Advertisement

ನೃತ್ಯದಲ್ಲಿ ಮೂಡಿದ ಗೀತ ಗೋವಿಂದ 

01:00 PM Dec 22, 2018 | |

ಸಂಸ್ಕೃತ ಸಾಹಿತ್ಯದಲ್ಲಿ ಜಯದೇವ ಕವಿಯ “ಗೀತಗೋವಿಂದ’ವು ಅತಿಪ್ರಮುಖವಾದ ಕೃತಿ. ಅದರಲ್ಲಿ ಭಕ್ತಿಯ ಪರಮ ಪ್ರೇಮರೂಪವನ್ನು ಬಹು ಅರ್ಥವತ್ತಾಗಿ, ಶೃಂಗಾರದ ಹಿನ್ನೆಲೆಯಲ್ಲಿ ಚಿತ್ರಿಸಲಾಗಿದೆ. ಈ ಶ್ರೇಷ್ಠ ಕೃತಿಯನ್ನು ನೃತ್ಯ ರೂಪಕದ ಮೂಲಕ ಡಾ. ಲಕ್ಷ್ಮೀ ಬಿ. ಅವರು ಪ್ರಸ್ತುತಪಡಿಸುತ್ತಿದ್ದಾರೆ. ಸಂಗೀತ-ನೃತ್ಯ-ಅಧ್ಯಾತ್ಮಿಕ ಹಿನ್ನೆಲೆಗಳಲ್ಲಿ ಕೃತಿಯ ಮೌಲ್ಯಗಳನ್ನು ವಿಮರ್ಶಿಸಿ, ನೃತ್ಯವನ್ನು ಸಂಯೋಜಿಸಲಾಗಿದೆ. ಗೀತಗೋವಿಂದ ಕೃತಿಯನ್ನು ನಾಟ್ಯಶಾಸ್ತ್ರದ ದೃಷ್ಟಿಯಲ್ಲಿ ಅಭ್ಯಸಿಸಿ ಬೆಂಗಳೂರು ವಿ.ವಿ.ಯ ನೃತ್ಯ ನಾಟಕ ಮತ್ತು ಸಂಗೀತ ವಿಭಾಗದಿಂದ ಡಾಕ್ಟರೇಟ್‌ ಪದವಿಯನ್ನೂ ಲಕ್ಷ್ಮೀ ಅವರು ಪಡೆದಿದ್ದಾರೆ. 

Advertisement

ಅದಮ್ಯಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್‌, ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ನಿವೃತ್ತ ಐ.ಎ.ಎಸ್‌. ಅಧಿಕಾರಿ ಡಾ. ಸಿ. ಸೋಮಶೇಖರ, ಕವಿ ಜರಗನಹಳ್ಳಿ ಶಿವಶಂಕರ್‌, ಕೇಂದ್ರ ಸಂಸ್ಕೃತಿ ಇಲಾಖೆಯ ಪರಿಣತ ಸಮಿತಿಯ ಸದಸ್ಯ ಡಾ. ಜಿ.ಕೆ. ಅಶ್ವತ್‌ ಹರಿತಸ್‌, ಕರ್ನಾಟಕ ಕಲಾಶ್ರೀ ಬಿ.ಕೆ. ವಸಂತಲಕ್ಷ್ಮೀ, ಸಂಸ್ಕೃತಿ ಚಿಂತಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಬಿ.ಬಿ.ಎಂ.ಪಿ. ಮಾಜಿ ಸದಸ್ಯ ನೋಟರಿ ಪಬ್ಲಿಕ್‌ ಪಿ. ಜಯ್‌ ಕುಮಾರ್‌ ಭಾಗವಹಿಸಲಿದ್ದಾರೆ. “ಗೀತಗೋವಿಂದಂ ನೃತ್ಯರೂಪಕ’ವು, ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಪ್ರದರ್ಶಿಸಲ್ಪಡುತ್ತಿದೆ. 

ಎಲ್ಲಿ?: ಜೆ.ಎಸ್‌.ಎಸ್‌. ಪಬ್ಲಿಕ್‌ ಶಾಲೆ, ದೇವಗಿರಿ ಶ್ರೀ ವೆಂಕಟರಮಣ ದೇವಸ್ಥಾನದ ಎದುರು, ಬನಶಂಕರಿ 2ನೇ ಹಂತ 
ಯಾವಾಗ?: ಡಿ. 27, ಗುರುವಾರ ಸಂಜೆ 5.30

Advertisement

Udayavani is now on Telegram. Click here to join our channel and stay updated with the latest news.

Next