ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹೆಜ್ಜೆ-ಗೆಜ್ಜೆ ನೃತ್ಯ ಸಂಸ್ಥೆಯ ರಜತ ಮಹೋತ್ಸವ ನೃತ್ಯಾಂಜಲಿ – 33 ರಲ್ಲಿ ಹೆಜ್ಜೆ- ಗೆಜ್ಜೆ ಹಳೇ ವಿದ್ಯಾರ್ಥಿ ಸಂಘದಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ಪುಷ್ಪಾಂಜಲಿ ಹಾಗೂ ಗಣೇಶ ಸ್ತುತಿಯಿಂದ ಪ್ರಾರಂಭವಾದ ಈ ನೃತ್ಯ ಕಾರ್ಯಕ್ರಮವು, ತೋಡಿ ರಾಗದ “ಮಾಯಾ ಮಯನ್ ಸೋದರಿಯೇ’ ಎಂಬ ದೇವಿಯನ್ನು ಕುರಿತಾದ ವರ್ಣವನ್ನು ಪ್ರದರ್ಶಿಸಿದರು. ಇದರಲ್ಲಿ ನವರಸ ಭಾವವನ್ನು ಸಂಚಾರಿ ಮೂಲಕ ಅಭಿನಯಿಸಿದರು.ಅನಂತರ ಯದುವಂಶ ತಿಲಕವ ವೇಷವಿದೇನೆ ಎಂಬ ಅಂತಃಪುರ ಗೀತೆಯನ್ನು ಭಾವಾಭಿನಯದ ಮೂಲಕ ವ್ಯಕ್ತ ಪಡಿಸಿದರು. ನಿರ್ದೇಶನ ಹಾಗೂ ನಟುವಾಂಗ ವಿ| ಯಶಾ ರಾಮಕೃಷ್ಣ, ಸುಶ್ರಾವ್ಯವಾದ ಗಾಯನದಲ್ಲಿ ವಿ|ಸಂಗೀತಾ ಬಾಲಚಂದ್ರ, ಕೊಳಲು ಸಹಕಾರದಲ್ಲಿ ವಿ| ಬಾಲಚಂದ್ರ ಭಾಗವತ್‌ರವರು ಹಿಮ್ಮೇಳ ಒದಗಿಸಿದ್ದರು.