Advertisement

ಸರಕಾರಗಳಿಂದ ದಲಿತರ ಕಡೆಗಣನೆ ಸಲ್ಲ: ಅನ್ನದಾನಿ

10:20 AM Aug 29, 2017 | Team Udayavani |

ಕಲಬುರಗಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳು ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯುವಲ್ಲಿ ವಿಫಲವಾಗಿವೆ ಎಂದು ಜೆಡಿಎಸ್‌ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಶಾಸಕ
ಡಾ| ಕೆ. ಅನ್ನದಾನಿ ಆರೋಪಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಾವೇಶದ ಹಿನ್ನೆಲೆಯಲ್ಲಿ ನಗರದ ಸಾರ್ವಜನಿಕ ಉದ್ಯಾನವನದಲ್ಲಿರುವ ಜೆಡಿಎಸ್‌ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ 20 ತಿಂಗಳು ಅಧಿಕಾರ
ಮಾಡಿದಾಗ, ರಾಜ್ಯದ ಸಮಗ್ರ ಅಭಿವೃದ್ಧಿ ಜತೆಯಲ್ಲಿ ದಲಿತರ, ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ಹಿತಕಾಪಾಡಿದ್ದಾರೆ. ಅದನ್ನು ಮತ್ತೂಮ್ಮೆ ಜನರಿಗೆ ನೀಡಲು ನಾವು ಸಾಕಷ್ಟು ಕೆಲಸ ಮಾಡಬೇಕಿದೆ. ರಾಜ್ಯ ಸರಕಾರದ ಜನ ವಿರೋಧಿ ನೀತಿಯಿಂದಾಗಿ ಜೆಡಿಎಸ್‌ಗೆ ಅಧಿಕಾರಕ್ಕೆ ಬರಲು ಅವಕಾಶವಿದೆ. ಕಾರ್ಯಕರ್ತರು ಗ್ರಾಮೀಣ ಮಟ್ಟದಲ್ಲಿ ಪಕ್ಷ ಮತ್ತು ಕುಮಾರಸ್ವಾಮಿ ಅವರ ಕುರಿತು ಜನರಿಗೆ ತಿಳಿ ಹೇಳಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡಬೇಕು ಎಂದು ಹೇಳಿದರು. ಪಕ್ಷದ ಹಿರಿಯ ಮುಖಂಡ ಡಿ.ಜಿ. ಸಾಗರ ಮಾತನಾಡಿ, ದಲಿತರ ಹಕ್ಕುಗಳನ್ನು ರಕ್ಷಣೆ ಮಾಡುವ ಸರಕಾರದ ಅವಶ್ಯಕತೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ಜನರಿಗೆ ನೀಡಲು ಜೆಡಿಎಸ್‌ನಿಂದ ಮಾತ್ರವೇ ಸಾಧ್ಯ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಬಸವರಾಜ ತಡಕಲ್‌ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ ಅನ್ನು ಅಧಿಕಾರಕ್ಕೆ ತರಲು ಎಲ್ಲ ಪ್ರಯತ್ನ ಮಾಡಬೇಕು ಎಂದು ಹೇಳಿದರು. ಮುಕ್ರಂಖಾನ್‌, ಮುನಿರಾಜು, ಮನೋಹನ ಪೋದ್ದಾರ, ಡಾ| ಕೇಶವ ಕಾಬಾ, ವೆಂಕಟರಾಜು, ಅನೀಲ, ವೀರಣ್ಣ, ಮಹಿಮೂದ್‌ ಖುರೇಷಿ, ದೇವಿಂದ್ರ ಹಸನಾಪುರ, ದಿಲೀಪ ಹೊಡಲಕರ್‌, ಫರೀದ್‌ ಬಾಬಾ, ಮಲ್ಲಿಕಾರ್ಜುನ ಕುಸ್ತಿ, ಅರವಿಂದ ರಂಜೇರಿ, ಮಾನಿಕ ಶಹಾಪುರಕರ್‌, ಮಲ್ಲಿನಾಥ ಯಳಸೆಟ್ಟಿ, ಲೋಹಿತ ಕಟ್ಟಿ, ರಾನಗರಾಜ ಸಿಂಗೆ, ರಾಜಕುಮಾರ ಬಡದಾಳ, ಶಿವಶರಣರೆಡ್ಡಿ ಬಂಕಲಗಾ, ಪಂಡುರಂಗ ಧನ್ನಿ, ಮಾರುತಿ ಚವ್ಹಾಣ, ಬೈಲಪ್ಪ ಪಟ್ಟೇದಾರ, ಶಿವಲಿಂಗಪ್ಪ ಪಾಟೀಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next