Advertisement

ಬೆಳಗ್ಗೆ 4 ಗಂಟೆಯವರೆಗೆ ಡ್ಯಾನ್ಸ್ ಬಾರ್ ನಡೆಸುವವರೆ ಡ್ರಗ್ಸ್ ದಂಧೆಯ ಮೂಲ: ಕುಮಾರಸ್ವಾಮಿ

02:31 PM Sep 17, 2020 | keerthan |

ಬೆಂಗಳೂರು: ನಗರದಲ್ಲಿ ಬೆಳಗಿನ ಜಾವ 4 ಗಂಟೆವರೆಗೆ ಡ್ಯಾನ್ಸ್ ಬಾರ್ ನಡೆಸುವವರೆ ಡ್ರಗ್ಸ್ ದಂಧೆಯ ಮೂಲ. ಮೈಕ್ರೋ ಬ್ರೆವರೀಸ್ ಗೆ ಬಂಡವಾಳ ಯಾರು ಹಾಕಿದ್ದಾರೆ ಎನ್ನುವ ಬಗ್ಗೆ ತನಿಖೆ ನಡೆಯಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

Advertisement

ಅಧಿಕಾರದಲ್ಲಿರುವವರು, ಅಧಿಕಾರಿಗಳೇ ಮೈಕ್ರೋ ಬ್ರೆವರೀಸ್ ಗಳಹೂಡಿಕೆದಾರರು. ಪಾಪದ ಹಣ ಅಲ್ಲಿ ಹೂಡಿಕೆಯಾಗಿದೆ ಎಂದರು.

ಇದನ್ನೂ ಓದಿ: ಹೊಸದಿಲ್ಲಿಯ ಗೌಪ್ಯಸ್ಥಳದಲ್ಲಿ ದೇವೇಂದ್ರ ಫಡ್ನವಿಸ್- ರಮೇಶ್ ಜಾರಕಿಹೊಳಿ ಭೇಟಿ!

ಡ್ರಗ್ಸ್ ಪ್ರಕರಣಯ ತನಿಖೆ ಈಗಿನ ಹಾದಿಯಲ್ಲೇ ಮುಂದುವರೆದರೆ 15 ದಿನದಲ್ಲಿ ಪ್ರಕರಣ ಕೋಲ್ಡ್ ಸ್ಟೋರೇಜ್ ತಲುಪುವುದು ಖಚಿತ. ನಿಜವಾದ ಆ ಮೂಲ ಆರೋಪಿಗಳ ಪತ್ತೆ ಬಂಧನ ಆಗುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next