Advertisement

ಮಳೆ ತಗ್ಗಿದರೂ ಕಡಿಮೆಯಾಗದ ಹಾನಿ

01:34 AM Aug 08, 2019 | sudhir |

ಮಂಗಳೂರು/ ಉಡುಪಿ: ಕರಾವಳಿಯಲ್ಲಿ ಬುಧವಾರ ಮಳೆಯ ಅಬ್ಬರ ಮಂಗಳವಾರಕ್ಕೆ ಹೋಲಿಸಿದರೆ ಕೊಂಚ ಕಡಿಮೆಯಾಗಿತ್ತು. ಆದರೆ ಪಶ್ಚಿಮ ಘಟ್ಟದ ತಪ್ಪಲು, ಒಳನಾಡು ಮತ್ತು ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಬರೆ, ಮರಗಳು ಉರುಳಿದ್ದು, ಶಿರಾಡಿ ರಸ್ತೆಯಲ್ಲಿ ಮರ ಉರುಳಿ ಸಂಚಾರಕ್ಕೆ ಅಲ್ಪ ಕಾಲ ತಡೆ, ಮಾಣಿ – ಮೈಸೂರು ರಸ್ತೆಯಲ್ಲಿ ತಾಳತ್‌ಮನೆ ಬಳಿ ಭೂಕುಸಿತ ಬುಧ ವಾರದ ಪ್ರಧಾನ ಮಳೆ ಸಂಬಂಧಿ ಘಟನೆಗಳು.

Advertisement

ಮಳೆಯ ಅಬ್ಬರ ಕೊಂಚ ಇಳಿ ಮುಖವಾಗಿದ್ದರೂ ನದಿಗಳು ಉಕ್ಕಿಹರಿಯುತ್ತಿವೆ. ತಗ್ಗು ಪ್ರದೇಶ ಗಳು ಜಲಾವೃತವಾಗಿವೆ. ಉಡುಪಿ ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಗುರುವಾರವೂ ರಜೆ
ಭಾರೀ ಮಳೆ ಮುಂದುವರಿ ಯುವ ಸಂಭವ ಇರುವುದರಿಂದ ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಅನುಲಕ್ಷಿಸಿ ದ.ಕ., ಉಡುಪಿ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆಯನ್ನು ಗುರುವಾರಕ್ಕೂ ವಿಸ್ತರಿಸಲಾಗಿದೆ. ಕೊಡಗಿನಲ್ಲಿ ಆ.8 ಮತ್ತು ಆ.9ರಂದು ಕೂಡ ರಜೆ ಘೋಷಿಸಲಾಗಿದೆ.

ರೆಡ್‌ ಅಲರ್ಟ್‌
ಹವಾಮಾನ ಇಲಾಖೆಯು ಕರಾವಳಿ ಮತ್ತು ದಕ್ಷಿಣ ಒಳನಾಡುಗಳಲ್ಲಿ ಆ.8ರಂದು ಕೂಡ ರೆಡ್‌ ಅಲರ್ಟ್‌ ಘೋಷಿಸಿದೆ. ಅಲ್ಲದೆ ತಾಸಿಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಕಡಲುಬ್ಬರ ಇರಲಿದೆ ಎಂದು ಎಚ್ಚರಿಸಿದೆ. ಇದೇವೇಳೆ ಆ.9 ಮತ್ತು 10ರಂದು ಕರಾವಳಿ, ದ. ಒಳನಾಡುಗಳಲ್ಲಿ ಹವಾಮಾನ ಅಲರ್ಟ್‌ ಅನ್ನು ಆರೆಂಜ್‌ಗೆ, ಆ.11ರಂದು ಯೆಲ್ಲೋಗೆ ಇಳಿಸಿದೆ.

ಕನ್ಯಾನ: ಮನೆಗೆ ಗುಡ್ಡ ಕುಸಿತ
ವಿಟ್ಲ,: ಕನ್ಯಾನ ಗ್ರಾಮದಲ್ಲಿ ಮನೆಯೊಂದರ ಮೇಲೆ ಮಂಗಳವಾರ ರಾತ್ರಿ ಗುಡ್ಡ ಕುಸಿದು ಬಿದ್ದು ನಷ್ಟ ಸಂಭವಿಸಿದೆ.
ಕರೋಪಾಡಿ ಗ್ರಾಮದ ಆನೆಕಲ್ಲು ಸಮೀಪದ ಬೇಡಗುಡ್ಡೆ
ಸಾಯದಲ್ಲಿ ತೆಂಗಿನಮರ ವಿದ್ಯುತ್‌ ಕಂಬದ ಮೇಲೆ ಬಿದ್ದು ಕಂಬ ಮುರಿದುಬಿದ್ದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next