Advertisement

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

09:19 PM Dec 07, 2021 | Team Udayavani |

ಬೆಂಗಳೂರು: ದಲಿತರು ನಮಗೆ ಕೇವಲ ಮತಬ್ಯಾಂಕ್‌ ಅಲ್ಲ. ಅವರು ದೇಶದ ಅಭಿವೃದ್ಧಿಯ ಮತ್ತು ಆಡಳಿತದ ಪಾಲುದಾರರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಹೇಳಿದರು.

Advertisement

ಬೆಂಗಳೂರಿನ ಸೆವೆನ್‌ ಮಿನಿಸ್ಟರ್ಸ್‌ ಕ್ವಾರ್ಟರ್ಸ್‌ನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಎಸ್‌ ಸಿ ಮೋರ್ಚಾ ಪ್ರಮುಖರ ಜೊತೆ ಸಂವಾದ ನಡೆಸಿದ ಅವರು, ಪ್ರತಿಯೊಬ್ಬರೂ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಬೇಕೆಂಬ ಆಶಯ ಬಿಜೆಪಿಯದು. ಇದಕ್ಕಾಗಿಯೇ ಬಿಜೆಪಿಯು ಅಂಬೇಡ್ಕರರ ಸಾಧನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದೆ ಎಂದು ವಿವರಿಸಿದರು. ಮೊದಲನೇ ಭಾರತರತ್ನ ಪ್ರಶಸ್ತಿಯೇ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಸಿಗಬೇಕಿತ್ತು. ಇತಿಹಾಸದಲ್ಲಿ ಕೊಡಬೇಕಾದ ನ್ಯಾಯವನ್ನು ಕಾಂಗ್ರೆಸ್‌ ಪಕ್ಷ ಅವರಿಗೆ ನೀಡಲಿಲ್ಲ ಎಂದು ಹೇಳಿದರು.

ನವೆಂಬರ್‌ 26 ಸಂವಿಧಾನ ದಿನ. ಸಂವಿಧಾನ ಎಂದರೆ ಡಾ. ಅಂಬೇಡ್ಕರರ ಹೆಸರು ಬರುತ್ತದೆ ಎಂಬ ಕಾರಣಕ್ಕೆ ಅದನ್ನು ಮರೆಮಾಚುವ ಕೆಲಸ ಮಾಡಲಾಯಿತು. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಸರಕಾರವು ಡಾ. ಅಂಬೇಡ್ಕರ್‌ ಅವರ ಪಂಚಧಾಮಗಳನ್ನು ಪಂಚ ತೀರ್ಥ ಎಂದು ಘೋಷಿಸಿ ಅಭಿವೃದ್ಧಿ ಪಡಿಸಿದೆ. ಅವರು ಹುಟ್ಟಿದ ಜಾಗ ಮಧ್ಯಪ್ರದೇಶದ ಮಹುವಾ, ಬ್ಯಾರಿಸ್ಟರ್‌ ಪದವಿ ಪಡೆಯುವ ವೇಳೆ ವಾಸವಿದ್ದ ಲಂಡನ್ನಿನ ಮನೆಯನ್ನು ಗುರುತಿಸಿ ಖರೀದಿಸಿ ಸ್ಮಾರಕವಾಗಿ ಪರಿವರ್ತನೆ, ದೆಹಲಿಯ ಆಲಿಪುರ ರಸ್ತೆಯಲ್ಲಿ ಅವರು ಸಂವಿಧಾನಕ‚ತೃವಾಗಿ ವಾಸವಿದ್ದ ಮನೆಯಲ್ಲಿ ಸ್ಮಾರಕ, ಕರ್ಮಭೂಮಿ ನಾಗಪುರ ಮತ್ತು ಅಂತ್ಯಸಂಸ್ಕಾರ ನಡೆದ ಮುಂಬೈ- ಈ ಪಂಚಸ್ಥಳಗಳನ್ನು ಪಂಚಧಾಮವಾಗಿ ಅಭಿವೃದ್ಧಿಪಡಿಸುವ ಕೆಲಸವನ್ನು ಮೋದಿಯವರ ನೇತೃತ್ವದಲ್ಲಿ ಮಾಡಲಾಗಿದೆ.

ಒಂದು ಕುಟುಂಬದ ಹಿತಾಸಕ್ತಿಗಾಗಿ ಕಾಂಗ್ರೆಸ್‌ ನೇತಾಜಿ ಸುಭಾಸ್‌ಚಂದ್ರ ಭೋಸ್‌, ಸರ್ಧಾರ್‌ ವಲ್ಲಭಭಾಯಿ ಪಟೇಲ್‌ ಹಾಗೂ ಅಂಬೇಡ್ಕರ್‌ ಅವರಿಗೆ ಅನ್ಯಾಯ ಮಾಡಿತ್ತು. ಈಗ ಬಿಜೆಪಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ.

ಇದನ್ನೂ ಓದಿ:ಗೋವಾ: ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ಶಾಸಕ ರವಿ ನಾಯ್ಕ್ ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ

Advertisement

ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಪಕ್ಷದವರು ರಾಜಕಾರಣದಲ್ಲಿರುವ ದಲಿತರನ್ನು ಹೊಟ್ಟೆಪಾಡಿಗಾಗಿ ರಾಜಕೀಯದಲ್ಲಿದ್ದಾರೆ ಎನ್ನುವ ಮಾತೇ ಅವರ ಮನಸ್ಸಿನಲ್ಲಿರುವ ದಲಿತ ವಿರೋಧಿ ಭಾವನೆಗೆ ಸಾಕ್ಷಿಯಾಗಿದೆ. ಬಡವರಿಗೆ ಬಲ ತುಂಬಬೇಕು, ದಲಿತರಿಗೆ ಬಲ ಕೊಡಬೇಕೆಂಬ ಡಾ. ಅಂಬೇಡ್ಕರರ ಕನಸನ್ನು ನನಸು ಮಾಡಲು ಪ್ರಧಾನಿ ಮೋದಿಯವರ ಜನಧನ್‌, ಆಯುಸ್ಮಾನ್‌ ಭಾರತ, ಸ್ಟಾರ್ಟಪ್‌, ಮುದ್ರಾ ಸೇರಿದಂತೆ ಪ್ರತಿಯೊಂದು ಯೋಜನೆಗಳು ನನಸು ಮಾಡುತ್ತಿವೆ ಎಂದು ಹೇಳಿದರು.

ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಎಂ. ಕುಮಾರ್‌, ಪದಾಧಿಕಾರಿಗಳು, ಮುಖಂಡರು ಸಂವಾದದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next