Advertisement

“ದಮಯಂತಿ’ ಫಸ್ಟ್​​ಲುಕ್​​ ರಿಲೀಸ್

12:06 PM Oct 17, 2018 | Team Udayavani |

ನಟಿ ರಾಧಿಕಾ ಕುಮಾರಸ್ವಾಮಿ “ದಮಯಂತಿ’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಗೊತ್ತಿರುವ ವಿಚಾರ. ಇದೊಂದು ನಾಯಕಿ ಪ್ರಧಾನ ಸಿನಿಮಾವಾಗಿದ್ದು, ದಕ್ಷಿಣ ಭಾರತ ಭಾಷೆಗಳಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ನಿರ್ಮಿಸಲಾಗುತ್ತಿದೆ. ಜೊತೆಗೆ ಉತ್ತಮ ಗ್ರಾಫಿಕ್ಸ್ ಕೂಡ ಅಳವಡಿಸಲಾಗುತ್ತಿದ್ದು, ಇದೀಗ ಚಿತ್ರದಲ್ಲಿನ ರಾಧಿಕಾ ಅವರ ಲುಕ್ ರಿವೀಲ್ ಆಗಿದೆ.

Advertisement

ಹೌದು! ಮಹಿಳಾ ಪ್ರಧಾನ ಚಿತ್ರವಾಗಿರೋ “ದಮಯಂತಿ’ ಫಸ್ಟ್​​ಲುಕ್​​ನಲ್ಲಿ ರಾಧಿಕಾ ಮೈ ತುಂಬಾ ಆಭರಣಗಳು, ಬಲಕೆನ್ನೆಯ ಮೇಲೆ ಮಾರ್ಕ್ ಹಾಗೂ ರಗಡ್ ಲುಕ್‍​​​ ನೋಡುಗರ ಎದೆಯಲ್ಲಿ ನಡುಕ ಹುಟ್ಟಿಸುವಂತಿದೆ. ಇದೊಂದು ಹಾರರ್ ಸಿನಿಮಾವಾಗಿದ್ದು, ಮೊದಲ ಬಾರಿಗೆ ರಾಧಿಕಾ ಈ ಚಿತ್ರದಲ್ಲಿ ತುಂಬಾ ಡಿಫರೆಂಟ್​ ಆಗಿ ಕಾಣಿಸಿಕೊಂಡಿರುವುದು, ಫಸ್ಟ್​ ಲುಕ್​​ನಿಂದ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ತೆಲುಗಿನಲ್ಲಿ ತೆರೆಕಂಡ “ಅರುಂಧತಿ’, “ಭಾಗಮತಿ’ ಸಿನಿಮಾಗಳ ಮಾದರಿಯಲ್ಲಿ “ದಮಯಂತಿ’ ಸಿನಿಮಾ ಇರಲಿದ್ದು, ಪ್ರಸ್ತುತ ಕಾಲಘಟ್ಟದ ಕಥೆಯ ಜತೆಗೆ ಐತಿಹಾಸಿಕ ಕಥಾಹಂದರವೂ ಈ ಇರಲಿದೆಯಂತೆ. ತಾರಾಗಣದಲ್ಲಿ ತಬಲಾ ನಾಣಿ, ವಿಜಯ್ ಚೆಂಡೂರ್ ಸೇರಿದಂತೆ ಅನೇಕ ಹಾಸ್ಯ ಕಲಾವಿದರು ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ.

ಇನ್ನು ನವರಸನ್ ನಿರ್ದೇಶನದಲ್ಲಿ‌ ಮೂಡಿ ಬರಲಿರೋ “ದಮಯಂತಿ’ ಸಿನಿಮಾ ಹಾರರ್ ಕಮ್ ಥ್ರಿಲ್ಲರ್ ಚಿತ್ರವಾಗಿದೆ. ನವೆಂಬರ್ 12ಕ್ಕೆ ಚಿತ್ರದ ಮುಹೂರ್ತ ನೆರವೇರಲಿದ್ದು, ಅಂದೇ ಚಿತ್ರದ ಫಸ್ಟ್ ಲುಕ್ ಟೀಸರ್ ಸಹ ಬಿಡುಗಡೆ​ ಆಗಲಿದೆ. ಸದ್ಯ ರಾಧಿಕಾ ಕುಮಾರಸ್ವಾಮಿ ಅರ್ಜುನ್ ಸರ್ಜಾ ನಾಯಕತ್ವದ “ಕಾಂಟ್ರಾಕ್ಟ್’ ಮತ್ತು “ಭೈರಾದೇವಿ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next