Advertisement

ಕೊಲ್ಲಮೊಗ್ರುನಲ್ಲಿ ಸೇತುವೆಗೆ ಹಾನಿ: ವಾಹನ ಸಂಚಾರ ಸ್ಥಗಿತ

09:44 PM Oct 09, 2020 | mahesh |

ಸುಬ್ರಹ್ಮಣ್ಯ: ಕೊಲ್ಲಮೊಗ್ರು ವಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ ಸೇತುವೆಗೆ ಹಾನಿ ಹಾಗೂ ಮನೆಗಳಿಗೆ ನೀರು ನುಗ್ಗಿದ ಘಟನೆ ಸಂಭವಿಸಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲೂ ಭಾರೀ ಮಳೆಯಾಗಿದೆ. ಸುಬ್ರಹ್ಮಣ್ಯ ವ್ಯಾಪ್ತಿ ಪರಿಸರದಲ್ಲಿ ಸಂಜೆ 7ರಿಂದ 10 ಗಂಟೆ ಯರೆಗೆ ಸುಮಾರು 3 ತಾಸು ಸುರಿದ ಮಳೆಗೆ ಅಪಾರ ಹಾನಿ ಸಂಭವಿಸಿದೆ. ಸುಬ್ರಹ್ಮಣ್ಯ ಪೇಟೆಯಲ್ಲಿ ಕೆಲವು ಮನೆಗಳಿಗೆ ಹಾಗೂ ಆದಿಸುಬ್ರಹ್ಮಣ್ಯ ಬಳಿ ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ.

Advertisement

ಹರಿಹರದ ಗುಂಡಿಹಿತ್ಲು ರಸ್ತೆಗೆ ಹಾನಿ
ದರ್ಪಣ ತೀರ್ಥ ಹಾಗೂ ಸುತ್ತಮು ತ್ತಲಿನ ಹಳ್ಳಗಳು ತುಂಬಿ ಹರಿದಿವೆ. ಏನೆಕಲ್ಲು ಗ್ರಾಮದ ಎಡ್ಡೋಳಿ ಎಂಬಲ್ಲಿ ದುಗ್ಗಪ್ಪ ಎಂಬವರು ಮನೆಯಂಗಳಲ್ಲಿ ಶೇಖರಿಸಿಟ್ಟಿದ್ದ ಅಡಿಕೆ ನೆರೆನೀರು ಪಾಲಾಗಿ ನಷ್ಟ ಸಂಭವಿಸಿದೆ. ಹರಿಹರ ಪಲ್ಲತಡ್ಕ ಸಂಪರ್ಕ ಐನೆಕಿದು ಗ್ರಾಮದ ಗುಂಡಡ್ಕ ಸೇತುವೆ ರಾತ್ರಿ ವೇಳೆ ಮುಳುಗಡೆಗೊಂಡಿದ್ದು, ಬಳಿಕ ತೆರೆವುಗೊಂಡಿದೆ. ಇತ್ತೀಚೆಗೆ ತೆರೆದುಕೊಂಡ ಹರಿಹರದ ಗುಂಡಿಹಿತ್ಲು ರಸ್ತೆ ಮಣ್ಣೆಲ್ಲ ಕೊರೆದು ನೀರುಪಾಲಾಗಿದೆ. ಯೋಗೀಶ್‌ ಕುಂದ್ರಡ್ಕ ಎಂಬವರ ತೋಟಕ್ಕೆ ಹಾನಿ ಉಂಟಾಗಿದೆ.

ಕಡಂಬಳ ಸೇತುವೆಗೆ ಹಾನಿ
ಕೊಲ್ಲಮೊಗ್ರು ಗ್ರಾಮದಲ್ಲಿ ದಿಢೀರ್‌ ಮಳೆಯಿಂದಾಗಿ ತೋಡುಗಳಲ್ಲಿ ನೆರೆ ನೀರು ಉಕ್ಕಿ ಹರಿದ ಪರಿಣಾಮ ಕೊಲ್ಲ ಮೊಗ್ರು-ಕಡಂಬಳ ರಸ್ತೆಯ ಸೇತುವೆ ಯೊಂದು ಸಂಪೂರ್ಣ ಹಾನಿಗೀಡಾಗಿದೆ. ಸೇತುವೆಯ ಪಿಲ್ಲರ್‌ ಕುಸಿದಿದ್ದು, ಸ್ಲ್ಯಾಬ್‌ಗೂ ಹಾನಿ ಉಂಟಾಗಿದೆ. ಸದ್ಯ ವಾಹನ ಸಂಚಾರ ನಿರ್ಬಂಧಿಸಲಾಗಿದೆ.ಕೊಲ್ಲಮೊಗ್ರು ಪೇಟೆಯಲ್ಲಿ ಪಿಡಬ್ಲ್ಯೂಡಿಗೆ ಸೇರಿದ ಮೋರಿಗಳಿಗೆ ಹಾಗೂ ಸಮೀಪದ ಮೂರು ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ.

