Advertisement

ಹದಗೆಟ್ಟ ಜೋಗೇಶ್ವರ ರಸ್ತೆ: ವಾಹನ ಸವಾರರ ಪರದಾಟ

04:45 PM Mar 02, 2020 | Suhan S |

ಮುಂಡಗೋಡ: ತಾಲೂಕಿನ ಸಾಲಗಾಂವ ಗ್ರಾಪಂ ವ್ಯಾಪ್ತಿಯ ಜೋಗೇಶ್ವರ ಗೌಳಿದಡ್ಡಿ ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಇದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

Advertisement

ಇಪ್ಪತ್ತಕ್ಕೂ ಅಧಿಕ ಮನೆಗಳಿರುವ ಈ ಜೋಗೇಶ್ವರಹಳ್ಳ ಎಂಬ ಪುಟ್ಟ ಗ್ರಾಮದಲ್ಲಿ ಗೌಳಿಸಮುದಾಯದ ಜನರು ವಾಸವಾಗಿದ್ದಾರೆ. ನೂರಕ್ಕೂ ಅಧಿಕ ಜನಸಂಖ್ಯೆಯಿರುವ ಈ ಗ್ರಾಮವೂ ತಾಲೂಕು ಕೇಂದ್ರದಿಂದ 6 ಕಿಮೀ ದೂರದಲ್ಲಿದೆ. ಹಳೆಕರಗಿನಕೋಪ್ಪದಿಂದ ಜೋಗೆಶ್ವರಹಳ್ಳ ಗ್ರಾಮ ಮೂರು ಕಿಮೀ ಅಂತರದಲ್ಲಿದ್ದು, ಈ ರಸ್ತೆಯೂ ಸಂಪೂರ್ಣ ಹಾಳಾಗಿದೆ. ರಸ್ತೆಯ ತುಂಬೆಲ್ಲ ಕಲ್ಲುಗಳು ತುಂಬಿದ್ದು, ಇದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾದ ಅನಿವಾರ್ಯತೆ ಎದುರಾಗಿದೆ.

ರಸ್ತೆ ತುಂಬಾ ಕಲ್ಲುಗಳಿರುವುದರಿಂದ ಬೈಕ್‌ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಬೈಕ್‌ ಚಲಾಯಿಸುವಾಗ ಸ್ವಲ್ಪ ನಿರ್ಲಕ್ಷ್ಯ ವಹಿಸಿದರು ಸಹ ಬಿಳ್ಳುವುದು ಖಚಿತ ಇನ್ನೂ ರಾತ್ರಿ ವೇಳೆ ಸಂಚರಿಸುವ ಬೈಕ್‌ ಸವಾರರು ಹಲವಾರು ಬಾರಿ ಬಿದ್ದು ಗಾಯ ನೂವು ಪಡಿಸಿಕೊಂಡಿದ್ದಾರೆ. ಹಳೆಕರಗಿನಕೋಪ್ಪ ಗ್ರಾಮದಿಂದ ನಮ್ಮ ಜೋಗೇಶ್ವರಹಳ್ಳ ಗ್ರಾಮದ ವರೆಗೆ ಸಂಪೂರ್ಣ ರಸ್ತೆ ಹಾಳಾಗಿದೆ ಈ ರಸ್ತೆಯಲ್ಲಿ ಸಂಚರಿಸಲು ತೀವ್ರತೊಂದರೆ ಅನುಭವಿಸುತ್ತಿದ್ದೇವೆ. ಆದ್ದರಿಂದ ಕೂಡಲೆ ನಮಗೆ ರಸ್ತೆ ಡಾಂಬರೀಕರಣ ಮಾಡಿ ಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ರಸ್ತೆ ಹಾಳಾಗಿರುವ ಕುರಿತು ಸಾರ್ವಜನಿಕರು ಸಚಿವ ಶಿವರಾಮ ಹೆಬ್ಟಾರ ಅವರ ಗಮನಕ್ಕೆ ತಂದಿದ್ದು ತಾಲೂಕಿನ ಎಲ್ಲ ಗೌಳಿದಡ್ಡಿ ಗ್ರಾಮಗಳ ರಸ್ತೆಯನ್ನು ನಿರ್ಮಿಸುತ್ತಿದ್ದು ಈ ರಸ್ತೆ ನಿಮಾಣಕ್ಕೂ ಸಹ ಸದ್ಯದಲ್ಲಿಯೆ ಸರಕಾರದಿಂದ ಅನುದಾನ ಬಿಡುಗಡೆ ಮಾಡಿಸಿ ರಸ್ತೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next