Advertisement

ದಲಿತ ಮುಖಂಡರ ಬಂಧನ ಖಂಡಿಸಿ ಮನವಿ ಸಲ್ಲಿಕೆ

03:39 PM Jan 19, 2018 | |

ಶಹಾಪುರ: ಕಲಬುರಗಿ ನಗರಕ್ಕೆ ಆಗಮಿಸಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಪ್ರವೇಶಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಿದ ದಲಿತ ಮುಖಂಡರ ಬಂಧನ ಖಂಡಿಸಿ, ಇಲ್ಲಿನ ದಲಿತ ಸೇನೆ ತಹಶೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು.

Advertisement

ಮುಖಂಡ ಶರಣರಡ್ಡಿ ಹತ್ತಿಗೂಡೂರ ಮಾತನಾಡಿ, ಕೇಂದ್ರ ಸಚಿವರು ಈಚೆಗೆ ನೀಡಿದ ಸಂವಿಧಾನ ಬದಲಾವಣೆ ಹೇಳಿಕೆಗೆ ಸಂಬಂಧಿ ಸಿದಂತೆ ಕಲಬುರಗಿಗೆ ಆಗಮಿಸಿದ ಅನಂತಕುಮಾರ ಹೆಗಡೆ ಅವರ ವಿರುದ್ಧ ಪ್ರತಿಭಟನೆ ನಡೆಸಿದ ದಲಿತ ಮುಖಂಡರನ್ನು ಬಂಧಿಸಿದ್ದು, ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು. ಸಚಿವ ಹೆಗಡೆ ಅವರ ವಿರುದ್ಧ ಕಪ್ಪು ಪಟ್ಟಿ ಪ್ರದರ್ಶನ ಮಾಡಿರುವುದು ಮಹಾ ಅಪರಾಧವಲ್ಲ. ಅವರ ಹೇಳಿಕೆ ಮಹಾ ಅಪರಾಧವಾಗಿದೆ. ಅದರ ಅರಿವು ಸಚಿವ ಹೆಗಡೆ ಅವರಿಗೆ ಇರಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ವಿಠ್ಠಲ್‌ ದೊಡ್ಡಮನಿ, ದಲಿತಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ಜನವಾದಿ ಮಹಿಳಾ ಸಂಘಟನೆ ರಾಜ್ಯಾಧ್ಯಕ್ಷೆ ಕೆ.ನೀಲಾ ಅವರನ್ನು ಬಂಧಿಸಿದ್ದು, ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಅನಸೂರ, ಮರಿಲಿಂಗ ಅನವಾರ, ಬಸವರಾಜ ಅಗಸ್ತಿಹಾಳ, ನಿಂಗಪ್ಪ ಭಂಡಾರಿ, ಪರಶುರಾಮ ಹೈಯಾಳ (ಕೆ), ಬಸಪ್ಪ ಭಂಡಾರಿ, ನಿಂಗಣ್ಣ ಕರಡಿ, ಯಲ್ಲಪ್ಪ ವಡಗೇರಾ, ಪರಶುರಾಮ ತುಮಕೂರ,
ರೆಡ್ಡಿ ಯಕ್ಷಂತಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next