Advertisement
ಆಕಾಶಭವನದ ಆನಂದನಗರದಲ್ಲಿ ಮಂಗಳ ವಾರ ರಾತ್ರಿ ಜಯಶ್ರೀ ಅವರ ಮನೆ ಮೇಲೆ ಪಕ್ಕದ ಮನೆಯ ಆವರಣದಲ್ಲಿದ್ದ ಮರ ಬಿದ್ದು, ಅಡುಗೆ ಕೋಣೆ, ಬೆಡ್ ರೂಂಗಳಿಗೆ ಹಾನಿಯಾಗಿದೆ. ಯಾರಿಗೂ ಅಪಾಯ ಸಂಭವಿಸಿಲ್ಲ. ಅಗ್ನಿಶಾಮಕ ದಳದವರು ತೆರಳಿ ಮರವನ್ನು ತೆರವುಗೊಳಿಸಿದರು.
Related Articles
Advertisement
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ವಾಮಂಜೂರು ಸಮೀಪದ ಪಚ್ಚನಾಡಿಯ ಮಂಗಳ ಜ್ಯೋತಿ ಬಳಿ ಮಂಗಳವಾರ ಎರಡು ಮರಗಳು ಉರುಳಿ ವಿದ್ಯುತ್ ಕಂಬಗಳ ಮೇಲೆ ಬಿದ್ದ ಕಾರಣ ವಿದ್ಯುತ್ ಕಂಬಗಳೂ ಧರಾಶಾಯಿಯಾಗಿ ಈ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಬೈಕ್ ಸವಾರನಿಗೆ ಗಾಯ
ಪಡೀಲ್ ಸಮೀಪದ ಕಣ್ಣೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಳೆ ನೀರು ಹರಿದು ಹೋಗಲು ಅವ ಕಾಶ ಇಲ್ಲದೆ ರಸ್ತೆಯಲ್ಲಿ ನೀರು ನಿಂತ ಕಾರಣ ಲಾರಿ ಯೊಂದಕ್ಕೆ ಹಿಂಬದಿಯಿಂದ ಬೈಕ್ ಢಿಕ್ಕಿ ಹೊಡೆದು ಸವಾರ ಗಾಯಗೊಂಡಿದ್ದಾರೆ. ರಸ್ತೆಯಲ್ಲಿ ನೀರು ತುಂಬಿದ್ದರಿಂದ ಚಾಲಕ ಲಾರಿಯನ್ನು ನಿಧಾನಗೊಳಿಸಿದ್ದು, ಹಿಂಬದಿ ಇದ್ದ ಬೈಕ್ ಲಾರಿಗೆ ಢಿಕ್ಕಿ ಹೊಡೆದಿದೆ. ಟ್ರಾಫಿಕ್ ಜಾಮ್
ಬೆಳಗ್ಗಿನ ಹೊತ್ತು ಎಡೆಬಿಡದೆ ಮಳೆ ಬಂದ ಕಾರಣ ವಾಹನಗಳು ಅಧಿಕ ಸಂಖ್ಯೆಯಲ್ಲಿ ರಸ್ತೆಗಿಳಿದ ಹಿನ್ನೆಲೆಯಲ್ಲಿ ಕಂಕನಾಡಿ ಕರಾವಳಿ ವೃತ್ತ ಮತ್ತು ಜ್ಯೋತಿ ಜಂಕ್ಷನ್ ಬಳಿ ಟ್ರಾಫಿಕ್ ಜಾಮ್ ಕಂಡು ಬಂದಿತ್ತು. ಇದರಿಂದಾಗಿ ಪಂಪ್‌ವೆಲ್‌ನಿಂದ ಕಂಕನಾಡಿ ಕರಾವಳಿ ವೃತ್ತದ ಕಡೆಗೆ ಸಂಚರಿಸ ಬೇಕಾದ ಕೆಲವು ಬಸ್‌ಗಳನ್ನು ಚಾಲಕರು ನಂತೂರು – ಕದ್ರಿ ಮಲ್ಲಿಕಟ್ಟೆ – ಬೆಂದೂರು ಮಾರ್ಗದಲ್ಲಿ ಚಲಾಯಿಸಿದರು. ಬಿಜೈ ವೃತ್ತದಿಂದ ಕೆಎಸ್‌ಆರ್‌ಟಿಸಿ ಕಡೆಗೆ ಸಾಗುವ ಮುಖ್ಯ ರಸ್ತೆಯ ಚರಂಡಿಗೆ ಕಾಂಕ್ರೀಟ್ ಸ್ಲಾ Âಬ್ ಹಾಕಿ ಫುಟ್‌ಪಾತ್ ನಿರ್ಮಿಸುವ ಕಾಮಗಾರಿ ಇನ್ನೂ ಪೂರ್ತಿ ಗೊಳ್ಳದೆ, ಚರಂಡಿಯ ಚೇಂಬರ್‌ಗಳು ಬಾಯ್ದೆ ರೆದು ಅಪಾಯಕಾರಿಯಾಗಿ ಪರಿಣ ಮಿಸಿವೆ. ಮಳೆ ಬಂದಾಗ ರಸ್ತೆ ಬದಿ ಹರಿ ಯುವ ನೀರು ಈ ಚೇಂಬರ್ ಮೂಲಕ ಒಳಗೆ ಚರಂಡಿಗೆ ಸೇರುತ್ತಿದ್ದು, ಚರಂಡಿ ಯಲ್ಲಿ ನೀರು ತುಂಬಿರುವುದರಿಂದ ಹೊಂಡ ಇರುವ ಜಾಗ ಕಾಣಿಸದೆ ಪಾದಚಾ ರಿಗಳು ಮತ್ತು ದ್ವಿಚಕ್ರ ವಾಹನ ಸವಾರರು ಈ ಹೊಂಡಕ್ಕೆ ಬೀಳುವ ಅಪಾಯ ವಿದೆ. ನಗರದ ಹಲವೆಡೆ ಮಳೆ ನೀರು ಚರಂಡಿಗೆ ಹರಿದು ಹೋಗಲು ಸೂಕ್ತ ಅವಕಾಶಗಳು ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಮಳೆ ತೀವ್ರವಾದಾಗ ಇನ್ನಷ್ಟು ಅನಾಹುತಗಳು ಸಂಭವಿಸಿಸುವ ಎಲ್ಲ ಸಾಧ್ಯತೆಗಳಿವೆ. ಪಡೀಲ್ ರಸ್ತೆಯಲ್ಲಿ ಕೆಸರು
ಪಡೀಲ್ ರೈಲ್ವೇ ಮೇಲ್ಸೇತುವೆ ಇರುವ ತಾಣದಲ್ಲಿ ಮಳೆಯಿಂದಾಗಿ ಮೇಲ್ಭಾಗದ ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಬುಧವಾರ ಬೆಳಗ್ಗೆ ಸೇತುವೆಯ ಒಳ ಭಾಗದ ರಸ್ತೆಯಲ್ಲಿ ಕೆಸರು ತುಂಬಿತ್ತು. ಮಳೆ ಸುರಿಯುತ್ತಲೇ ಇದ್ದ ಕಾರಣ ಕೆಸರು ತುಂಬಿದ ಸೇತುವೆಯ ಒಳಭಾಗದಲ್ಲಿ ಸಂಚರಿಸಲು ದ್ವಿಚಕ್ರ ವಾಹನ ಸವಾರರು ಪರದಾಡಿದರು. ಕಾರು, ಇತರ ಲಘು ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆ ಉಂಟಾಯಿತು.