Advertisement

Politics: “ದಲಿತ ಸಿಎಂ” ಚರ್ಚೆ ಆಗಿಲ್ಲ: ಸತೀಶ

09:24 PM Oct 29, 2023 | Team Udayavani |

ಗಂಗಾವತಿ: ಗೃಹ ಸಚಿವ ಪರಮೇಶ್ವರ ಮನೆಯಲ್ಲಿ ನಾವು ದಲಿತ ಸಿಎಂ ಬಗ್ಗೆ ಚರ್ಚಿಸಿಲ್ಲ. ಆದರೆ, ಈ ಕುರಿತು ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ತಾಲೂಕಿನ ಆನೆಗೊಂದಿಯಲ್ಲಿ ನಡೆದ ವಾಲ್ಮೀಕಿ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಬೆಳಗಾವಿ ರಾಜಕೀಯದ ಕುರಿತು ವಿಶ್ಲೇಷಣಾತ್ಮಕ ವರದಿಗಳು ಬರುತ್ತಿವೆ. ಆದರೆ, ಬೆಳಗಾವಿಯಲ್ಲಿ ಎಲ್ಲವೂ ಸರಿ ಇದೆ. ನಮ್ಮ ತಂಡದ ಪ್ರವಾಸಕ್ಕೂ ರಾಜಕೀಯಕ್ಕೂ ಏನೂ ಸಂಬಂಧವಿಲ್ಲ.

Advertisement

ದಲಿತ ಸಿಎಂ ಬಗ್ಗೆ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸದ್ಯ ಸಿಎಂ ಆಗಿದ್ದಾರೆ. ನಾನು ಯಾರ ಮೇಲೂ ಸಿಟ್ಟಾಗಿಲ್ಲ. ನಾನೇ ಹೆಡ್‌ ಆಫ್ ದಿ ಡಿಪಾರ್ಟ್‌ಮೆಂಟ್‌, ನಾನೇಕೆ ಬೇರೆಯವರ ಮೇಲೆ ಸಿಟ್ಟಾಗಲಿ. ನಾನೇ ಎಲ್ಲಾ ಸರಿ ಮಾಡುತ್ತೇನೆ. ನಮ್ಮ ಆಂತರಿಕ ವಿಚಾರಗಳನ್ನು ಹೊರಗಡೆ ಹೇಳಬೇಡಿ ಅಂತ ಡಿಸಿಎಂ ಡಿಕೆಶಿ ಹೇಳಿದ್ದಾರೆ. ಈ ಹಂತದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಉತ್ತರ ಕೊಡಲು ಆಗಲ್ಲ.

ಅದರ ಬಗ್ಗೆ ಉತ್ತರ ಕೊಡುವವರು ನಮ್ಮ ಹೈಕಮಾಂಡ್‌. ನಮಗೆ ಅಧಿಕಾರ ಇಲ್ಲ. ನಿಗಮ-ಮಂಡಳಿಗಳಿಗೆ ನೇಮಕ ವಿಚಾರ ಹೈಕಮಾಂಡ್‌, ಸಿಎಂ, ಡಿಸಿಎಂ ನೋಡಿಕೊಳ್ಳುತ್ತಾರೆ. ಎಸ್ಟಿ ಮೀಸಲಾತಿ ಶೇ. 7.5 ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಪೀಠದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ದಶಕಗಳ ಹೋರಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮೀಸಲು ಹೆಚ್ಚಿಸಲು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ. ಕೇಂದ್ರ ಸರ್ಕಾರ ಸಂವಿಧಾನದ ಶೆಡ್ನೂಲ್‌ 9ಕ್ಕೆ ತಿದ್ದುಪಡಿ ಮಾಡಬೇಕಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಕೇಂದ್ರದ ಮೇಲೆ ಒತ್ತಡ ಹಾಕಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next