ಮೈಸೂರು: ದಲಿತರಲ್ಲಿನ ಎಡ-ಬಲ ಸಮುದಾಯಗಳು ಒಗ್ಗೂಡಿ ಪ್ರಸ್ತುತ ಕಸಿದುಕೊಳ್ಳುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಆಹಾರ ಹಕ್ಕುಗಳ ಕುರಿತು ದನಿ ಎತ್ತಬೇಕಿದೆ ಎಂದು ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್.ತುಕಾರಾಂ ಹೇಳಿದರು.
ದಸಂಸ ವತಿಯಿಂದ ಭಾನುವಾರ ಏರ್ಪಡಿಸಿದ್ದ ದಸಂಸ ಹೋರಾಟಗಾರ ದಿ.ಎಚ್.ಎಂ.ಚೆನ್ನಯ್ಯ ಒಂದು ನೆನಪು ಕಾರ್ಯಕ್ರಮದಲ್ಲಿ ಮಾತನಾಡಿ, 70-80ರ ದಶಕದಲ್ಲಿ ದಲಿತ ಸಮುದಾಯಗಳ ಹೋರಾಟವೆಂದರೆ ಲೋಕವೇ ಬೆಚ್ಚಿ ಬೀಳುತ್ತಿತ್ತು. ಸರ್ಕಾರ ಮತ್ತು ಅಧಿಕಾರಿಗಳ ಮಟ್ಟದಲ್ಲಿ ಆತಂಕ ಮನೆ ಮಾಡುತ್ತಿತ್ತು. ಆದರೀಗ ಸೃಷ್ಟಿಯಾಗಿರುವ ಅನೇಕ ಅವ್ಯವಸ್ಥೆಗಳಿಂದ ದಲಿತರು ಎಡ-ಬಲ ಎಂದು ಬಿಡಿಬಿಡಿಯಾಗಿದ್ದು, ಹೋರಾಟದ ಕಿಚ್ಚು ಕುಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಹಳ್ಳಿಗಳು ಇಂದು ಹಳ್ಳಿಗಳಾಗಿ ಉಳಿದಿಲ್ಲ. ನಗರಗಳಾಗಿ ಮಾರ್ಪಟ್ಟಿವೆ. ಪ್ರೀತಿ ಹಾಗೂ ವಿಶ್ವಾಸ ತುಂಬಿದವರು ಮರೆಯಾಗಿದ್ದಾರೆ. ದಲಿತರಲ್ಲಿ ದ್ರಾಷ್ಟÂ ಬೆಳೆದಿದೆ. ನಾನು, ನನ್ನಷ್ಟಕ್ಕೆ ಇದ್ದರೆ ಬದುಕಿದರಷ್ಟೇ ಸಾಕು ಎಂಬ ವಾತಾವರಣವಿದೆ. ಸಂಘಟನೆ ಶಾಖೆಗಳಲ್ಲಿ ಚದುರಿದ ವ್ಯವಸ್ಥೆ ಇದೆ. ದಲಿತರು 70ರ ದಶಕದ ಹೋರಾಟವನ್ನು ಸ್ಮರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖಂಡ ಡಾ.ಡಿ.ತಿಮ್ಮಯ್ಯ ಮಾತನಾಡಿ, ದಲಿತರಲ್ಲಿ ಬಲಿತವರು ಆರ್ಥಿಕವಾಗಿ ಹಿಂದುಳಿದ ದಲಿತರಿಗೆ ನೆರವು ನೀಡಲು ಮುಂದಾಗಬೇಕು. ಸಂಘಟನೆ ಯಲ್ಲಿ ಅನಿರೀಕ್ಷಿತವಾಗಿ ಸಾವನ್ನಪ್ಪಿದವರಿಗೆ ಭವಿಷ್ಯನಿಧಿ ಸ್ಥಾಪಿಸಿ ನೆರವು ನೀಡಬೇಕು ಎಂದರು. ಸಾಹಿತಿ ಕುಪ್ಪೆ ನಾಗರಾಜು ಮಾತನಾಡಿ, ಸಾಮಾನ್ಯ ಕಾರ್ಮಿಕ, ಸ್ವಾಭಿಮಾನಿ ಹೋರಾಟಗಾರ ಚೆನ್ನಯ್ಯ ಅಕ್ಷರ ಜಾnನ ಇಲ್ಲದಿದ್ದರೂ ಜನರ ನೋವಿಗೆ ಸ್ಪ$ಂದಿಸುವ ಗುಣವುಳ್ಳವರಾಗಿದ್ದರು ಎಂದು ಅವರೊಂದಿಗಿನ ಒಡನಾಟ ಸ್ಮರಿಸಿದರು.
ದಸಂಸ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿ, ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡು ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಚೆನ್ನಯ್ಯರ ಕುಟುಂಬಕ್ಕೆ ದಸಂಸ ವತಿಯಿಂದ 1 ಲಕ್ಷ ರೂ. ಸಂಗ್ರಹ ಮಾಡಿ ನೀಡಬೇಕೆಂದು ತೀರ್ಮಾನಿಸಿದ್ದೇವೆ. ಸರ್ಕಾರದಿಂದ ದೊರೆಯುವ ಸೌಲಭ್ಯ ಕೊಡಿಸಲು ಶ್ರಮಿಸುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಕುಟುಂಬಕ್ಕೆ ಸಹಾಯ ಮಾಡುವಂತೆ ಕೋರಿದ್ದೇವೆ ಎಂದು ಹೇಳಿದರು.
ದಸಂಸ ವಿಭಾಗೀಯ ಸಂಚಾಲಕ ದೇವಗಳ್ಳಿ ಸೋಮಶೇಖರ್, ದಸಂಸ ಹಿರಿಯ ಮುಖಂಡ ಹರಿಹರ ಆನಂದಸ್ವಾಮಿ, ಆಲಗೂಡು ಶಿವಕುಮಾರ್, ಎಚ್.ಎಂ.ಚನ್ನಯ್ಯರ ಪತ್ನಿ ಎಚ್.ಪಿ.ಸೆಲ್ವಿ, ಆರ್.ಎಸ್.ದೊಡ್ಡಣ್ಣ, ಲೋಕೇಶ್, ಲಕ್ಷ್ಮಣ್ ಇತರರು ಇದ್ದರು.