Advertisement
ನಗರದಲ್ಲಿ ಭೂ ಅಭಿವೃದ್ಧಿ ಬ್ಯಾಂಕಿನ ಮಹಾಸಭೆಯಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರು ಮತ್ತು ಹಿಂದುಳಿದ ವರ್ಗದವರು ಗೋಮಾಂಸವನ್ನು ಸೇವೆ ಮಾಡುತ್ತಿಲ್ಲ. ಅವರೆಲ್ಲರೂ ಸಸ್ಯಾಹಾರಿಗಳಾಗಿದ್ದಾರೆ. ಆದರೂ ಸಹ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಸಮಾಜವನ್ನು ಅಪಹಾಸ್ಯ ಮತ್ತು ಅವಮಾನ ಮಾಡುತ್ತಿದ್ದಾರೆ. ಜೊತೆಗೆ ಹಿಂದೂ ಸಮಾಜವನ್ನು ಹೊಡೆಯಲು ಹುನ್ನಾರ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಏನು ಹೇಳ್ತಾರೆ ಅದಕ್ಕೆ ವಿರುದ್ಧವಾಗಿ ಫಲಿತಾಂಶ ಬರುತ್ತದೆ. ನಾನು ಅವರ ಜೊತೆ ಇದ್ದಾಗಿನಿಂದ ನೋಡುತ್ತಿದ್ದೇನೆ. ಕುಮಾರಸ್ವಾಮಿ ಅವರಪ್ಪನಾಣೆ ಸಿಎಂ ಆಗಲ್ಲ ಎಂದರು. ಆದರೇ ಹೆಚ್ ಡಿಕೆ ಸಿಎಂ ಆಗಿ ಬಿಟ್ಟರು. ಈಗ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದಿದ್ದಾರೆ, ಎಲ್ಲಾ ಕಡೆ ಬಿಜೆಪಿ ಗೆಲ್ಲುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೇಯೇ ಇಲ್ಲ. ಸಿಎಂ ಬಿಎಸ್ ವೈ ಆರೋಗ್ಯವಾಗಿದ್ದಾರೆ ಎಲ್ಲ ರೀತಿಯಲ್ಲೂ ಒಳ್ಳೆಯ ಆಡಳಿತ ನೀಡುತ್ತಿದ್ದಾರೆ ಎಂದ ಸಚಿವರು ಸಿಎಂ ಬದಲಾವಣೆ ಕೇವಲ ಮಾಧ್ಯಮದವರ ಸೃಷ್ಠಿ ಎಂದರು.
ಇದನ್ನೂ ಓದಿ: ಕೊಡಪಾನದ ಒಳಗೆ ಮೂಗು ತೂರಿಸಲು ಹೋಗಿ ತಲೆ ಸಿಲುಕಿಕೊಂಡು ಒದ್ದಾಡಿದ ಬೀದಿ ನಾಯಿ | Udayavni
ಸುಧ್ದಿಗಾರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇಬ್ಬರು ಮಾಜಿ ಸಿಎಂಗಳು ಪರಸ್ಪರ ನಿಂದನೆ ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ, ರಾಜ್ಯದಲ್ಲಿ ರಾಜಕಾರಣಿಗಳಿಗೆ ವಿಶೇಷ ಸ್ಥಾನಮಾನವಿದೆ. ರಾಜಕಾರಣಿಗಳು ಸಿದ್ಧಾಂತಗಳ ಬಗ್ಗೆ ಮಾತನಾಡಬೇಕು, ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು. ಒಬ್ಬರಿಗೊಬ್ಬರು ನಿಂದನೆ ಮಾಡಿಕೊಳ್ಳುವುದು ಜನರ ಮುಂದೆ ಸಣ್ಣದಾಗಿ ಕಾಣುತ್ತಾರೆ. ರಾಜಕಾರಣದಲ್ಲಿ ಸ್ಪರ್ಧೆ, ಪ್ರತಿಸ್ಪರ್ಧೆ ಸಾಮಾನ್ಯ, ಇಬ್ಬರಿಗೂ ಮನವಿ ಮಾಡುತ್ತೇನೆ ಪರಸ್ಪರ ನಿಂದನೆ ಮಾಡೊದು ನಿಲ್ಲಿಸಲಿ ಎಂದರು.
ರಾಜ್ಯದಲ್ಲಿ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸಾರಿಗೆಸಂಸ್ಥೆ ನಷ್ಟವನ್ನು ಅನುಭವಿಸಿದೆ. ಸಾರಿಗೆ ನೌಕರರ ವೇತನವನ್ನು ಪಾವತಿಸಲು ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದ್ದು, ಸಾರಿಗೆ ನೌಕರರ ಸಮಸ್ಯೆ ಶೀಘ್ರದಲ್ಲಿ ಬಗೆಹರಿಯಲಿದೆ ಎಂದು ವಿಶ್ವಾಸ ವ್ಯಕಪಡಿಸಿದರು.
ಜಿ.ಪಂ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ ನಾಗರಾಜ್, ಮರಳುಕುಂಟೆ ಕೃಷ್ಣಮೂರ್ತಿ, ಭೂ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸಿಬಿಐ ವಶದಲ್ಲಿದ್ದ ಕೆಜಿಗಟ್ಟಲೇ ಚಿನ್ನ ನಾಪತ್ತೆ: ಕೋರ್ಟ್ ನಲ್ಲಿ ಸಿಬಿಐ ವಾದಿಸಿದ್ದೇನು?