Advertisement
ಸಚ್ಚೇರಿಪೇಟೆ ರೈಸ್ ಮಿಲ್ ಬಳಿ ಯಿಂದ ಕಡಂದಲೆ ಕಲ್ಲೋಳಿ ಸೇತುವೆಯ ವರೆಗಿನ ರಸ್ತೆಯ ಕೆಲ ಭಾಗಕ್ಕೆ ಕಾಂಕ್ರೀಟ್ ಹಾಕಿದ್ದ ಬಿಟ್ಟರೆ ಬಹುತೇಕ ಮಣ್ಣಿನ ರಸ್ತೆ ಇದೆ. ಸದ್ಯ ಇದು ಸಂಚಾರಕ್ಕೆ ಅಯೋಗ್ಯ ವಾಗಿದೆ. ಕಳೆದ 75 ವರ್ಷಗಳಿಂದಲೂ ಆಡಳಿತ ಈ ರಸ್ತೆಯ ಅಭಿವೃದ್ಧಿಗೆ ಮುಂದಾಗದಿರು ವುದು, ಜನರೂ ಈ ಬಗ್ಗೆ ಪ್ರತಿಕ್ರಿಯಿಸದಿರುವುದು ಅಭಿವೃದ್ಧಿ ಯಾಗದೆ ಇರಲು ಕಾರಣ ಎಂದು ಜನರಾಡಿಕೊಳ್ಳುತ್ತಿದ್ದಾರೆ.
ಸಚ್ಚೇರಿಪೇಟೆ ರೈಸ್ ಮಿಲ್‌ನ ಪಕ್ಕ ಅಂದರೆ ಹೊಟೇಲ್‌ನ ಹಿಂಭಾಗದ ಪಂಚಾಯತ್ ರಸ್ತೆ ಭಾರೀ ಹದಗೆಟ್ಟಿದ್ದು ಅಲ್ಲಲ್ಲಿ ಹೊಂಡಗಳಿರುವ ಪರಿಣಾಮ ಇಲ್ಲಿನ ಪಕ್ಕದ ಮನೆಯವರು ನಿರಂತರ ಕೆಸರಿನ ಸಿಂಚನ ಅನುಭವಿಸುತ್ತಿದ್ದಾರೆ. ಈ ಭಾಗದ ಜನರೇ ಸೇರಿ ಒಂದಿಷ್ಟು ಮಣ್ಣು ಹಾಕಿ ಹೊಂಡ ಮುಚ್ಚಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿದ್ದು ದುರಸ್ತಿಗೆ ಪಂಚಾಯತ್‌ಗೆ ಪದೇ ಪದೇ ಮನವಿ ಮಾಡಿದ್ದಾರೆ. ಕಡಂದಲೆ, ಬೋಳಕ್ಕೆ ಹತ್ತಿರದ ರಸ್ತೆ
ಈ ರಸ್ತೆ ಕಡಂದಲೆ ಹಾಗೂ ಬೋಳ ಗ್ರಾಮಗಳಿಗೆ ಹತ್ತಿರದ ಸಂಪರ್ಕ ರಸ್ತೆಯಾಗಿದ್ದು ವಿಧ ಶಾಲೆ, ಕಾಲೇಜು, ಕಚೇರಿಗಳಿಗೆ ಹೋಗುವ ಜನ ಇದೇ ರಸ್ತೆ ಬಳಸುತ್ತಿದ್ದಾರೆ. ಈ ರಸ್ತೆಯಲ್ಲಿ ಮುಂದಕ್ಕೆ ಸಾಗಿದರೆ ಪಂಚಾಯತ್ ನೀಡಿದ್ದ 80 ಕ್ಕೂ ಹೆಚ್ಚು ಸರಕಾರಿ ನಿವೇಶನಗಳಲ್ಲಿ ಜನ ವಾಸವಾಗಿದ್ದು ಅವರೆಲ್ಲರೂ ಇದೇ ರಸ್ತೆಯನ್ನು ಬಳಸಿ ಸಾಗಬೇಕಾಗಿದೆ.
Related Articles
ಪಂಚಾಯತ್ ರಸ್ತೆಯಾಗಿದ್ದರೂ ದುರಸ್ತಿ ಬಗ್ಗೆ ಪಂಚಾಯತ್ ಆಡಳಿತ ದಿವ್ಯ ನಿರ್ಲಕ್ಷé ತೋರುತ್ತಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
Advertisement
ಜಾಗದ ಸಮಸ್ಯೆ ಹಿಂದೆ ಪಂಚಾಯತ್ ವತಿಯಿಂದ ಈ ರಸ್ತೆಗೆ ಕಾಂಕ್ರೀಟ್ ಹಾಕಲು ಅನುದಾನ ಮಂಜೂರಾಗಿತ್ತು. ಜಾಗದ ತೊಂದರೆಯಿಂದ ರಸ್ತೆಯ ಮುಂದಿನ ಭಾಗಕ್ಕೆ ಕಾಂಕ್ರೀಟ್ ಹಾಕಲಾಗಿದೆ. ಇದೀಗ ರಸ್ತೆ ದುರಸ್ತಿಗೆ ಪಂಚಾಯತ್ ಸಿದ್ಧವಿದೆ. ಜಾಗದ ಸಮಸ್ಯೆ ಇಲ್ಲದಿದ್ದರೆ ಈ ರಸ್ತೆಯನ್ನು ಸರಿಪಡಿಸಲಾಗುವುದು.
-ಶುಭಾ ಪಿ.ಶೆಟ್ಟಿ,,ಅಧ್ಯಕ್ಷರು,
ಮುಂಡ್ಕೂರು ಗ್ರಾ.ಪಂ. ವಾಹನ ಸಂಚಾರ ಕಷ್ಟ
ಸಾವಿರಾರು ಜನ ಸಂಚಾರ ಇರುವ ಈ ಹಳೆಯ ರಸ್ತೆ ಇನ್ನೂ ದುರಸ್ತಿ ಕಂಡಿಲ್ಲ. ಕೆಸರು ಹಾಗೂ ಧೂಳಿನಿಂದ ಕೂಡಿರುವ ಈ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ಜನ ಸಂಚಾರ ಬಲು ಕಷ್ಟ.
-ಶಶಿಕಾಂತ ಸಚ್ಚೇರಿಪೇಟೆ, ಗ್ರಾಮಸ್ಥ