Advertisement

ನಿವೇಶನ ದಾಖಲಾತಿ ನೀಡಲು ದಲಿತ ಸಮಿತಿ ಒತ್ತಾಯ-ಮನವಿ

05:37 PM Mar 24, 2022 | Team Udayavani |

ಸುರಪುರ: ಸಂಘಟನೆ ಕಾರ್ಯಾಲಯಕ್ಕೆ ಮೀಸಲಿಟ್ಟ ನಿವೇಶನದ ದಾಖಲಾತಿ ನೀಡುವುದು ಸೇರಿದಂತೆ ಇತರೆ ಬೇಡಿಕೆ ಈಡೇರಿಸಲು ಒತ್ತಾಯಿಸಿ ದಲಿತ ಸಂಘಟನೆ (ಕ್ರಾಂತಿಕಾರಿ) ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟಿಸಿದರು.

Advertisement

ಸಮಿತಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ನಗರದ ಪೊಲೀಸ್‌ ಠಾಣೆ ಎದುರಿಗಿನ ಸಂಘಟನೆ ಕಾರ್ಯಾಲಯಕ್ಕೆ ಮೀಸಲಿಟ್ಟ ನಿವೇಶನಕ್ಕೆ ಆಸ್ತಿ ನಂಬರ್‌ ಕೊಟ್ಟು ಖಾತಾ ನಕಲು ಕೊಡಲು ಮನವಿ ಸಲ್ಲಿಸಲಾಗಿತ್ತು. ನಿವೇಶನದಲ್ಲಿರುವ ವಿದ್ಯುತ್‌ ಕಂಬ ತೆರವು ಗೊಳಿಸುವಂತೆ ಸಾಕಷ್ಟು ಮನವಿ ಮಾಡದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

2006ರಲ್ಲಿ ನಿವೇಶನ ಮೀಸಲಿಟ್ಟು ಮಂಜೂರು ಮಾಡಲಾಗಿದೆ. ಅದಕ್ಕೆ ಇದುವರೆಗೂ ಆಸ್ತಿ ನಂಬರ್‌ ನೀಡಿಲ್ಲ. ಖಾತಾ ನಕಲು ನೀಡುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸಹಾಯಕ ಆಯುಕ್ತರು ಪೌರಾಯುಕ್ತರಿಗೆ ಆದೇಶಿಸಿದ್ದಾರೆ. ಪೌರಾಯುಕ್ತರು ದಾಖಲೆ ನೀಡುತ್ತಿಲ್ಲ ನಿವೇಶನಕ್ಕೆ ಸಂಬಂಧಪಟ್ಟಂತೆ ತ್ವರಿತವಾಗಿ ದಾಖಲೆ ನೀಡಬೇಕು. ನಿವೇಶನ ಸುತ್ತಲೂ ಕಾಂಪೌಂಡ್‌ ಗೋಡೆ ನಿರ್ಮಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಗ್ರೇಡ್‌-2 ತಹಸೀಲ್ದಾರ್‌ ಮಲ್ಲಯ್ಯ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಮಾನಪ್ಪ ಬಿಜಾಪುರ, ಜಟ್ಟೆಪ್ಪ ನಾಗರಾಳ, ಮರಿಲಿಂಗಪ್ಪ ನಾಟೇಕಾರ, ಮೂರ್ತಿ ಬೊಮ್ನಳ್ಳಿ, ಕಾಳಿಂಗ ಕಲ್ಲದೇವನಳ್ಳಿ, ಬಸವರಾಜ ದೊಡ್ಮನಿ, ಖಾಜಾ ಹುಸೇನ್‌ ಗುಡುಗುಂಟಿ, ರಾಮಣ್ಣ ಬಬಲಾದ, ಹನೀಫ್‌ ಗುಡುಗುಂಟಿ, ಮರಿಲಿಂಗ ದೇವಿಕೇರಿ, ಮಹೇಶ ಯಾದಗಿರಿ, ಭೀಮಪ್ಪ, ಭೀಮಣ್ಣ ಮಾಲಗತ್ತಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next