ಕೊಲ್ಲಮೊಗ್ರು ಅಶ್ವತ್ಥಮರದ ಸಮೀಪ ಸೇತುವೆ ಬಳಿ ಮರವೊಂದು ತೋಡಿಗೆ ಉರುಳಿ, ನೆರೆನೀರು ಹತ್ತಿರದ ಮನೆಗಳಿಗೆ ನುಗ್ಗಿದೆ. ಕೊಲ್ಲಮೊಗ್ರು, ಹರಿಹರ ಪಂ. ವ್ಯಾಪ್ತಿಯ ಕಲ್ಲೆಮಠ-ಬೆಂಡೋಡಿ ಸಂಪರ್ಕ ರಸ್ತೆಯಲ್ಲಿ ಧರೆ ಕುಸಿದು ರಸ್ತೆಗೆ ಬಿದ್ದಿದೆ. ಬಾಳುಗೋಡು ಪದಕ ಸೇತುವೆ ಮುಳುಗಡೆಗೊಂಡಿದ್ದು, ಸೇತುವೆಗೂ ಹಾನಿ ಆಗಿದೆ. ಸೇತುವೆಗೆ ತೀರಾ ಹಾನಿ ಯಾಗಿ ರುವುದರಿಂದ ಅಪಾಯ ಸಂಭ ವಿಸುವ ಮುನ್ಸೂಚನೆಯನ್ನು ಸ್ಥಳೀ ಯರು ನೀಡಿದ್ದು, ಶೀಘ್ರ ಹೊಸ ಸೇತುವೆ ನಿರ್ಮಾಕ್ಕೆ ಆಗ್ರಹಿಸಿದ್ದಾರೆ. ಘಟನಾ ಸ್ಥಳಗಳಿಗೆ ಕೊಲ್ಲಮೊಗ್ರು ಪಿಡಿಒ ರವೀಚಂದ್ರ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಾಯಕಾರಿ ಹೊಂಡ ನಿರ್ಮಾಣ
ಅರಂತೋಡು: ಗುರುವಾರ ರಾತ್ರಿ ಸುರಿದ ಬಾರೀ ಮಳೆಗೆ ಸಂಪಾಜೆಯ ಗಡಿಕಲ್ಲಿನ ಮಸೀದಿಯ ಬಳಿ ಮಂಗಳೂರು ಮೈಸೂರು ರಾಜ್ಯ ಹೆದ್ದಾರಿಯ ಚರಂಡಿ ಕುಸಿದು ಅಪಾಯಕಾರಿ ಹೊಂಡ ನಿರ್ಮಾಣ ವಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ತತ್‌ಕ್ಷಣ ಸ್ಪಂದಿಸಿ ಮುಂದೆ ಆಗಬಹುದಾದ ದುರ್ಘ‌ಟನೆಗಳನ್ನು ತಪ್ಪಿಸಬೇ ಕಾಗಿ ಸ್ಥಳೀಯರು ವಿನಂತಿಸಿಕೊಂಡಿದ್ದಾರೆ.

Advertisement

ಬಂಟ್ವಾಳ: ಉತ್ತಮ ಮಳೆ
ಬಂಟ್ವಾಳ: ಬಂಟ್ವಾಳ ತಾಲೂಕಿನಾದ್ಯಂತ ಬಹುತೇಕ ಪ್ರದೇಶಗಳಲ್ಲಿ ಶುಕ್ರವಾರ ಸಂಜೆ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿದ್ದು, ಸಂಜೆ ಮಳೆಯಾಗಿತ್ತು.

ಸಂಚಾರಕ್ಕೆ ನಿರ್ಬಂಧ
ಗುರುವಾರ ರಾತ್ರಿ ಸುರಿದ ಮಳೆಗೆ ಗ್ರಾಮದ ಕೆಲವೆಡೆ ಹಾನಿ ಉಂಟಾಗಿದೆ. ಕಡಂಬಳ ಸೇತುವೆಗೆ ಹಾನಿ ಉಂಟಾಗಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸೇತುವೆ ದುರಸ್ತಿಗಾಗಿ ಜಿ.ಪಂ. ಎಂಜಿನಿಯರ್‌ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು.
-ರವಿಚಂದ್ರ , ಪಿಡಿಒ ಕೊಲ್ಲಮೊಗ್ರ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next