಿಕಾ, ಕೀರ್ತನಾ, ಶೃತಿ, ಮಾ| ನಿರಂಜನ್‌ ಮತ್ತು ಸೀನಿಯರ್‌ ವಿಭಾಗದ ಕು| ಬ್ರಾಹ್ಮಿà, ಆವನೀ, ಸಿಂಚನಾ, ನಿಧಿ, ಪೂಜಾ, ಪ್ರಜ್ಞಾ, ಅಶ್ವಿ‌ನಿ ದೀಕ್ಷಿತರ ರಚನೆಯಾದ ಶಕ್ತಿ ಸಹಿತ ಗಣಪತಿಂ…(ಶಂಕರಾಭರಣ- ಆದಿತಾಳ), ಗುರುಗುಹ ಪದ ಪಂಕಜ…(ಶಂಕರಾಭರಣ- ಆದಿ ತಾಳ), ಪುರಂದರ ದಾಸರ ರಚನೆಯಾದ ಅಂತರಂಗದಲಿ ಹರಿಯ…(ಮೋಹನ ರಾಗ- ಮಿಶ್ರಛಾಪು), ಯಾದವ ನೀ ಬಾ…(ಅಭೋಗಿ- ಆದಿ ತಾಳ), ಪಟ್ಣಂ ಸುಭ್ರಹ್ಮಣ್ಯ ಅಯ್ಯರ್‌ ರಚನೆಯಾದ ವಂದೇಹಂ ಜಗದ್ವಲ್ಲಭಂ…(ಹಂಸಧ್ವನಿ- ಖಂಡಛಾಪು), ಮುತ್ತಯ್ಯ ಭಾಗವತರ್‌ ರಚನೆಯಾದ ಹಿಮಗಿರಿ ತನಯೇ…(ಶುದ್ಧ ಧನ್ಯಾಸಿ – ಆದಿ ತಾಳ), ದುರ್ಗಾದೇವಿ ದುರಿತ ನಿವಾರಿಣೀ…(ಆದಿತಾಳ – ನವರಸ ಕಾನಡ) ಮತ್ತು ಕೊನೆಯದಾಗಿ ಕಾಕೈ ಚಿರಾಗಿನಿಲೆ ನಂದಲಾಲ… (ರಾಗಮಾಲಿಕೆ- ಆದಿ ತಾಳ) ಇವುಗಳನ್ನು ಹಾಡಿದರು. ಮುಂದಿನ ಭರತನಾಟ್ಯ ಕಾರ್ಯಕ್ರಮದಲ್ಲಿ ಕು| ಸುಮನಾ, ಶ್ರಾವ್ಯಾ, ಶುಭಶ್ರೀ, ಚಿನ್ಮಯಿ, ರಕ್ಷಿತಾ, ಪ್ರಜ್ವಲಾ ಪುಷ್ಪಾಂಜಲಿ…, ಕಂಡೆನಾ ಗೋವಿಂದನಾ…, ಶೃಂಗಾ ಪುರಾಧೀಶ್ವರೀ…ಹಾಗೂ ಕೊನೆಯಲ್ಲಿ ತಿಲ್ಲಾನದೊಂದಿಗೆ ಮುಕ್ತಾಯ ನೀಡಿದರು. ಕೊನೆಯಲ್ಲಿ ಕು| ಪ್ರಾಪ್ತಿ , ಸ್ತುತಿ, ಸಾಕ್ಷಿ, ಅಧಿತಿ, ಚಿತ್ರಾ, ದಕ್ಷಾ, ಮನಸ್ವಿ, ವೈಷ್ಣವಿ, ಪೂರ್ವಿ ಈ ಎಲ್ಲಾ ಪುಟಾಣಿಗಳು ಗೊಂಬೆಯಾಟದ ಹಾಡು ಮತ್ತು ಆಯ್ದ ಜನಪದ ಹಾಡುಗಳಿಗೆ ಹಾಗೂ ಗೋವಿಂದಾ ಹರಿ ಗೋವಿಂದಾ… ಹಾಡಿಗೆ ಲವಲವಿಕೆಯ ಹೆಜ್ಜೆಯೊಂದಿಗೆ ಕುಣಿದರು.

ಕೆ. ದಿನಮಣಿ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next