Advertisement
ಗಣಿ ಮತ್ತು ಭೂವಿಜ್ಞಾನ ಇಲಾಖೆ 2016ರಲ್ಲಿ ಲಕ್ಷಾಂತರ ರೂ.ಖರ್ಚು ಮಾಡಿ ಗದಗ ಜಿಲ್ಲೆಯ ಬಸಾಪೂರ ಕ್ರಾಸ್, ಅಡವಿಸೋಮಾಪುರ ಕ್ರಾಸ್, ದುಂದೂರು ಕ್ರಾಸ್, ಗೋನಾಳ ಕ್ರಾಸ್, ಮಾಗಡಿ-ಮಾಡಳ್ಳಿ ಕ್ರಾಸ್, ರಾಮಗಿರಿಕ್ರಾಸ್, ಹಳ್ಳಿಕೇರಿ, ಕುರವಿನಕೊಪ್ಪ, ಕೊರ್ಲಹಳ್ಳಿ, ಬೆಳವಣಕಿ, ಹೊಳೆಆಲೂರು, ಹಿರೇಹಳ್ಳ, ಅಚ್ಚಮಟ್ಟಿ ಕ್ರಾಸ್, ಕಣಿಕಿಕೊಪ್ಪ, ಹುಣಸಿಕಟ್ಟಿ, ಕಣ್ಣೂರು ಗ್ರಾಮದ ಬಳಿ ಸೇರಿ 16 ಸ್ಥಳಗಳಲ್ಲಿ ತನಿಖಾ ಠಾಣೆಗಳನ್ನು ಸ್ಥಾಪಿಸಿದೆ. ಈ ಪೈಕಿ ಕೊರ್ಲಹಳ್ಳಿ ಹಾಗೂ
ನರಗುಂದದಲ್ಲಿ ಮಾತ್ರ ಈ ಠಾಣೆಗಳು ಕಾರ್ಯ ನಿರ್ವಹಿಸುತ್ತಿದ್ದು, ಡಂಬಳ ವ್ಯಾಪ್ತಿಯ ಹಳ್ಳಿಕೇರಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತನಿಖಾ ಠಾಣೆ ಪಾಳು ಬಿದ್ದು ಕುಡುಕರ ಅಡ್ಡೆಯಾಗಿದೆ. ಕಟ್ಟಡ ಬಿರುಕು ಬಿಟ್ಟಿದೆ.
ಜಂತ್ಲಿ-ಶಿರೂರು ಭಾಗದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಸರ್ಕಾರಕ್ಕೆ ತೆರಿಗೆ ಪಾವತಿಸದೇ ಅಕ್ರಮವಾಗಿ ಅಕ್ರಮ ಕಲ್ಲು ಸಾಗಣೆ ಜೋರಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಅವಧಿ ಮುಗಿದರೂ ಅಕ್ರಮವಾಗಿ ರಾತ್ರೋರಾತ್ರಿ
ತುಂಗಭದ್ರಾ ನದಿತಟದಿಂದ ಟಿಪ್ಪರ್, ಟ್ರಾಕ್ಟರ್ ಮೂಲಕ ಮರಳು ಸಾಗಾಣಿಕೆ ದಂಧೆ ಎಗ್ಗಿಲ್ಲದೆ ಸಾಗಿದೆ. *ವಿಜಯ ಸೊರಟೂರ