Advertisement
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಡ್ಯಾಂ ಗೇಟ್ ಮುರಿದಾಗ ರೈತರಿಗೆ ತುಂಬಾ ಆತಂಕವಿತ್ತು. ಡ್ಯಾಂನಿಂದ 20 ಟಿಎಂಸಿಗೂ ಹೆಚ್ಚಿನ ನೀರು ಹರಿದು ಹೋಗಿತ್ತು. ಆಗ ಡ್ಯಾಂಗೆ ಭೇಟಿ ನೀಡಿದ್ದೆ. ಗೇಟ್ ರಿಪೇರಿಯಾಗಿ ಮತ್ತೆ ಡ್ಯಾಂ ತುಂಬುತ್ತದೆ ಎಂದಿದ್ದೆ. ಮಳೆಯ ಕೃಪೆಯಿಂದಾಗಿ ಮತ್ತೆ ಜಲಾಶಯ ತುಂಬಿದೆ. ಮುಂಗಾರಿನ ಬೆಳೆಗೆ ನೀರು ದೊರೆಯುತ್ತದೆ. ಹಿಂಗಾರು ಬೆಳೆಗೂ ನೀರು ಲಭಿಸುವ ಭರವಸೆಯಿದೆ ಎಂದರು.
Related Articles
ಹಾಲಿನ ದರ ಹೆಚ್ಚಳದ ವಿಚಾರದಲ್ಲಿ ಮಾಗಡಿಗೆ ತೆರಳಿದ್ದ ವೇಳೆ ಅಲ್ಲಿನ ರೈತರು ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹಾಲಿನ ಪ್ರೋತ್ಸಾಹ ಧನ ಕಡಿಮೆಯಿದೆ ಎಂದು ಮನವಿ ಮಾಡಿದ್ದರು. ಹಾಲಿನ ದರ ಹೆಚ್ಚಳ ಮಾಡಿ ಎಂದು ನನಗೆ ಮನವಿ ಮಾಡಿದ್ದರು. ಆಗ ಒಂದು ವೇಳೆ ಸಚಿವ ಸಂಪುಟದಲ್ಲಿ ಇದನ್ನು ನಿರ್ಧರಿಸಿದರೆ ಹಾಲಿನ ದರದ ಹೆಚ್ಚಳದ ಲಾಭವನ್ನು ರೈತರಿಗೆ ಸಂಪೂರ್ಣವಾಗಿ ವರ್ಗಾಯಿಸಲಾಗುವುದು ಎಂದು ಭರವಸೆ ನೀಡಿದೆ. ಈ ಕುರಿತು ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿದರೆ ಆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
Advertisement