ವಿಜಯಪುರ: ದೇಶದಲ್ಲಿ ದಲಿತ ಮುಖ್ಯಮಂತ್ರಿ ಹೆಸರಿನಲ್ಲಿ ದಲಿತರ ಮನಸ್ಸನ್ನು ಒಡೆದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೃತ್ಯ. ಇದು ಎಲ್ಲ ಪಕ್ಷಗಳಲ್ಲೂ ನಡೆಯುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಆತಂಕ ವ್ಯಕ್ತಪಡಿಸಿದರು.
ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತ ಮುಖ್ಯಮಂತ್ರಿ ಮಾಡುವ ಅವಕಾಶ ಈಗ ಬಿಜೆಪಿ ಪಕ್ಷಕ್ಕಿದೆ. ಅವರು ಮಾಡಿ ತೋರಸಲಿ. ಅಧಿಕಾರದಲ್ಲೇ ಇಲ್ಲದ ಕಾಂಗ್ರೆಸ್ ಪಕ್ಷಕ್ಕೆ ದಲಿತ ಮುಖ್ಯಮಂತ್ರಿ ಘೋಷಿಸಿ ಎಂದು ಹೇಳುವುದು ಸರಿಯಾದ ಕ್ರಮವಲ್ಲ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ:ಯಡಿಯೂರಪ್ಪ ರಾಜೀನಾಮೆ: ಮುಂದಿನ ನಡೆಯೇನು? ಪುತ್ರರ ಭವಿಷ್ಯವೇನು?
ಸಂವಿಧಾನದಲ್ಲಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಮುಖ್ಯಮಂತ್ರಿ ಎಂದೆಲ್ಲ ಹೇಳಿಲ್ಲ. ಅಹಿಂದ ಸಮುದಾಯದ ಬಿ.ಬಸವಲಿಂಗಪ್ಪ, ಕೆ.ಎಚ್. ರಂಗನಾಥ, ನಜೀರಸಾಬ್ ಅವರೆಲ್ಲ ಅರ್ಹತೆಯಿಂದ ರಾಜಕೀಯ ಅಧಿಕಾರ ಪಡೆದವರೇ ಹೊರತು, ಜಾತಿಯ ಮೀಸಲು ಅವಕಾಶದಿಂದ ಅಲ್ಲ ಎಂದು ವಿವರಿಸಿದರು.
ಇದನ್ನೂ ಓದಿ:ಕೌನ್ ಬನೇಗಾ ಕರ್ನಾಟಕ ಸಿಎಂ ?